ನ್ಯೂಸ್

ಮದುವೆ, ಈವೆಂಟ್‌ನಲ್ಲಿ ಡ್ರೋನ್, ಪಟಾಕಿ ಬ್ಯಾನ್: ಆದೇಶ ನೀಡಿದ ಹರ್ಷ ಸಂಘವಿ| Gujarat Govt

Gujarat Govt: ಭಾರತ ಮತ್ತು ಪಾಕಿಸ್ತಾನ ಯುದ್ಧ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಮದುವೆಯಲ್ಲಿ ಡ್ರೋನ್, ಕಾರ್ಯಕ್ರಮಗಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಗುಜರಾತಿನ ಗೃಹ ಸಚಿವ ಹರ್ಷ ಸಂಘವಿ ಆದೇಶ ನೀಡಿದ್ದಾರೆ.

ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಪಾಕಿಸ್ತಾನ ಭಾರತದ ಮೇಲೆ ಸತತ ಡ್ರೋನ್, ಕ್ಷಿಪಣಿ ದಾಳಿ ನಡೆಸುತ್ತಿದೆ. ಆದರೆ ಇದಕ್ಕೆ ಪ್ರತ್ಯುತ್ತರ ನೀಡುತ್ತ ಭಾರತ ಪಾಕ್​​ ದಾಳಿಯನ್ನು ವಿಫಲಗೊಳಿಸುತ್ತಿದೆ. ಹೀಗಾಗಿ ಗಡಿಯಲ್ಲಿ ಯುದ್ಧ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಮದುವೆಯಲ್ಲಿ ಮೇ.15ರ ವರೆಗೆ ಡ್ರೋನ್, ಕಾರ್ಯಕ್ರಮಗಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಆದೇಶಿಸಿದ್ದಾರೆ.

ಈ ತಿಂಗಳ 15 ರವರೆಗೆ ಯಾವುದೇ ಕಾರ್ಯಕ್ರಮಗಳಲ್ಲಿ ಅ ಪಟಾಕಿ ಅಥವಾ ಡ್ರೋನ್‌ಗಳನ್ನು ಅನುಮತಿಸಲಾಗುವುದಿಲ್ಲ. ದಯವಿಟ್ಟು ಸಹಕರಿಸಿ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಿ ಎಂದು ಗುಜರಾತ್ ಗೃಹ ಸಚಿವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.

ಗುರುವಾರ ಪಾಕಿಸ್ತಾನ ನಡೆಸಿದ ದೊಡ್ಡ ಪ್ರಮಾಣದ ಡ್ರೋನ್ ದಾಳಿ ವಿಫಲವಾದ ನಂತರ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರ ರಾಜಧಾನಿಯಲ್ಲಿ ರಕ್ಷಣಾ ಸಚಿವಾಲಯವನ್ನು ಹೊಂದಿರುವ ಸೌತ್ ಬ್ಲಾಕ್‌ನಲ್ಲಿ ದೇಶದ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಪರಿಶೀಲನೆ ನಡೆಸಿದರು.

ಪಾಕಿಸ್ತಾನದ ಸತತ ದಾಳಿ ನಡೆಯುತ್ತಿದೆ. ಹೀಗಾಗಿ ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಬಾಂಬ್, ಮಿಸೈಲ್, ಗುಂಡಿನ ಶಬ್ದಗಳು ಕೇಳಿಸುತ್ತಲೇ ಇದೆ. ಇದಕ್ಕೆ ತಕ್ಕಂತೆ ಸೈರನ್ ಮೂಲಕ ಜನರನ್ನು ಎಚ್ಚರಿಸಲಾಗುತ್ತದೆ. ಇದರ ನಡುವೆ ಪಟಾಕಿ ಶಬ್ದಗಳು ಜನರ ಆತಂಕ ಹೆಚ್ಚಿಸುತ್ತದೆ. ಇಷ್ಟೇ ಅಲ್ಲ ಗೊಂದಲ ಸೃಷ್ಟಿಸುತ್ತದೆ. ಹೀಗಾಗಿ ಪಟಾಕಿ ಬ್ಯಾನ್ ಮಾಡಲಾಗಿದೆ.

ಪಾಕಿಸ್ತಾನದ ಸತತ ದಾಳಿ ನಡೆಯುತ್ತಿದೆ. ಹೀಗಾಗಿ ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ರಾಜ್ಯಗಳಲ್ಲಿ ಬಾಂಬ್, ಮಿಸೈಲ್, ಗುಂಡಿನ ಶಬ್ದಗಳು ಕೇಳಿಸುತ್ತಲೇ ಇದೆ. ಹೀಗಾಗಿ ಪಟಾಕಿ ಬ್ಯಾನ್ ಮಾಡಲಾಗಿದೆ. (ಏಜೆನ್ಸೀಸ್​)