Science behind dreams: ರಾತ್ರಿ ಮಲಗಿದಾಗ ನಮಗೆಲ್ಲರಿಗೂ ಕನಸು ಬೀಳುವುದು ಸಾಮಾನ್ಯ. ಕೆಲವೊಮ್ಮೆ ನಾವೆಂದೂ ನೋಡದ ಅಪರಿಚಿತ ನಗರಗಳು, ಎಂದಿಗೂ ಭೇಟಿ ಮಾಡದ ಹೊಸ ಸ್ಥಳಗಳು ಮತ್ತು ಮುಖ ಪರಿಚಯವಿಲ್ಲದ ವ್ಯಕ್ತಿಗಳು ನಮ್ಮ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಎಚ್ಚರಾದ ಮೇಲೆ ಇವೆಲ್ಲ ಎಲ್ಲಿಂದ ಬಂದವು ಎಂಬ ಆಶ್ಚರ್ಯ ಕಾಡುವುದು ಸಹಜ. ಹಾಗಾದರೆ ಈ ವಿಚಿತ್ರ ಲೋಕದ ಹಿಂದಿನ ರಹಸ್ಯವೇನು?
ನಾವು ನಿದ್ರಿಸಿದರೂ ಮಿದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವುದಿಲ್ಲ. ಅದರಲ್ಲೂ 'ಆರ್‌ಇಎಂ' (REM) ನಿದ್ರೆಯ ಹಂತದಲ್ಲಿ ಕನಸುಗಳು ಹೆಚ್ಚಾಗಿ ಬೀಳುತ್ತವೆ. ನಾವು ಎಚ್ಚರವಾಗಿದ್ದಾಗ ನೋಡಿದ ದೃಶ್ಯಗಳು, ಕೇಳಿದ ವಿಷಯಗಳು ಮತ್ತು ಮರೆತುಹೋದ ಸಣ್ಣಪುಟ್ಟ ನೆನಪುಗಳನ್ನು ಮಿದುಳು ರಾತ್ರಿಯ ವೇಳೆ ಹೊಸ ರೀತಿಯಲ್ಲಿ ಜೋಡಿಸುತ್ತದೆ.
ಪರಿಚಿತವಲ್ಲದ ಜಾಗಗಳು ಅಥವಾ ಹೊಸ ಮುಖಗಳು ಎಂದರೆ ಅವು ಸಂಪೂರ್ಣ ಹೊಸಾವಲ್ಲ. ನಮ್ಮ ಮೆದುಳಿನಲ್ಲಿ ಈಗಾಗಲೇ ಸ್ಟೋರ್ ಆಗಿರುವ ಬೇರೆ ಬೇರೆ ನೆನಪುಗಳ ತುಣುಕುಗಳನ್ನು (ಉದಾಹರಣೆಗೆ: ಯಾವುದೋ ಒಂದು ಮನೆಯ ಗೋಡೆ, ಮತ್ತೊಂದೆಡೆಯ ರಸ್ತೆ) ಒಟ್ಟಿಗೆ ಸೇರಿಸಿ ಒಂದು ಹೊಸ ಜಾಗ ಅಥವಾ ಮುಖದಂತೆ ನಮ್ಮ ಮುಂದೆ ತಂದು ನಿಲ್ಲಿಸುತ್ತದೆ.
ಕನಸಿನಲ್ಲಿ ಅಪರಿಚಿತರು ಅಥವಾ ವಿಚಿತ್ರ ಜಾಗಗಳು ಕಾಣಿಸಿಕೊಂಡರೆ ಯಾವುದೋ ಭವಿಷ್ಯದ ಸೂಚನೆ ಅಥವಾ ಅಲೌಕಿಕ ಅನುಭವ ಎಂದು ಕೆಲವರು ಭಾವಿಸುತ್ತಾರೆ. ಆದರೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಇದು ಕೇವಲ ಮಿದುಳು ನೆನಪುಗಳನ್ನು ಸಂಸ್ಕರಿಸುವ ಮತ್ತು ಕಲ್ಪನೆಯನ್ನು ರೂಪಿಸುವ ಒಂದು ಸಂಕೀರ್ಣ ಪ್ರಕ್ರಿಯೆಷ್ಟೇ. ವಿಜ್ಞಾನಿಗಳಿಗೆ ಇಂದಿಗೂ ಕನಸಿನ ಸಂಪೂರ್ಣ ರಹಸ್ಯ ತಿಳಿದಿಲ್ಲವಾದರೂ, ಇದು ನಮ್ಮ ಮಿದುಳಿನ ಸೃಜನಶೀಲತೆಯ ಒಂದು ಭಾಗ ಎನ್ನುವುದು ಮನಃಶಾಸ್ತ್ರಜ್ಞರ ಅಭಿಪ್ರಾಯ.