ಮುಂಬೈ: ಜನಪ್ರಿಯ ಕಿರುತೆರೆ ನಟಿ ದ್ರಷ್ಟಿ ಧಾಮಿ (Drashti Dhami )ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ ದೃಷ್ಟಿ ಧಾಮೀ ಅವರು ಮದ್ವೆಯಾಗಿ 9 ವರ್ಷದ ಬಳಿಕ ತಾಯಿ ಆಗಿರುವ ಸುದ್ದಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತೋಷವನ್ನು ಹಂಚಿಕೊಂಡಿದ್ದಾರೆ.
ದೃಷ್ಟಿ ಹಾಗೂ ನೀರಜ್ television industry ನಲ್ಲಿಯೇ most lovely couples ಅಂತಾನೆ ಗುರುಸಿಕೊಂಡಿರುವ ಜೋಡಿ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಚಿಕ್ಕ ಎಲಿಪೆಂಟ್ ರೂಪದ ಮಗುವಿನ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ನಮ್ಮ ಜೀವನ ಸಂಪೂರ್ಣ ಹೊಸದಾಗಿ ಆರಂಭವಾಗಲಿದೆ. ಇನ್ನು ನಮ್ಮ ಸಂತೋಷ ಆಕಾಶದೆತ್ತರಕ್ಕೆ ಹಾರಲಿದೆ ಎಂದು ಬರೆದುಕೊಂಡಿದ್ದಾರೆ.
ದೃಷ್ಟಿ ಧಾಮೀ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಈ ಜೋಡಿಗೆ ಶುಭಕೋರಿದ್ದಾರೆ.
ದೃಷ್ಟಿ ಅವರು 2015 ರಲ್ಲಿ ಬಿಸಿನೇಸ್ಮ್ಯಾನ್ ನೀರಜ್ ಖೇಮ್ಕಾ ಅವರನ್ನು ಮದುವೆ ಆಗಿದ್ದರು. 9 ವರ್ಷದ ನಂತರ 2024 ಜೂನ್ ರಂದು ತಾವು ತಾಯಿ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದರು.
ಮಧುಬಾಲಾ - ಏಕ್ ಇಷ್ಕ್ ಏಕ್ ಜುನೂನ್, ದಿಲ್ ಮಿಲ್ ಗಯೇ, ಗೀತ್ - ಹುಯಿ ಸಬ್ಸೆ ಪರಾಯಿ, ಸಿಲ್ಸಿಲಾ ಬದಲ್ತೆ ರಿಷ್ಟೋನ್ ಕಾ ಮತ್ತು ಪರ್ದೇಸ್ ಮೇ ಹೈ ಮೇರಾ ದಿಲ್ ನಂತಹ ಟಿವಿ ಶೋಗಳಲ್ಲಿ ದ್ರಷ್ಟಿ ಹೆಸರುವಾಸಿಯಾಗಿದ್ದಾರೆ. ನಟಿ ಎಂಪೈರ್ ಮತ್ತು ದುರಂಗದಂತಹ ವೆಬ್ ಶೋಗಳ ಭಾಗವಾಗಿದ್ದಾರೆ.