ನ್ಯೂಸ್

ಜಾಫರ್ ಎಕ್ಸ್​ಪ್ರೆಸ್​ ಹೈಜಾಕ್ ಕೇಸ್​; 80ಕ್ಕೂ ಅಧಿಕ ಪ್ರಯಾಣಿಕರ ರಕ್ಷಣೆ; 13 ಉಗ್ರರ ಹತ್ಯೆ

ನವದೆಹಲಿ: ಆರ್ಥಿಕ ಸಂಕಷ್ಟ, ಉಗ್ರವಾದದಿಂದ ಬಳಲುತ್ತಿರುವ ಪಾಕಿಸ್ತಾನವು ಜಾಗತಿಕ ಮಟ್ಟದಲ್ಲಿ ತೀವ್ರ ಅಪಖ್ಯಾತಿಗೆ ಒಳಗಾಗಿದ್ದು, ಇದೀಗ ಮತ್ತೊಮ್ಮೆ ಮುಖಭಂಗವನ್ನು ಅನುಭವಿಸಿದೆ. ಪ್ರತ್ಯೇಕ ಬಲೂಚಿಸ್ತಾನ ದೇಶ ಸ್ಥಾಪನೆಗಾಗಿ ಸರ್ಕಾರದ ಬಲೂಚ್ ವಿರುದ್ಧ ಸಿಡಿದೆದ್ದಿರುವ ಲಿಬರೇಷನ್ (ಬಿಎಲ್‌ಎ) ಬೆಂಬಲಿಗರು 182ಕ್ಕೂ ಹೆಚ್ಚು ಪ್ರಯಾಣಿಕರಿದ್ದ ರೈಲನ್ನೇ ಹೈಜಾಕ್ ಮಾಡಿದ್ದು, ಅಪಹರಣ ವಿಫಲಗೊಳಿಸಲು ಯತ್ನಿಸಿದ 11 ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿರುವುದಾಗಿ ಬಿಎಲ್​ಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಗಲಭೆಗ್ರಸ್ತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಕ್ವೆಟ್ಟಾದಿಂದ ಪೇಶಾವರಕ್ಕೆ ಹೊರಟಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗ ಮಧ್ಯೆ ಹಳಿ ತಪ್ಪಿಸಿದ ಕೆಲವು ಬಂದೂಕುಧಾರಿಗಳ ತಂಡ ಬಳಿಕ ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆಯಿತು. ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಸೇನೆಯ ಸತತ ಕಾರ್ಯಾಚರಣೆಯ ಫಲವಾಗಿ 80ಕ್ಕೂ ಅಧಿಕ ಒತ್ತೆಯಾಳುಗಳನ್ನು ಉಗ್ರರ ಸೆರೆಯಿಂದ ಬಿಡಿಸಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಿವೆ. 

ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿರುವ ಪಾಕಿಸ್ತಾನ ಸೇನೆಯು, ಭದ್ರತಾ ಪಡೆಗಳು 43 ಪುರುಷರು, 26 ಮಹಿಳೆಯರು ಮತ್ತು 11 ಮಕ್ಕಳು ಸೇರಿದಂತೆ 80 ಒತ್ತೆಯಾಳುಗಳನ್ನು ಭಯೋತ್ಪಾದಕರಿಂದ ಯಶಸ್ವಿಯಾಗಿ ಬಿಡುಗಡೆ ಮಾಡಲಾಗಿದ್ದು, ಕಾರ್ಯಾಚರಣೆಯಲ್ಲಿ 13 ಉಗ್ರರನ್ನು ಎನ್​ಕೌಂಟರ್ ಮಾಡಲಾಗಿದ್ದು, ಉಳಿದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರುವ ಕಾರ್ಯ ಮುಂದುವರೆದಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

ಏನಿದು ಬೂಲಚ್ ಆರ್ಮಿ

ಪಾಕಿಸ್ತಾನದ ಪ್ರತ್ಯೇಕರಾ ವಾದಿಗಳ ಗುಂಪು, ಅಫ್ಘಾನಿಸ್ತಾನ, ಏನಿದು ಬಲೂಚ್ ఆమి ಇರಾನ್ ಜತೆ ಗಡಿ ಹಂಚಿಕೊಂಡಿರುವ ಸಮೃದ್ಧ ಬಲೂಚಿಸ್ತಾನ್ ಪ್ರಾಂತ್ಯದ ಸ್ವಾತಂತ್ಯ ಬಯಸುತ್ತಿದೆ. ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಈ ಪ್ರದೇಶವನ್ನು ಪಾಕಿಸ್ತಾನ ವಿದೇಶಿ ಹೂಡಿಕೆಗೆ ಮುಕ್ತವಾಗಿಸಿರುವುದು ಬಲೂಚ್ ಆರ್ಮಿಯ ಆಕ್ರೋಶಕ್ಕೆ ಕಾರಣ. ಜತೆಗೆ ಈ ಪ್ರದೇಶವನ್ನು ಪಾಕ್ ಸರ್ಕಾರ ನಿರ್ಲಕ್ಷಿಸಿರುವುದರಿಂದ ಇಲ್ಲಿ ಸ್ವಾತಂತ್ರ್ಯದ ಕೂಗೆದ್ದಿದೆ. ಬಲೂಚ್ ಆರ್ಮಿಯನ್ನು ಅಮೆರಿಕ ಸೇರಿ ಹಲವು ರಾಷ್ಟ್ರಗಳು ಭಯೋತ್ಪಾದನಾ ಪಟ್ಟಿಗೆ ಸೇರಿಸಿವೆ.

ಬಲೂಚಿಸ್ತಾನ ಉದಯ!

ಪಾಕಿಸ್ತಾನದ ರೈಲು ಹೈಜಾಕ್ ಘಟನೆ ಬಲೂಚಿಸ್ತಾನ ಸ್ವತಂತ್ರ ದೇಶ ಉದಯಕ್ಕೆ ಕಾರಣವಾಗಬಹುದೆಂದು ಭಾರತೀಯ ಸೇನೆಯ ನಿವೃತ್ತ ಸೈನ್ಯಾಧಿಕಾರಿ ಮೇಜ‌ರ್ ಜನರಲ್ ಜಿ.ಡಿ. ಭಕ್ಷಿ ಹೇಳಿದ್ದಾರೆ. ಪಾಕಿಸ್ತಾನ ಸೇನೆ ರೈಲು ಪ್ರಯಾಣಿಕರ ರಕ್ಷಣೆಗಾಗಿ ಭಾರಿ ರಕ್ತಪಾತ ನಡೆಸಬಹುದು. ನನ್ನ ಪ್ರಕಾರ ಇದು ಬಲೂಚಿಸ್ತಾನದ ಜನನ ಸಮಯ. ಭಾರತ ಈ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಬೇಕೆಂದು ಭಕ್ಷಿ ಅಭಿಪ್ರಾಯಪಟ್ಟಿದ್ದಾರೆ.