ನ್ಯೂಸ್

ಚಾಕಲೇಟ್‌ ಕೇಳಿದ್ದಕ್ಕೆ 8 ವರ್ಷದ ಮಗಳನ್ನೇ ಹತ್ಯೆಗೈದ ತಂದೆ

ಇಂದೋರ್: ಚಾಕಲೇಟ್‌ ಕೇಳಿದ್ದಕ್ಕೆ ಸ್ವಂತ ಮಗಳನ್ನೇ ಕೊಲೆಮಾಡಿರುವ ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ.

ಮೃತ ಬಾಲಕಿ ಹಾಗೂ ಆರೋಪಿ ಹೆಸರನ್ನು ಬಹಿರಂಗಪಡಿಸದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ 31 ವರ್ಷದ ತಂದೆಯನ್ನು ಬಂಧಿಸಲಾಗಿದೆ.

ಆರೋಪಿಯು ಮಾದಕ ವ್ಯಸನಿಯಾಗಿದ್ದು ಬಡತನದಿಂದ ಬಳಲುತ್ತಿದ್ದ. ಆದರೆ ಆತನ ಮಗಳು ಪದೇ ಪದೇ ಚಾಕಲೇಟ್​ ಹಾಗೂ ಆಟಿಕೆಗಳನ್ನು ತಂದು ಕೊಡುವಂತೆ ಕೇಳುತ್ತಿದ್ದಳು. ಇದು ಆತನಿಗೆ ಕಿರಿಕಿರಿ ಎನಿಸಿ ಈ ಸಮಸ್ಯೆಯಿಂದ ಪಾರಾಗಲು ಬಯಸಿದ್ದ.

ಈ ಕುರಿತು ಮಾತನಾಡಿದ ಪೊಲೀಸರು, ಆರೋಪಿಯು ತನ್ನ ಮಗಳನ್ನು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಳಿ ಕರೆದೊಯ್ದು ಆಕೆಯ ತಲೆಯನ್ನು ಹೆಂಚು ಮತ್ತು ಕಲ್ಲುಗಳಿಂದ ಜಜ್ಜಿ ಕೊಂದಿದ್ದಾನೆ. ಆರೋಪಿಯ ಪತ್ನಿ ಮೂರು ವರ್ಷಗಳ ಹಿಂದೆ ಆತನನ್ನು ತೊರೆದಿದ್ದಳು ಎಂದು ಹೇಳಿದ್ದಾರೆ.(ಏಜೆನ್ಸೀಸ್​)