ನ್ಯೂಸ್

ಗಾಳಿಯಲ್ಲಿ ಗುಂಡು ಹಾರಿಸಿ ಜಾತ್ರೆಗೆ ಚಾಲನೆ ನೀಡಿದ ಸ್ವಾಮೀಜಿ!

ಬೀದರ್: ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಬಸವತೀರ್ಥ ಮಠದ ಜಾತ್ರಾ ಮಹೋತ್ಸವಕ್ಕೆ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಡಾ.ಸಿದ್ದಗಲಿಂಗ ಮಹಾಸ್ವಾಮಿಗಳು ಚಾಲನೆ ನೀಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ‌ ನೀಡಲಾಗಿದೆ. ಇದೀಗ ಜಾತ್ರೆಗೆ ಚಾಲನೆ ನೀಡಲು ಗಾಳಿಯಲ್ಲಿ ಗುಂಡು ಹಾರಿಸುವ ಅವಕಾಶ ಇದೆಯಾ.? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಮೊತ್ತೊಂದೆಡೆ, ಬಸವತೀರ್ಥ ಮಠದ ಸ್ವಾಮೀಜಿ ಬೆಂಬಲಿಗರು ಹಾಗೂ ತಾಂಡ ಜನರ ಮದ್ಯ ಆಸ್ತಿ ವಿಷಯಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ. ಸೋಮುಲುನಾಯಕ ತಾಂಡದ ಆಸ್ತಿ ಕಬಳಿಸುವ ವೇಳೆ ವೇಳೆ ಗಲಾಟೆ ನಡೆದಿದೆ. ತಾಂಡಾ ಜನರ ಮೇಲೆ ಸ್ವಾಮೀಜಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ. ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನ ಸೋಮಲುನಾಯಕ ಕಲ್ಲೂರ್ ತಾಂಡದಲ್ಲಿ ಘಟನೆ ನಡೆದಿದೆ.