ನ್ಯೂಸ್

ಅರ್ಥರೈಟಿಸ್ ರೋಗಿಗಳ ಬಾಳಲ್ಲಿ ಬೆಳಕು ಮೂಡಿಸಿದ ಡಾ.ಉಪ್ಪಿನ

ಸಂಧಿವಾತ ಅಥವಾ ಕೀಲುವಾಯು ಬಗ್ಗೆ ನೀವು ಕೇಳಿರಬಹುದು. ಸಂಧಿವಾತ ಎಂದರೆ ಕೀಲುಗಳಲ್ಲಿ ಊತ ಅಥವಾ ನೋವು. ಈ ನೋವಿಗೆ ನೂರಾರು ಕಾರಣಗಳಿವೆ. ಇತ್ತೀಚಿನ ದಿನಗಳಲ್ಲಿ ಒತ್ತಡ, ಬದಲಾದ ಜೀವನಶೈಲಿಯಿಂದಾಗಿ ಯುವ ಜನರೂ ಸಂಧಿವಾತಕ್ಕೆ ಈಡಾಗುತ್ತಿದ್ದಾರೆ. ಈ ಸಮಸ್ಯೆ ಗುರುತಿಸುವ ಕುರಿತು ‘ವಿಶ್ವ ಅರ್ಥರೈಟಿಸ್ ದಿನ ಅಂಗವಾಗಿ ಬೆಳಗಾವಿಯ ‘ಉಪ್ಪಿನ ಮಲ್ಟಿಸ್ಪೆಶಾಲಿಟಿ ಮತ್ತು ಅರ್ಥರೈಟಿಸ್ ಕೇಂದ್ರ’ದ ಡಾ.ಅರ್ಚನಾ ಎಂ. ಉಪ್ಪಿನ (ಖನಗಾವಿ) ಅವರು ವಿಜಯವಾಣಿ ಜತೆಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಒತ್ತಡ ಜೀವನದಿಂದಾಗಿ ದೇಹದ ಅಂಗಗಳಿಗೆ ಅಪಾಯ ತಂದೊಡ್ಡಬಲ್ಲ ಅರ್ಥರೈಟಿಸ್, ರುಮಾಟಾಲಜಿ (ಸಂಧಿವಾತ/ ಕೀಲುವಾಯು) ಕಾಯಿಲೆಗೆ ವಯಸ್ಸಿನ ಮಿತಿ ಇಲ್ಲ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಇದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಯುವಕರು ಹಾಗೂ ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಹೃದಯ, ಕರುಳು, ಕಣ್ಣು, ಶ್ವಾಸಕೋಶಕ್ಕೆ ಹಾನಿಮಾಡುವ ಸಾಧ್ಯತೆ ಇದೆ. ನಿರ್ಲಕ್ಷ್ಯಿಸದೆ ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಮಾತ್ರ ಈ ರೋಗದಿಂದ ಮುಕ್ತಿ ಪಡೆದುಕೊಳ್ಳಬಹುದು.

ಪ್ರಸ್ತುತ ದಿನಗಳಲ್ಲಿ ಅರ್ಥರೈಟಿಸ್ ರೋಗ ವಿಸ್ತರಣೆಯಾಗುತ್ತಿದ್ದು, ಯುವಕರು ಹಾಗೂ ಮಹಿಳೆಯರಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಯಾರಿಗಾದರೂ ಯಾವುದೇ ಸಂದರ್ಭದಲ್ಲಿ ಬರಹುದು. ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಬೇಕು. ಈ ರೋಗದ ಬಗ್ಗೆ ಸಾಮಾನ್ಯ ಅರಿವು ಮೂಡಿಸಲು ಪ್ರತಿ ವರ್ಷ ಅ.12 ರಂದು ‘ವಿಶ್ವ ಸಂಧಿವಾತ ದಿನ’ ಆಚರಿಸಲಾಗುತ್ತದೆ. ಸಂಧಿವಾತದಿಂದ ಬಳಲುತ್ತಿರುವವರ ಜೀವನದ ಗುಣಮಟ್ಟವನ್ನು ಸುಧಾರಿಸುವುದು ಅವಶ್ಯಕವಾಗಿದೆ. ಆದರೆ, ಸರ್ಕಾರಗಳು ಈ ಕಾಯಿಲೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎನ್ನುತ್ತಾರೆ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೆಳಗಾವಿಯ ಉಪ್ಪಿನ ಮಲ್ಟಿಸ್ಪೆಶಾಲಿಟಿ ಮತ್ತು ಅರ್ಥರೈಟಿಸ್ ಕೇಂದ್ರದ ಡಾ.ಅರ್ಚನಾ ಎಂ. ಉಪ್ಪಿನ (ಖನಗಾವಿ).

