ನ್ಯೂಸ್

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಮಂಜುನಾಥ ಅಂಗಡಿ

ಧಾರವಾಡ: ತಾಲೂಕಿನ ಹೆಬ್ಬಳ್ಳಿ ಗ್ರಾಮದ ರವಿವಾರ ಪೇಟೆಯ ನೀರಿನ ಟ್ಯಾಂಕ್‌ಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಬೇಸಿಗೆ ಸಂದರ್ಭದಲ್ಲಿ ತುರ್ತಾಗಿ ಸಮಸ್ಯೆ ಬಗೆಹರಿಸಬೇಕಾದ ಅಽಕಾರಿಗಳು ನಿರ್ಲಕ್ಷ÷್ಯ ತೋರುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಈ ಮೊದಲು ಗ್ರಾಮದಲ್ಲಿ ವಾರ್ಡ್ಗಳ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಸಲಾಗುತಿತ್ತು. ಆದರೆ, ೮- ೧೦ ತಿಂಗಳಿAದ ಇದು ಬದಲಾಗಿದ್ದು, ರವಿವಾರ ಪೇಟೆ ಓಣಿ ಸೇರಿ ಸುತ್ತಲಿನ ಪ್ರದೇಶಗಳ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಅಲ್ಲದೆ, ಮಲಪ್ರಭಾ ಮುಖ್ಯಲೈನ್‌ನ ಪೈಪ್‌ಗಳು ಹಾಳಾಗಿದ್ದು ಅವುಗಳನ್ನೂ ಬದಸಬೇಕಿದೆ. ಈ ಕುರಿತು ಸಂಬAಧಪಟ್ಟ ಅಽಕಾರಿಗಳನ್ನು ಭೇಟಿಯÁಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ವಾರ್ಡ್ನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.