ನವದೆಹಲಿ: ಗುಡ್ಡಗಾಡು, ಒಳನಾಡು ಮುಂತಾದ ಸಾರಿಗೆ ಸಂಪರ್ಕ ಕಷ್ಟಸಾಧ್ಯವಾದ ಪ್ರದೇಶಗಳಿಗೆ ಡ್ರೋನ್ ಮೂಲಕ ಕರೊನಾ ಲಸಿಕೆ ಪೂರೈಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಕಾನ್ಪುರ ನಡೆಸಿದ ಅಧ್ಯಯನದ ಆಧಾರದಲ್ಲಿ ಮಾನವರಹಿತ ವೈಮಾನಿಕ ವಾಹನ (ಯುಎವಿ) ಬಳಸಲು ಕೇಂದ್ರ ಮುಂದಾಗಿದೆ. ಇದಕ್ಕಾಗಿ ಬಿಡ್ ಆಹ್ವಾನಿಸಿದೆ. ಆಯ್ದ ಸ್ಥಳಗಳಿಗೆ ಯುಎವಿ ಮೂಲಕ ಲಸಿಕೆ ಸರಬರಾಜು ಮಾಡಲು ಎಚ್ಎಲ್ಎಲ್ ಇನ್್ರಾ ಟೆಕ್ ಸರ್ವೀಸಸ್, ಭಾರತೀಯ ವೈದ್ಯಕಿಯ ಸಂಶೋಧನಾ ಮಂಡಳಿ (ಐಸಿಎಂಆರ್) ಪರವಾಗಿ ಎಕ್ಸ್ ಪ್ರೆಷನ್ ಆ್ ಇಂಟರೆಸ್ಟ್ (ಇಒಐ) ಆಹ್ವಾನಿಸಿದೆ. ಎಚ್ಎಲ್ಎಲ್ ಇನ್್ರಾ ಟೆಕ್, ಸರ್ಕಾರಿ ಸ್ವಾಮ್ಯದ ಎಚ್ಎಲ್ಎಲ್ ಲ್ೈಕೇರ್ನ ಸಬ್ಸಿಡಿಯರಿ ಆಗಿದೆ. ಕರೊನಾ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹರಡಿದ್ದರಿಂದ ಲಸಿಕೆ ಅಭಿಯಾನವನ್ನೂ ಅಲ್ಲಿಗೂ ತಲುಪಿಸುವುದು ಅಗತ್ಯವಾಗಿದೆ.ಆದ್ದರಿಂದ ಗುಡ್ಡಗಾಡು ಹಾಗೂ ಪ್ರಯಾಣ ಅಸಾಧ್ಯವಾದಂಥ ಪ್ರದೇಶಗಳಿಗೂ ಲಸಿಕೆ ತಲುಪಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಡ್ರೋನ್ ಬಳಕೆಯ ಚಿಂತನೆ ನಡೆಸಲಾಗಿದೆ. ಇದುವರೆಗೆ ತೆಲಂಗಾಣ ಮಾತ್ರ ಲಸಿಕೆ ಸಾಗಿಸಲು ಯುಎವಿ ಬಳಸುವ ಆಲೋಚನೆ ನಡೆದಿದೆ.
ಮಾನದಂಡ
* ಯುಎವಿಗೆ 35 ಕಿಲೋ ಮೀಟರ್ ದೂರದವರೆಗೆ ಪ್ರಯಾಣಿಸಿ ಲಸಿಕೆ ಪೂರೈಸುವ ಸಾಮರ್ಥ್ಯವಿರಬೇಕು. ಅದು ಕನಿಷ್ಠ 100 ಮೀಟರ್ ಎತ್ತರ ಹಾರಬಲ್ಲ ಸಾಮರ್ಥ್ಯ ಹೊಂದಿರಬೇಕು.
* ಜೂನ್ 22ರೊಳಗೆ ಬಿಡ್ ಸಲ್ಲಿಸುವಂತೆ ಸೂಚಿಸಲಾಗಿದೆ.
* ಯುಎವಿ ಕನಿಷ್ಠ ನಾಲ್ಕು ಕಿಲೋ ಗ್ರಾಂ ತೂಕದ ವಸ್ತುಗಳನ್ನು ಒಯ್ಯಬೇಕು. ಸಾಮಗ್ರಿಯನ್ನು ಸುರತವಾಗಿ ತಲುಪಿಸಿದ ನಂತರ ನಿರ್ದೇಶಿತ ಸ್ಥಳಕ್ಕೆ ಮರಳಬೇಕು.
* ಯುಎವಿ ಟೇಕ್ಆ್ ಮತ್ತು ಲ್ಯಾಂಡಿಂಗ್ಗೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿ ಅನ್ವಯವಾಗುತ್ತದೆ. ಪ್ಯಾರಾಚೂಟ್ ಆಧರಿತ ಡೆಲಿವರಿಗೆ ಆದ್ಯತೆ ಇಲ್ಲ.
18ರಿಂದ ಪರೀಾರ್ಥ ಹಾರಾಟ
ಭಾರತದ ಪ್ರಥಮ ಅಧಿಕೃತ ಬಿಯಾಂಡ್ ವಿಜುವಲ್ ಲೈನ್ ಆ್ ಸೈಟ್ (ಬಿವಿಎಲ್ಒಎಸ್) ವೈದ್ಯಕಿಯ ಡ್ರೋನ್ ಡೆಲಿವರಿ ಪರೀಾರ್ಥ ಪ್ರಯೋಗ ಜೂನ್ 18ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಆರಂಭವಾಗಲಿದೆ. ಸುಮಾರು 30ರಿಂದ 45 ದಿನ ಕಾಲ ಪರೀೆ ನಡೆಸಲಾಗುತ್ತದೆ. ಪರೀೆ ನಡೆಸಲು ಬೆಂಗಳೂರಿನ ಥ್ರಾಟಲ್ ಏರೋಸ್ಪೇಸ್ ಸಿಸ್ಟಂ (ಟಿಎಎಸ್) ನೇತೃತ್ವದ ಕಂಪನಿಗಳ ಕೂಟಕ್ಕೆ ಡಿಜಿಸಿಎ ಅನುಮತಿ ನೀಡಿದೆ. ವಸ್ತುಗಳ ಸಾಗಾಟದ ಪರೀಾರ್ಥ ಹಾರಾಟ ನಡೆಸಲು 2020ರ ಮಾರ್ಚ್ನಲ್ಲೇ ಟಿಎಎಸ್ಗೆ ಅನುಮತಿ ಸಿಕ್ಕಿತ್ತು. ಆದರೆ, ಕರೊನಾ ಸಾಂಕ್ರಾಮಿಕತೆ ಉಲ್ಬಣಿಸಿದ್ದರಿಂದ ಸಂಬಂಧಪಟ್ಟ ಏಜೆನ್ಸಿಗಳಿಂದ ಅನುಮತಿ ಸಿಗುವುದು ವಿಳಂಬವಾಗಿತ್ತು. ಖ್ಯಾತ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಈ ಪ್ರಯೋಗಕ್ಕೆ ಬೆಂಬಲ ನೀಡಿರುವುದಲ್ಲದೆ ಕೂಟದೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ಟ್ರಯಲ್ ಅವಧಿಯಲ್ಲಿ ಸಾಗಿಸುವ ಔಷಧಗಳನ್ನು ನಾರಾಯಣ ಹೆಲ್ತ್ ಪೂರೈಸಲಿದೆ.