ಸಾಮಾನ್ಯವಾಗಿ, ಯಾವುದೇ ರೀತಿಯ ಸಂಧಿವಾತ ಸಂದರ್ಭದಲ್ಲಿ ಕೀಲುಗಳಲ್ಲಿ ಊತ, ನೋವು ಮತ್ತು ಬಿಗಿತ ಸಾಮಾನ್ಯವಾಗಿದೆ. ಈ ರೋಗವು ಎರಡು ರೀತಿ ಕಂಡುಬರುತ್ತದೆ. ಒಂದು ಕೀಲುಗಳಲ್ಲಿ ಮೂಳೆಗಳು ಕ್ಷೀಣಗೊಳ್ಳುವ ಸಂಧಿವಾತ, ಇನ್ನೊಂದು ಕೀಲುಗಳಲ್ಲಿ ಊರಿಯೂತ, ಸಹಜವಾಗಿ ಬಾಗಲು, ಕುಳಿತುಕೊಳ್ಳಲು ಕಷ್ಟವಾಗುವಂತಹ ಅಸಹಜ ಸ್ಥಿತಿಯಲ್ಲಿ ಕಂಡುಬರುತ್ತದೆ. ರ‌್ಯುಮಾಟಾಲಜಿ ಸಂಧಿವಾತವು ಒಂದು ರೀತಿ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಈ ರೋಗವು ಕೀಲುಗಳಲ್ಲಿ ಊತ ಮತ್ತು ನೋವು ಪ್ರಾರಂಭವಾಗುತ್ತದೆ. ರ‌್ಯುಮಾಟಾಲಜಿ ಸಂಧಿವಾತವು ಬಹಳ ಗಂಭೀರವಾದ ಸಮಸ್ಯೆಯಾಗಿದೆ. ಕಾಯಿಲೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡರೆ ಅರ್ಥರೈಟಿಸ್ ರೋಗದಿಂದ ಕ್ಷಿುಣಮುಖರಾಗಬಹುದು.

ಸಾಮಾನ್ಯವಾಗಿ ಕಾಣುವ ರ‌್ಯುಮಟಾಲಾಜಿ ರೋಗಗಳು:

ರ‌್ಯುಮಟೈಡ್ ಆರ್ಥರೈಟಿಸ್ (ಆರ್‌ಎ): ಇದು ಸಾಮಾನ್ಯವಿದೆ. ಜನಸಂಖ್ಯೆಯ ಶೇ.1ಕ್ಕಿಂತ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತಿದೆ. ಇದು ಯುವಕರು ಮತ್ತು ಮಹಿಳೆಯರಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಆರ್‌ಎ ಬೆರಳು ಮತ್ತು ಪಾದದ ಸಣ್ಣ ಕೀಲುಗಳ ಮೇಲೆ ಪರಿಣಾಮ ಬೀರಿ, ದೈನಂದಿನ ಕಾರ್ಯಗಳಿಗೆ ತೊಡಕುಂಟಾಗಲಿದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಕೀಲಿನಲ್ಲಿ ವಿರೂಪ ಕಾಣುತ್ತದೆ.

