ಖಂಡಿತವಾಗಿಯೂ ಇಲ್ಲ. ಪ್ರಣಾಳಿಕೆ ಎಂಬುದು ಬಿಜೆಪಿಗೆ ಚುನಾವಣಾ ಗಿಮಿಕ್ ಅಲ್ಲ. ಪ್ರಣಾಳಿಕೆ ಅಂದರೆ ಚುನಾವಣೆ ಗೆಲ್ಲುವ ಅಸ್ತ್ರವಲ್ಲ. ಪ್ರಣಾಳಿಕೆ ಅಂದರೆ ಭವಿಷ್ಯದ ಕರ್ನಾಟಕವನ್ನು ನಿರ್ವಿುಸುವ, ಆರೂವರೆ ಕೋಟಿ ಕನ್ನಡಿಗರ ಬದುಕು ಕಟ್ಟಿಕೊಡುವ ಸಂಕಲ್ಪ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ, ಮಾಡಿದ ಸಾರ್ಥಕ ಜನಸೇವೆ ನಮ್ಮೆಲ್ಲರಿಗೂ ತೃಪ್ತಿ ತಂದಿದೆ.
ಇದು ಬಿಜೆಪಿಯ ಪ್ರಣಾಳಿಕೆ ಅಲ್ಲ. ಇದು ಜನರ ಪ್ರಣಾಳಿಕೆ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾಡಲಾದ ಪ್ರಣಾಳಿಕೆ. ರಾಜ್ಯದ ಜನರ ಕನಸುಗಳಿಗೆ ರೂಪ ಕೊಡುವ ಪ್ರಯತ್ನವನ್ನು ಮಾಡಲಾಗಿದೆ. ರಾಜ್ಯದ ಜನರಿಗೆ ಆಶೋತ್ತರಗಳನ್ನು ಅಭಿಪ್ರಾಯ ಸಂಗ್ರಹಣೆ ಮೂಲಕ ಪಡೆಯಲಾಗಿದೆ. ಇದು ಜನರ ಆಶಯದ ಪ್ರಣಾಳಿಕೆ. ಕೇವಲ ಪಕ್ಷದ ಹಾಗೂ ಚುನಾವಣಾ ದೃಷ್ಟಿಯಲ್ಲಿ ತಯಾರು ಮಾಡಲಾಗಿರುವ ಪ್ರಣಾಳಿಕೆಯಲ್ಲ.
ಹೌದು, ಬೇರೆ ಪಕ್ಷಗಳ ಪ್ರಣಾಳಿಕೆ ಅಂದರೆ ಅದು ಪಕ್ಷದ ಸ್ಟ್ರಾಟಜಿ ಆಗಿರುತ್ತದೆ. ಮತ ಕದಿಯುವ ಆಕರ್ಷಣೆಯ ಒಂದು ಪುಸ್ತಕವಾಗಿರುತ್ತದೆ. ಆದರೆ ಬಿಜೆಪಿಯ ಪ್ರಣಾಳಿಕೆ ಸಂಪೂರ್ಣ ವಿಭಿನ್ನ. ಜನರಿಂದ ಬಂದ ಅಭಿಪ್ರಾಯಗಳನ್ನು ನೋಡಿದ ಮೇಲೆ ನಮಗೇ ಅಚ್ಚರಿಯಾಗಿತ್ತು. ವೆಬ್ಸೈಟ್ನಲ್ಲಿ 18000ಕ್ಕೂ ಅಧಿಕ, ವಾಟ್ಸ್ಅಪ್ನಲ್ಲಿ 5000ಕ್ಕೂ ಅಧಿಕ, ಮಿಸ್ಡ್ ಕಾಲ್ ಮೂಲಕ 5000 ಹೀಗೆ ವಿವಿಧ ರೀತಿ 29000 ಸಲಹೆಗಳು ಬಂದಿತ್ತು.
