ಡಾ.ಬಿ.ಜಿ.ಗಿರೀಶ್, ಪ್ರಾಧ್ಯಾಪಕ 
ನ್ಯೂಸ್

ಡಾ.ಬಿ.ಜಿ.ಗಿರೀಶ್ ಉತ್ತಮ ಸಾಧನೆ

ಶಿವಮೊಗ್ಗ: ಅಂತರಾಷ್ಟ್ರೀಯ ಮನ್ನಣೆಯ ರಿಸರ್ಚ್ ಡಾಟ್ ಕಾಂ ವೆಬ್ ತಾಣವು ಬಿಡುಗಡೆ ಮಾಡಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಜೆ.ಗಿರೀಶ್ ಭಾರತದಲ್ಲಿ 3ನೇ ಸ್ಥಾನ ಹಾಗೂ ಜಾಗತಿಕವಾಗಿ 671ನೇ ಸ್ಥಾನ ಪಡೆದಿದ್ದಾರೆ.

ಕಳೆದ ವರ್ಷ ಇವರು ಜಾಗತಿಕವಾಗಿ 942ನೇ ಸ್ಥಾನದಲ್ಲಿದ್ದರು. ರಿಸರ್ಚ್ ಡಾಟ್ ಕಾಂ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುತ್ತದೆ. ಬಿ.ಜಿ.ಗಿರೀಶ್ 240ಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, 9 ಸಾವಿರಕ್ಕೂ ಅಧಿಕ ಬಾರಿ ಅವು ಸಂಶೋಧಕರಿಂದ ಮರು ಉಲ್ಲೇಖ, ಪರಾಮರ್ಶೆಗೆ ಒಳಗಾಗಿದೆ.
ಥರ್ಮೊಡೈನಾಮಿಕ್ಸ್, ಮೆಕಾನಿಕಲ್, ಏರೋಸ್ಪೇಸ್ ಇಂಜಿನಿಯರಿಂಗ್, ಶಾಖ ಪ್ರಸರಣೆ ವಿಷಯ ಮತ್ತು ಉಪವಿಷಯಗಳಲ್ಲಿನ ಅವರ ಸಂಶೋಧನಾ ಪ್ರಖರತೆ ಗಮನಿಸಿ ಈ ಸ್ಥಾನ ನೀಡಿರುವುದಾಗಿ ರಿಸರ್ಚ್ ಡಾಟ್ ಕಾಂ ತಿಳಿಸಿದೆ.