ಸ್ಪಾಂಡಿಲೋ ಆರ್ಥರೈಟಿಸ್: ಇದು ಪುರುಷರಲ್ಲಿ ಸರ್ವೆ ಸಾಮಾನ್ಯ. ಬೆನ್ನು ಮತ್ತು ಕುತ್ತಿಗೆಯಲ್ಲಿನ ನೋವು. 45 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಲ್ಲಿ ಪ್ರಾರಂಭವಾಗುತ್ತದೆ. ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಶಾಶ್ವತವಾಗಿ ಬೆನ್ನು ಮತ್ತು ಕುತ್ತಿಗೆ ಬಿಗಿತಕ್ಕೆ ಒಳಗಾಗಿ ಚಲನವಲನಗಳಿಗೆ ತೊಡಕುಂಟು ಮಾಡಬಹುದು. ಸೊಂಟ, ಮಂಡಿ (ಹಿಪ್ಸ್), ಹಿಮ್ಮಡಿ (ಫೀಟ್) ಹಾಗೂ ಸಂದು ರಹಿತವಾದ ಕಣ್ಣು, ಚರ್ಮ ಇತ್ಯಾದಿಗಳಿಗೆ ಪರಿಣಾಮ ಬೀರಬಹುದು.

ಗೌಟ್: ದೇಹದಲ್ಲಿ ಯೂರಿಕ್ ಆ್ಯಸಿಡ್ ಮಟ್ಟ ಹೆಚ್ಚಾದಾಗ ಈ ರೋಗ ಬರುತ್ತದೆ ಇದು ಪುರುಷರಲ್ಲಿ ಸಾಮಾನ್ಯ ಮತ್ತು ಋತುಚಕ್ರ (ಪೋಸ್ಟ್ ಮೆನೊಪೌಸಲ್) ನಿಂತ ಮಹಿಳೆಯರಲ್ಲಿ ಕಂಡುಬರಲಿದೆ. ಪಾದದ ಚಿಕ್ಕ ಮೂಳೆ ಸಂದುಗಳಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳಲಿದೆ.

ಸಿಸ್ಟಮಿಕ್ ಲ್ಯುಪಸ್ ಎರಿದಿಮೊಟೋಸಿಸ್ (ಎಸ್‌ಎಲ್‌ಇ): ಇದು ಆಟೋ ಇಮ್ಯೂನ್ ರೋಗ. ದೇಹದ ಯಾವುದೇ ಅಂಗಕ್ಕೂ ಪರಿಣಾಮ ಬೀರಬಹುದು. ಪುರುಷರಿಗೆ ಹೋಲಿಸಿದರೆ ಎಸ್‌ಎಲ್‌ಇ ಹೆಣ್ಣು ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಕೀಲುನೋವು, ಕೂದಲು ಉದುರುವಿಕೆ, ಬಾಯಿಯಲ್ಲಿ ಹುಣ್ಣು, ದೇಹದಲ್ಲಿ ದದ್ದುಗಳು, ವಿವರಿಸಲಾಗದಂಥ ಜ್ವರ, ಅತಿಯಾದ ಆಯಾಸದಿಂದ ಬಳಲಬಹುದು. ಇದು ಕಿಡ್ನಿ, ಮಿದುಳು, ರಕ್ತ, ಶ್ವಾಸಕೋಶ, ಲಿವರ್ ಇತ್ಯಾದಿಗಳಿಗೂ ಹಾನಿ ಮಾಡಬಹುದು. ಬೇಗ ಚಿಕಿತ್ಸೆ ನೀಡದಿದ್ದರೆ ಪ್ರಾಣಕ್ಕೂ ಕುತ್ತು ತರುತ್ತದೆ. ಕಿಡ್ನಿ ಶಾಶ್ವತವಾಗಿ ಹಾನಿಯಾಗಿ ಡಯಾಲಿಸಿಸ್ ಅವಶ್ಯಕತೆ ಎದುರಾಗಬಹುದು.

ಚಿಕೂನ್‌ಗುನ್ಯದಂಥ ಪೋಸ್ಟ್ ವೈರಲ್ ಅರ್ಥರೈಟಿಸ್: ಐದಾರು ದಿನ ಜ್ವರದೊಂದಿಗೆ ದೇಹದಲ್ಲಿ ಕಾಣುವ ಕೀಲು ನೋವು. ಚಿಕಿತ್ಸೆ ನೀಡಿದಲ್ಲಿ ಯಾವುದೇ ನೋವು ಇಲ್ಲದೆ ಸಾಮಾನ್ಯ ಜೀವನ ನಡೆಸಬಹುದು. ಕೆಲವೊಮ್ಮೆ ಜಾಸ್ತಿಯಾದಗ ದೀರ್ಘಕಾಲಿಕೆ ಚಿಕಿತ್ಸೆ ಅಗತ್ಯವಿದೆ.