ಯುವಜನತೆ, ಮಹಿಳೆಯರು, ಕೃಷಿಕರು, ಉದ್ಯಮಿಗಳು, ನೌಕರರು, ಸಂಘ-ಸಂಸ್ಥೆಗಳು ಹೀಗೆ ಸುಮಾರು 50 ವಿವಿಧ ಕ್ಷೇತ್ರಗಳ ಜನರನ್ನು ಸಂರ್ಪಸಿ ಸಲಹೆ ಪಡೆಯಲಾಗಿದೆ. ಆಯಾ ವಿಭಾಗದ ಎಕ್ಸ್ಪರ್ಟ್ಗಳ ಜತೆ ಸಭೆ ನಡೆಸಲಾಗಿದೆ. ಕೇಂದ್ರ ನಾಯಕರು ಕೂಡ ಈ ಸಭೆಯಲ್ಲಿ ಭಾಗಿಯಾಗಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಜನರ ಜತೆ ಎಕ್ಸ್ಪರ್ಟ್ಗಳ ಯೋಚನೆಗಳು ಹಾಗೂ ಅವರ ಸಲಹೆಗಳು ತುಂಬಾ ಅಮೂಲ್ಯವಾಗಿತ್ತು.
ಕಾಂಗ್ರೆಸ್ ಬರೀ ಗ್ಯಾರೆಂಟಿಗಳನ್ನು ಘೊಷಿಸಿದೆಯೇ ಹೊರತು ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಜೆಡಿಎಸ್ನ ಪಂಚರತ್ನ ಏನು ಎಂದು ಬಹುಶಃ ಅವರ ಪಕ್ಷದ ಕಾರ್ಯಕರ್ತರಿಗೂ ಸ್ಪಷ್ಟತೆ ಇಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣೆ ಮೇಲೆ ಕಣ್ಣಿಟ್ಟು ಪ್ರಣಾಳಿಕೆ, ಗ್ಯಾರೆಂಟಿ ನೀಡುತ್ತಿವೆ. ಆದರೆ ಬಿಜೆಪಿ ಮುಂದಿನ 25 ವರ್ಷಗಳ ವಿಕಾಸ ಯಾತ್ರೆ ದೃಷ್ಟಿಯಲ್ಲಿಟ್ಟುಕೊಂಡಿದೆ.
ಬಿಜೆಪಿಗೆ ಪ್ರಣಾಳಿಕೆ ಕೇವಲ ಘೊಷಣಾ ಪತ್ರವಲ್ಲ. ಪ್ರಣಾಳಿಕೆ ಎಂದರೆ ನಮಗೆ ಅದು ನಮಗೆ ಭಗವದ್ಗೀತೆಯಂತೆ ಪವಿತ್ರ. ನಾವು ಕೊಟ್ಟಿರುವ ಪ್ರತಿಯೊಂದು ಆಶ್ವಾಸನೆ ಹಿಂದೆಯೂ ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ವಿಮರ್ಶೆ ಮಾಡಿದ್ದೇವೆ. ಅದರ ಈಡೇರಿಕೆಯ ಮಾರ್ಗವನ್ನು ಕೂಡ ಕಂಡು ಕೊಂಡಿದ್ದೇವೆ.
ಬಿಜೆಪಿ ತನ್ನ ಆಡಳಿತ ಮತ್ತು ಅಭಿವೃದ್ಧಿ ಕೆಲಸಗಳಿಂದ ವಿಶೇಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ನಾಯಕತ್ವ ಪಕ್ಷವನ್ನು ಜನರ ಪಕ್ಷವನ್ನಾಗಿ ಮಾಡಿದೆ. ಅದೇ ರೀತಿ ಪ್ರಣಾಳಿಕೆ ತಯಾರಿಕೆಯ ವೇಳೆ ಕೂಡ ಸಾಕಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜನರನ್ನು ಸಂರ್ಪಸಿ ಅಭಿಪ್ರಾಯ ಪಡೆಯಲಾಗಿತ್ತು.