Tamil Nadu: ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿಂದ್ದಂತೆ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಶುಕ್ರವಾರ ( ಮೇ.23) ನಡೆದಿದೆ.
ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಬಸ್ಸಿನ ಚಾಲಕನಿಗೆ ಹೃದಯಾಘಾತವಾಗಿದ್ದು, ಎಚ್ಚರದಿಂದಿದ್ದ ಕಂಡಕ್ಟರ್ ಪ್ರಯಾಣಿಕರಿಗಾಗುವ ಅಪಘಾತವನ್ನು ತಪ್ಪಿಸಿದ್ದಾರೆ.
ಇದನ್ನೂ ಓದಿ: ʼಮೈಸೂರು ಸ್ಯಾಂಡಲ್ ಸೋಪ್ಗೆ ರಾಯಭಾರಿ ಬೇಕಿರಲಿಲ್ಲʼ; ತಮನ್ನಾ ಆಯ್ಕೆಯನ್ನು ಟೀಕಿಸಿದ ನಟಿ ರಮ್ಯಾ | Social Media Post
ಬಸ್ಸಿನಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವೀಡಿಯೊದಲ್ಲಿ, ಚಾಲಕನಿಗೆ ಸಹಾಯ ಮಾಡಲು ಕಂಡಕ್ಟರ್ ಮತ್ತು ಪ್ರಯಾಣಿಕರು ಧಾವಿಸಿದ್ದಾರೆ, ಆದರೆ ಹೃದಯಾಘಾತದಿಂದ ಬಸ್ ನಿಯಂತ್ರಣ ಕಳೆದುಕೊಂಡ ಚಾಲಕ ಮೂರ್ಛೆ ಹೋಗಿದ್ದಾರೆ.
ಪ್ರಯಾಣಿಕರು ಚಾಲಕನ ಸಹಾಯಕ್ಕೆ ಬರುತ್ತಿದ್ದಂತೆ ಕಂಡಕ್ಟರ್ ಸಕಾಲದಲ್ಲಿ ಬಂದು ತುರ್ತು ಬ್ರೇಕ್ ಹಾಕಿ ಅಪಾಯದಿಂದ ಪಾರುಮಾಡಿದ್ದಾರೆ.
ಪುದುಕೊಟ್ಟೈ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ಸಿನ ಚಾಲಕನಾದ ಪ್ರಭು ಕೂಡಲೇ ಕಂಡಕ್ಟರ್‌ಗೆ ಕರೆ ಮಾಡಿ, ತನಗೆ ತೀವ್ರ ಎದೆ ನೋವು ಬರುತ್ತಿದೆ ಎಂದು ಸೂಚಿಸಲು ಪ್ರಯತ್ನಿಸಿದರು, ಆದರೆ ಯಾರೂ ಪ್ರತಿಕ್ರಿಯಿಸುವ ಮೊದಲೇ ಪ್ರಭು ಮೂರ್ಛೆ ಹೋದರು.
ಚಾಲಕ ಪ್ರಜ್ಞೆ ತಪ್ಪಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದನ್ನು ಕಂಡ ಕಂಡಕ್ಟರ್ ನೋಡಿದ ತಕ್ಷಣ ಬಸ್ಸನ್ನು ನಿಲ್ಲಿಸಿ ಆಗಬಹುದಾಗಿದ್ದ ಅಪಘಾತವನ್ನು ತಪ್ಪಿಸಿದ್ದಾರೆ.
ಬಸ್ಸಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಂಡಕ್ಟರ್ ಮತ್ತು ಪ್ರಯಾಣಿಕರನ್ನು ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. (ಏಜೆನ್ಸೀಸ್)