ಶಿವಮೊಗ್ಗ: ಸಕ್ರೆಬೈಲ್‌ನ ಆನೆ ಬಿಡಾರದಲ್ಲಿ ಭಾನುವಾರ ವನ್ಯಜೀವಿ ವಿಭಾಗದ ಪಶು ವೈದ್ಯ ಡಾ. ವಿನಯ್ ಮೇಲೆ ಸಾಕಾನೆಯೊಂದು ದಾಳಿ ಮಾಡಿದ್ದು, ಭಾರೀ ಅನಾಹುತದಿಂದ ವೈದ್ಯರು ಪಾರಾಗಿದ್ದಾರೆ.
ಕಳೆದೆ ಮೂರು ದಿನದ ಹಿಂದೆ ಆನೆ ಬಿಡಾರದಲ್ಲಿ ಭಾನುಮತಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿತ್ತು. ತಾಯಿ ಹಾಗೂ ಮರಿಯಾನೆಗೆ ಔಷಧೋಪಚಾರ ಮಾಡಲು ತೆರಳಿದ್ದ ಡಾ. ವಿನಯ್ ಅವರಿಗೆ ಪಕ್ಕದಲ್ಲೇ ಇದ್ದ ಮತ್ತೊಂದು ಸಾಕಾನೆ ನೀಲಾಂಬರಿ ಸೊಂಡಿಲಿನಿಂದ ಎಳೆದು ನೆಲೆಕ್ಕುಳಿಸಿದೆ.
ಕೆಳಗೆ ಬಿದ್ದ ವೈದ್ಯ ವಿನಯ್ ಅವರನ್ನು ಕಾಲಿನಿಂದ ತುಳಿಯುವ ಪ್ರಯತ್ನ ಮಾಡಿದ್ದು ಕ್ಷಣಾರ್ಧದಲ್ಲಿ ಮೇಲೆದ್ದು ಅಪಾಯದಿಂದ ಪಾರಾಗಿದ್ದಾರೆ. ಇದರಿಂದ ಬಿಡಾರದಲ್ಲಿ ನಡೆಯಲಿದ್ದ ದೊಡ್ಡ ಅನಾಹುತವೊಂದು ತಪ್ಪಿದ್ದು ವಿನಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಘಟನೆಯ ನಂತರ ಬಿಡಾರದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.