ನ್ಯೂಸ್

ಆಮೆ ರಕ್ಷಣೆಗಾಗಿ ಕ್ಷಿಪಣಿ ಪರೀಕ್ಷೆ ನಿಷೇಧ!

ಭುವನೇಶ್ವರ: ಒಡಿಶಾ ಕರಾವಳಿಯ ವೀಲರ್​ ದ್ವೀಪದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಡಿಆರ್​ಡಿಒ ಕ್ಷಿಪಣಿ ಪರೀಕ್ಷೆಯನ್ನು ನಡೆಸದಿರಲು ನಿರ್ಧರಿಸಿದೆ.

ಸಣ್ಣ ಆಮೆಗಳ ಜೀವ ಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪಿ.ಕೆ. ಜೆನಾ ನೇತೃತ್ವದ ಸಮಿತಿ ಹೇಳಿದೆ. ಜನವರಿಯಿಂದ ಮಾರ್ಚ್​ವರೆಗಿನ ಅವಧಿಯನ್ನು 'ಗೂಡುಕಟ್ಟುವ ಕಾಲ' ಎಂದು ಕರೆಯುತ್ತಾರೆ. ಆಮೆ ಗೂಡುಕಟ್ಟುವ ಸ್ಥಳವು ವೀಲರ್​ ದ್ವೀಪಕ್ಕೆ ಸಮೀಪದಲ್ಲಿದೆ.

ಕ್ಷಿಪಣಿ ಪರೀಕ್ಷೆಯು ಪ್ರಕಾಶಮಾನವಾದ ಬೆಳಕು ಮತ್ತು ಶಬ್ದಗಳನ್ನು ಒಳಗೊಂಡಿರುವುದರಿಂದ ಅದು ಆಮೆಗಳನ್ನು ದಿಗ್ಭ್ರಮೆಗೊಳಿಸುತ್ತದೆ. ಆದ್ದರಿಂದ ವೀಲರ್​ ದ್ವೀಪದಲ್ಲಿ ಜನವರಿಯಿಂದ ಮಾರ್ಚ್​ವರೆಗೆ ಪಣಿ ಪರೀಕ್ಷೆಯನ್ನು ನಿಷೇಧಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಣಾಧಿಕಾರಿ (ವನ್ಯಜಿವಿ) ಸುಸಂತ ನಂದಾ ಹೇಳಿದ್ದಾರೆ.