ಜುವೆನೈಲ್ ಇಡಿಯೋಪಥಿಕ್ ಆರ್ಥರೈಟಿಸ್ (ಜೆಐಎ): ಕೀಲುನೋವುಗಳು ವಯಸ್ಸಾದವರಿಗೆ ಮಾತ್ರ ಬರುವುದು ಎಂಬುದು ತಪ್ಪು ಕಲ್ಪನೆ. ಜೆಐಎ ಮಕ್ಕಳಲ್ಲಿ ಕಾಣುವ ಆರ್ಥರೈಟಿಸ್ ಆಗಿದೆ. 16 ವಯಸ್ಸಿನ ಮುಂಚಿತವಾಗಿ ಕಾಣಿಸಿಕೊಳ್ಳಲಿದೆ.

ಸಂಧಿವಾತ ರೋಗದಲ್ಲಿ 200ಕ್ಕೂ ಅಧಿಕ ವಿಧಗಳಿವೆ

ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬರುವ ಅರ್ಥರೈಟಿಸ್ ರೋಗದಲ್ಲಿ ಸುಮಾರು 200ಕ್ಕೂ ಅಧಿಕ ವಿಧಗಳಿವೆ. ಇದು ಪುರುಷರಗಿಂತ ಮಹಿಳೆಯರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಎಲ್ಲ ಸಂಧಿವಾತ ಆಟೋ ಇಮ್ಯೂನ್ ರೋಗಗಳಾಗಿದ್ದು, ರಕ್ತ ಪರೀಕ್ಷೆಯ ಮೂಲಕ ಬೇಗ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು. ಅರ್ಥರೈಟಿಸ್‌ನಲ್ಲಿ ಪ್ರಮುಖವಾಗಿ ‘ಗೌಟ್’ ಕೂಡ ಸಂಧಿವಾತದ ಒಂದು ರೂಪವಾಗಿದೆ. ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳದಿಂದಾಗಿ ಈ ರೋಗವು ಸಂಭವಿಸುತ್ತದೆ. ಸಂಧಿವಾತದಿಂದಾಗಿ, ಕೀಲುಗಳಲ್ಲಿ ತೀವ್ರವಾದ ನೋವು ಇರುತ್ತದೆ. ಕೆಲವೊಮ್ಮೆ ಊತವೂ ಸಂಭವಿಸುತ್ತದೆ. ಗೌಟ್‌ನಿಂದಾಗಿ ಹೆಬ್ಬೆರಳಿನಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ರೀತಿ ಸಂಧಿವಾತವನ್ನು ಔಷಧಗಳು ಮತ್ತು ಆಹಾರದ ಸಹಾಯದಿಂದ ನಿಯಂತ್ರಣಕ್ಕೆ ತರಬಹುದು.

