ಚನ್ನಪಟ್ಟಣ : ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಡಾ.ರಾಜ್ ಬಯಲು ರಂಗಮಂದಿರ ಕನಸಾಗಿಯೇ ಉಳಿದಿದೆ.
ಬೊಂಬೆನಗರಿ ಹೃದಯ ಭಾಗದಲ್ಲಿರುವ ದೇವಾಲಯದ ಆವರಣದಲ್ಲಿ 1.15 ಎಕರೆ ಸರ್ಕಾರಿ ಖರಾಬು ಜಾಗವಿದ್ದು, 5 ಗುಂಟೆಯನ್ನು 2015ರಲ್ಲಿ ಕಾಂಗ್ರೆಸ್ ಭವನ ನಿರ್ವಾಣಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ ಮಂಜೂರು ಮಾಡಿತ್ತು. ನಾಟಕ ಪ್ರದರ್ಶನ ಹಾಗೂ ತಾಲೂಕಿನ ಹಲವು ಸಂ-ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಜಾಗವನ್ನು ಪಕ್ಷವೊಂದರ ಭವನಕ್ಕೆ ಮಂಜೂರು ವಾಡಿದ ನಿರ್ಧಾರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ನಿರ್ಧಾರ ಖಂಡಿಸಿ ಡಾ.ರಾಜ್ ಕಲಾಬಳಗದ ನೇತೃತ್ವದಲ್ಲಿ ವಿವಿಧ ಸಂಟನೆಗಳು, ರಂಗಭೂಮಿ ಕಲಾವಿದರು ಹಾಗೂ ಕಲಾಭಿವಾನಿಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಸಾರ್ವಜನಿಕ ವಿರೋಧ ಮನಗಂಡ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.ಕೆ.ಶಿವಕುವಾರ್ ಈ ಜಾಗದಲ್ಲಿ ಭವನ ನಿರ್ಮಿಸುವುದಿಲ್ಲ ಎಂದು ವಾಗ್ದಾನ ನೀಡಿದ್ದರು. ಅಲ್ಲಿಗೆ ಜಾಗ ಉಳಿಸಿಕೊಳ್ಳುವ ಹೋರಾಟಕ್ಕೆ ಜಯಸಿಕ್ಕಿತ್ತು.
ತದನಂತರ ಈ ಜಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾಗುವಂತೆ ವರನಟ ಡಾ.ರಾಜ್‌ಕುವಾರ್ ಹೆಸರಿನಲ್ಲಿ ಬಯಲು ರಂಗಮಂದಿರ ನಿಮಾಣದ ಕನಸು ಪುಟಿದೆದ್ದಿತು. ಸುಸಜ್ಜಿತವಾದ ರಂಗಮಂದಿರಕ್ಕಾಗಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ನೀಲಿನಕ್ಷೆ ಸಿದ್ಧಪಡಿಸಿ, ಕಲಾಭಿವಾನಿಗಳು ಸಂಬಂಧಪಟ್ಟವರಿಗೆ ತಲುಪಿಸಿದ್ದರು.
ನನೆಗುದಿಗೆ ಬಿದ್ದ ಕಾಮಗಾರಿ: ಕಾಂಗ್ರೆಸ್ ಭವನದ ಜಾಗ ರದ್ದು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಂದಿನ ಸರ್ಕಾರವೇ ಆದೇಶ ನೀಡಿದ್ದರೂ ಇನ್ನು ಈ ಕೆಲಸವಾಗಿಲ್ಲ. ಪಹಣಿಯಲ್ಲಿ ಕಾಂಗ್ರೆಸ್ ಭವನ ಎಂದೇ ಬರುತ್ತಿದೆ. ಇದಲ್ಲದೆ ರಂಗಮಂದಿರದ ಕುರಿತು ಯಾವುದೇ ವಾಹಿತಿ ಇಲ್ಲದಂತಾಗಿದೆ. ಶೀಘ್ರ ರಂಗಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರ, ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರಿಗೆ ಕಲಾವಿದರು ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.