ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸಲು ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಈವೆಂಟ್‌ಗಳಿಂದ ತುಂಬಿರುತ್ತವೆ. ಇನ್ನು ಸಾಮಾನ್ಯವಾಗಿ ಮಧ್ಯರಾತ್ರಿ 12 ರವರೆಗೆ ಬಾರ್ ಆಂಡ್ ರೆಸ್ಟೋರೆಂಟ್‌ಗಳು ತೆರೆದಿರುತ್ತವೆ, ಆದರೆ ಇಲ್ಲಿ ನಡೆಸಲಾಗುವ ಕಾರ್ಯಕ್ರಮಗಳ ಪರವಾನಗಿಯನ್ನು 1 ಗಂಟೆಯವರೆಗೆ ವಿಸ್ತರಿಸಿವೆ. ಈ ಕುರಿತು ಆದೇಶವನ್ನೂ ಹೊರಡಿಸಿದೆ. ಆದರೆ GHMC ವಿಶೇಷ ನಿಗಾ ಇರಿಸಿದೆ.
ಯಾವುದೇ ಸಂದರ್ಭದಲ್ಲೂ ಈ ಆಚರಣೆಗಳಲ್ಲಿ ಮಾದಕ ವಸ್ತು ಬಳಸದಂತೆ ಸರ್ಕಾರ ಎಚ್ಚರ ವಹಿಸಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನೂ ನೀಡಿದೆ. ಅಷ್ಟೇ ಅಲ್ಲ, ಹೊಸ ವರ್ಷದ ಕಾರ್ಯಕ್ರಮಗಳನ್ನು ಆಯೋಜಿಸುವವರು ಮುಂಚಿತವಾಗಿ ಅನುಮತಿ ತೆಗೆದುಕೊಳ್ಳುವಂತೆಯೂ ಪೊಲೀಸರು ಆದೇಶಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕರು ಒಟ್ಟಾಗಿ ಸೇರುವುದರಿಂದ ಅಪಘಾತಗಳು ಸೇರಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಡಿಸೆಂಬರ್ 31 ರಂದು ರಾತ್ರಿ 11 ರಿಂದ ಜನವರಿ 1ರ ಬೆಳಗ್ಗೆ 6ರ ವರೆಗೆ ಬೆಂಗಳೂರು ನಗರದ ಎಲ್ಲಾ ಮೇಲ್ಸೇತುವೆಗಳಲ್ಲಿ (ಕೆಐಎ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಹೊರತುಪಡಿಸಿ) ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಮಧ್ಯದ ದರ ಏರಿಕೆಯಾಗುತ್ತಾ ಎಂಬ ಆತಂಕವಿತ್ತು. ಅಲ್ಲದೇ ಮಧ್ಯ ಪ್ರಿಯರಿಗೆ ಕರ್ನಾಟಕ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಈ ಬಾರಿ ಎಣ್ಣೆ ರೇಟ್ನಲ್ಲಿ ಯಾವುದೇ ಏರಿಕೆ ಅಥವಾ ಯಾವುದೇ ಬದಲಾವಣೆ ಇಲ್ಲದಿರುವುದಾಗಿ ಮಾಹಿತಿ ನೀಡಿದೆ. ಹಾಗಾಗಿ ಆಲ್ಕೋಹಾಲ್, ಬಿಯರ್ ಎಲ್ಲದರ ದರ ಬದಲಾವಣೆಯಾಗಿಲ್ಲ.