ಉಪ್ಪಿನ ಮಲ್ಟಿಸ್ಪೆಶಾಲಿಟಿಯಲ್ಲಿ ಚಿಕಿತ್ಸೆ ಲಭ್ಯ

ಮೂಳೆಗಳ ಸಂಧಿವಾತ-ಕೀಲು ನೋವು,ಗೌಟ್ (ಹೆಚ್ಚು ಯೂರಿಕ್ ಅನಿಡ್‌ಮಟ್ಟ), ಅಸ್ಥಿ ಸಂಧಿವಾತ, ಸೋರಿಯಾಸಿಸ್ ಜತೆ ಕೀಲು ನೋವು, ಬೆನ್ನು ನೋವು, ಎಂಟರೆಪಿಥಿಕ್ ಅರ್ಥರೈಟಿಸ್, ರಿಆಕ್ಟಿವ್ ಅರ್ಥರೈಟಿಸ್, ವೈರಲ್ ಸಂಧಿವಾತ, ಮಾಂಸಖಂಡ ನೋವು, ತಣ್ಣಗಿರುವ ಕೈ-ಕಾಲು ಬೆರಳುಗಳು, ಗ್ಯಾಂಗ್ರೀನ್, ಸ್ಲಿರೋಡರ್ಮಾ, ಒಣಗಿದ ಕಣ್ಣು ಮತ್ತು ಬಾಯಿ, ಪುನಃಪುನಃ ಆಗುವ ಗರ್ಭಪಾತ, ಇತರ ಸಂಧಿವಾತ ರೋಗಗಳಿಗೆ ಚಿಕಿತ್ಸೆ ಲಭ್ಯ ಇದೆ.

ನಿರಂತರ ಜನಜಾಗೃತಿ ಅನೇಕರಿಗೆ ಸಂಧಿವಾತ ರೋಗದ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಹೀಗಾಗಿ ಡಾ.ಅರ್ಚನಾ ಅವರು ಈ ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಈ ರೋಗದ ಬಗ್ಗೆ ನಿರಂತರ ಜಾಗೃತಿಯೂ ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ 50ಕ್ಕೂ ಹೆಚ್ಚೂ ಉಚಿತ ತಪಾಸಣೆ, ವಿಚಾರ ಸಂಕಿರಣ, ಜಾಗೃತಿ ಶಿಬಿರ ನಡೆಸುತ್ತಿದ್ದಾರೆ. ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಅರ್ಥರೈಟಿಸ್ ಬಗ್ಗೆ ತಿಳಿವಳಿಕೆ ನೀಡುತ್ತಿದ್ದಾರೆ. ಬೆಳಗಾವಿ ಮಾತ್ರವಲ್ಲದೆ ದೂರದ ಕೊಲ್ಹಾಪುರ, ಗೋವಾ, ಬಿಜಾಪುರ, ದಾಂಡೇಲಿ, ಬಾಗಲಕೋಟೆ ಸೇರಿದಂತೆ ಅನೇಕ ಜನರು ಇಲ್ಲಿ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಈ ಕೆಳಕಂಡ ಲಕ್ಷಣಗಳಿಗೆ ಚಿಕಿತ್ಸೆ ಲಭ್ಯ

