Drone Attack: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲು ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಮೇಲೆ ಇಂದು(ಗುರುವಾರ, ಮೇ.8) ಡ್ರೋನ್ ದಾಳಿಯಾಗಿದೆ.
ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೇ 8 ರಂದು ರಾತ್ರಿ 8 ಗಂಟೆಗೆ ಪೇಶಾವರ್ ಝಲ್ಮಿ vs ಕರಾಚಿ ಕಿಂಗ್ಸ್ ಪಂದ್ಯ ನಡಯಬೇಕಿತ್ತು. ಆದರೆ ಪಂದ್ಯ ನಡೆಯುವ ಕೆಲವೇ ಗಂಟೆಗಳ ಮೊದಲೇ ಕ್ರೀಡಾಂಗಣ ಕಟ್ಟಡದ ಮೇಲೆ ಡ್ರೋನ್ ಅಪಘಾತವು ಆಟಗಾರರು ಮತ್ತು ಪ್ರೇಕ್ಷಕರ ಸುರಕ್ಷತೆಯ ಬಗ್ಗೆ ಭಯ ಮೂಡಿಸಿದೆ.
ಈ ದಾಳಿ ನಡೆದ ಬೆನ್ನಲ್ಲೇ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ ರಾವಲ್ಪಿಂಡಿಯನ್ನು ಬಿಟ್ಟು ಹೊರಡುವಂತೆ ಪಾಕ್ ಕ್ರಿಕೆಟಿಗರಿಗೆ ಆದೇಶಿಸಿದೆ. ಹೀಗಾಗಿ ಇಂದು ನಡೆಯಬೇಕಿದ್ದ ಪಿಎಸ್‌ಎಲ್ ಟೂರ್ನಿ ರದ್ದಾಗಿದೆ. ಪಾಕಿಸ್ತಾನದ ಪ್ರಮುಖ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ರಾವಲ್ಪಿಂಡಿ ಕೂಡ ಒಂದು.
ಪಹಲ್ಗಾಮ್ನಲ್ಲಿ ಉಗ್ರರ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಭಾರತದ ಆಪರೇಷನ್ ಸಿಂಧೂರ ಬಳಿಕ ಪಾಕ್ ಭಾರತದ 15 ಪ್ರಮುಖ ಸ್ಥಳಗಳ ಮೇಲೆ ಅಟ್ಯಾಕ್ ಮಾಡಲು ಪ್ರಯತ್ನಿಸಿ ವಿಫಲವಾಗಿದೆ. (ಏಜೆನ್ಸೀಸ್)