ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ತಾರಾದಂಪತಿ ಐಂದ್ರಿತಾ ರೇ ಮತ್ತು ದಿಗಂತ್ಗೆ ಸಿಸಿಬಿ ನೊಟೀಸ್ ಜಾರಿ ಮಾಡಿದೆ.
ಸದ್ಯ ಈ ದಂಪತಿ ಬೆಂಗಳೂರಿನಲ್ಲಿ ಇಲ್ಲ. ಹಾಗಾಗಿ ಬುಧವಾರ ಬೆಳಗ್ಗೆ ಸಿಸಿಬಿ ಕಚೇರಿಗೆ ಬರುತ್ತಾರೋ ಇಲ್ಲವೋ? ಡ್ರಗ್ಸ್ ಕೇಸ್ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ನಟ-ನಟಿ ಇಬ್ಬರೂ ಎಸ್ಕೇಪ್ ಆಗಿದ್ದಾರೆ, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಸುದ್ದಿ ಇಂದು ಮಧ್ಯಾಹ್ನ ಹರಿದಾಡಿತ್ತು. ಇದರ ಬೆನ್ನಲ್ಲೇ ನೋಟಿಸ್ ಬಗ್ಗೆ ಸ್ವತಃ ನಟಿ ಐಂದ್ರಿತಾ ಅವರೇ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿರಿ ಫಾಝಿಲ್ ಕ್ಯಾಸಿನೋ ಪಾರ್ಟಿಯಲ್ಲಿ ಐಂದ್ರಿತಾ ರೇ, ಈ ಬಗ್ಗೆ ನಟಿ ಹೇಳಿದ್ದೇನು?
'ಸಿಸಿಬಿ ಜಾರಿ ಮಾಡಿರುವ ನೋಟಿಸ್ ಅನ್ನು ವಾಟ್ಸ್ಆ್ಯಪ್ ಮೂಲಕ ಸ್ವೀಕರಿಸಿದ್ದೇವೆ. ನಾಳೆ(ಬುಧವಾರ) ಬೆಳಗ್ಗೆ 11 ಗಂಟೆಗೆ ಸಿಸಿಬಿ ಕಚೇರಿ ನಾವಿಬ್ಬರೂ ಆಗಮಿಸಲಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ' ಎಂದು 'ಮನಸಾರೆ' ಬೆಡಗಿ ಐಂದ್ರಿತಾ ಟ್ವೀಟ್ ಮಾಡಿದ್ದಾರೆ.
ಇನ್ನು ದ್ವಿಗ್ವಿಜಯ ನ್ಯೂಸ್ ಜತೆ ಫೋನ್ನಲ್ಲಿ ಮಾತನಾಡಿದ ದಿಗಂತ್, 'ನಾವು ಎಲ್ಲೂ ತಲೆಮರೆಸಿಕೊಂಡಿಲ್ಲ. ನಾಳೆ ಬೆಂಗಳೂರಿಗೆ ಬರುತ್ತಿದ್ದೇವೆ' ಎಂದು ಸ್ಪಷ್ಟಪಡಿಸಿದರು.