  • ಮೂಳೆಗಳ ಸಂಧಿವಾತ-ಕೀಲು ನೋವು (ರ್‍ಯುಮಟೈಡ್ ಆರ್ಥರೈಟಿಸ್) Rheumatoid Arthritis
  • ಗೌಟ್ (ಹೆಚ್ಚು ಯೂರಿಕ್ ಅಸಿಡ್ ಮಟ್ಟ ) Gout (High Uric Acid Levels)
  • ಎಸ್‌ಎಲ್‌ಇ (ಸಿಸ್ಟೆಮಿಕ್ ಲೂಪನ್ ಎರಿಥೆಮಾಟೋಸಸ್) SLE (Lupus) Rash, Mouth Ulcers
  • ಅಸ್ಥಿ ಸಂಧಿವಾತ (ಒಸ್ಟೊ ಆರ್ಥರೈಟಿಸ್) Osteoarthritis
  • ಸೋರಿಯಾಸಿಸ್ ಜೊತೆ ಕೀಲು ನೋವು Psorias with Joint Pains (Psoriatic Arthritis)
  • ಬೆನ್ನು ನೋವು, ಸ್ಪೊ ನ್ಡೈಲೋಆರ್ಥರೈಟಿಸ್, ಅನ್ಕಯೊಸ್ಲಿಂಗ್, ಸ್ಪೊಂಡಿರೈಟಿಸ್ Low Backache, Sacroilitis, Spondyloarthritis, Ankylosing Spondylitis
  • ಎಂಟರೆಪಿಥಿಕ್ ಆರ್ಥರೈಟಿಸ್ Enteropathic (IBD Related) Arthritis
  • ರಿಅಕ್ಟಿವ್ ಆರ್ಥರೈಟಿಸ್ / Reactive Arthritis
  • ವೈರಲ್ ಸಂಧಿವಾತ ಉದಾಹರಣೆಗೆ ಚಿಕೂನ್‌ಗುನ್ಯಾ Viral Arthritis like Chikungunya
  • ಫೈಬ್ರೊಮೈಯಾರಾಯಾ, ಮಾಂಸಖಂಡ ನೋವು Fibromyalgia, Chronic musculoskeletal Pains
  • ತಣ್ಣಗಿರುವ ಕೈ-ಕಾಲು ಬೆರಳುಗಳು, ಗ್ಯಾಂಗ್ರೀನ್ Cold Fingers & Toes, Digital Gangrene
  • ಸ್ಲಿರೋಡರ್ಮಾ (ಚರ್ಮ ಬಿಗುವುದು/ದಪ್ಪವಾಗುವುದು) Scleroderma (Skin Tightening / Thickening )
  • ವ್ಯಾಸ್ಕುರೇಟಿಸ್ / Vasulitis
  • ಒಣಗಿದ ಕಣ್ಣು ಮತ್ತು ಬಾಯಿ Sicca Sympotoms ( Dry Eyes and Mouth)
  • ಡರ್ಮಟೊಮಯೊಸೈಟಿಸ್/ಪೋಲಿಮಯೊಸೈಟಿಸ್ Dermatomyositis / Polymyositis
  • ಸಾರ್ಕೋಯಿಡೋಯಿಸಿಸ್ Sarcoidosis
  • ಆಟೋಇಮ್ಮುೃನ್ ಕಣ್ಣು ರೋಗಗಳು Autoimmune Eye Diseases Like Uveitis
  • ಪುನಃ ಪುನಃ ಆಗುವ ಗರ್ಭಪಾತ Recurrent Abortions
  • Anti-Phospholipid Antibody Syndrome
  • Juvenile Idiopathjc Arthritis (JIA)
  • Osteoporosis

ಪ್ರಸ್ತುತ ದಿನಗಳಲ್ಲಿ ಸಾಕಷ್ಟು ಮಂದಿಗೆ ಸಂಧಿವಾತ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಂಧಿವಾತ ರೋಗದ ಲಕ್ಷ್ಮಣ, ಗಂಭೀರತೆ ಕುರಿತು ಜನರಿಗೆ ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಅಲ್ಲದೆ, ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ. ಕರ ಪತ್ರಗಳನ್ನು ಮೂಲಕ ಅರಿವು ಮೂಡಿಸಲಾಗುತ್ತಿದೆ.

| ಡಾ.ಅರ್ಚನಾ ಎಂ. ಉಪ್ಪಿನ ಖನಗಾವಿ, ಉಪ್ಪಿನ ಮಲ್ಟಿಸ್ಪೆಶಾಲಿಟಿ ಮತ್ತು ಅರ್ಥರೈಟಿಸ್ ಕೇಂದ್ರ, ಬೆಳಗಾವಿ

Mobile: 7829371795  

1st Main, 2nd “A” Cross, Sadashivnagar, Belagavi.

UPPIN MULTISPECIALITY CLINIC & ARTHRITIS CENTRE,

ಉಪ್ಪಿನ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಮತ್ತು ಆರ್ಥರೈಟಿಸ್ ಸೆಂಟರ್

ಡಾ.ಅರ್ಚನಾ ಎಂ. ಉಪ್ಪಿನ (ಖನಗಾವಿ) ಎಂಬಿಬಿಎಸ್. ಎಂಡಿ (ಜನರಲ್ ಮೆಡಿಸಿನ್) ಫೆಲೋಷಿಪ್​ ರುಮಟಾಲಜಿ ಕನ್ಸಲ್ಟಂಟ್ ರುಮಟಾಲಜಿ ಆ್ಯಂಡ್ ಫಿಸಿಷಿಯನ್

Dr. Archana M. Uppin (Khanagavi)                                                                                                                       MBBS, MD (General Medicine Fellowship Rheumatology                                                                                                                                                                                                                     Consultant Rhematologist & Physician

Consulting HoursTime: 11am to 5pm (Monday to Saturday)                                                                                                              Sunday Holiday