ನಟ ಆಯುಷ್ಮಾನ್ ಖುರಾನಾ ನಟನೆಯ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಇದೀಗ ‘ಡ್ರೀಮ್ ಗರ್ಲ್ 2’ (Dream Girl 2) ಸಿನಿಮಾ ಕೂಡ ಜನ ಮನ್ನಣೆ ಗಳಿಸಿದೆ. ಆಗಸ್ಟ್ ತಿಂಗಳಲ್ಲಿ ‘ಜೈಲರ್’, ‘ಗದರ್ 2’, ‘ಒಎಂಜಿ 2’ ಮುಂತಾದ ಸಿನಿಮಾಗಳ ಪೈಪೋಟಿ ಜೋರಾಗಿಯೇ ಇತ್ತು. ಹೀಗಿದ್ರೂ ಕೂಡಾ ಸಿನಿಮಾ ಹಾಫ್ ಸೆಂಚುರಿ ಬಾರಿಸುವತ್ತ ಮುನ್ನುಗ್ಗುತ್ತಿದೆ.
ಹುಡುಗಿಯ ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಯಾಮಾರಿಸುವ ಯುವಕನ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ ಅವರು ಕಾಣಿಸಿಕೊಂಡಿದ್ದರು. ‘ಡ್ರೀಮ್ ಗರ್ಲ್’ ಸಿನಿಮಾ2019 ರಲ್ಲಿ ತೆರೆಕಂಡಿದ್ದು, ಆಯುಷ್ಮಾನ್ ಖುರಾನಾ ಅವರ ನಟನೆಗೆ ಫ್ಯಾನ್ಸ್ವ ಮೆಚ್ಚುಗೆಯನ್ನೂ ವ್ಯಕ್ತ ಪಡಿಸಿದ್ದರು. ಮೊದಲ ವೀಕೆಂಡ್ನಲ್ಲಿ ಸಿನಿಮಾಗೆ ಉತ್ತಮ ಕಲೆಕ್ಷನ್ ಆಗಿದ್ದು, ಖುರಾನಾ ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
35 ಕೋಟಿ ಬಜೆಟ್ನಲ್ಲಿ ಸಿನಿಮಾ ಮಾಡಲಾಗಿದ್ದು, ಮೊದಲ ದಿನ ಈ ಚಿತ್ರ 10.69 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶನಿವಾರ 14.02 ಕೋಟಿ ರೂಪಾಯಿ ಕಮಾಯಿ ಆಯಿತು. 3ನೇ ದಿನವಾದ ಭಾನುವಾರ 16 ಕೋಟಿ ರೂಪಾಯಿ ಆದಾಯ ಹರಿದು ಬಂತು. ಆದರೆ ಸೋಮವಾರ ಕಲೆಕ್ಷನ್ ಕುಸಿದಿದೆ. ಸೋಮವಾರ ಕೇವಲ 5.42 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ರಕ್ಷಾ ಬಂಧನ ಹಬ್ಬ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಚಿತ್ರ ತಂಡದ್ದು.
ಚಿತ್ರದಲ್ಲಿ ಆಯುಷ್ಮಾನ್ ಖುರಾನಾಗೆ ಜೋಡಿಯಾಗಿ ಅನನ್ಯ ಪಾಂಡೆ ನಟಿಸಿದ್ದಾರೆ. ರಾಜ್ ಶಾಂಡಿಲ್ಯ ಅವರು ‘ಡ್ರೀಮ್ ಗರ್ಲ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.