Dowry Murder Case: 36 ಲಕ್ಷ ರೂ. ಹಣ ತಂದುಕೊಡುವಂತೆ ಹೆಂಡತಿಗೆ ಪೀಡಿಸುತ್ತಿದ್ದ ಆರೋಪಿ ಪತಿ ವಿಪಿನ್ ಮತ್ತು ಆತನ ಹೆತ್ತವರು, ಜಗಳ ತಾರಕಕ್ಕೇರುತ್ತಿದ್ದಂತೆ ಯುವತಿಯನ್ನು ಎಳೆದಾಡಿ, ಜೀವಂತವಾಗಿ ಬೆಂಕಿ ಹಚ್ಚಿ ಕೊಂದ ಘಟನೆ ಸದ್ಯ ದೇಶವ್ಯಾಪಿ ದೊಡ್ಡ ಸಂಚಲನ ಹುಟ್ಟುಹಾಕಿದೆ. ಅತ್ತೆ-ಮಾವ, ಗಂಡ ಸೇರಿಕೊಂಡು ಸೊಸೆಯನ್ನು ಇಷ್ಟು ಭೀಕರವಾಗಿ ಹತ್ಯೆಗೈದ ಕೃತ್ಯ ಹಲವರನ್ನು ಭಯದ ಭೀತಿಗೆ ನೂಕಿದೆ. ಸದ್ಯ ಈ ಪ್ರಕರಣದಲ್ಲಿ ಬಂಧಿತರಾಗಿರುವ ಮೃತ ನಿಕ್ಕಿ ಪತಿ, ಅತ್ತೆ-ಮಾವ ಮತ್ತು ವಿಪಿನ್ ಸಹೋದರನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಮಧ್ಯೆ ಮತ್ತೊಂದು ಅಚ್ಚರಿ ಸಂಗತಿ ಹೊರಬಿದ್ದಿದೆ.
ಇದನ್ನೂ ಓದಿ: ಇಳಿಕೆಯತ್ತ ಚಿನ್ನ, ಏರಿಕೆಯತ್ತ ಬೆಳ್ಳಿ; ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ-ಬೆಳ್ಳಿ ದರ | Gold Rates
ಉತ್ತರ ಪ್ರದೇಶದ ನೋಯ್ಡಾದಲ್ಲಿ ವರದಿಯಾದ ನಿಕ್ಕಿ ಭಾಟಿಯ ಕೊಲೆ ಪ್ರಕರಣಕ್ಕೆ ಸದ್ಯ ಜಾಲತಾಣ ಸೇರಿದಂತೆ ಹಲವೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಗಂಡ-ಹೆಂಡತಿ ನಡುವೆ ಶುರುವಾದ ಜಗಳ ಬೆಂಕಿ ಹಚ್ಚುವವರೆಗೆ ಏಕೆ ಹೋಯಿತು? ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಎಂಬುದನ್ನು ಇದೀಗ ಉತ್ತರ ಪ್ರದೇಶ ಪೊಲೀಸರು ತಮ್ಮ ತನಿಖೆಯಲ್ಲಿ ಬಹಿರಂಗಪಡಿಸಿದ್ದಾರೆ.
'ದಿ ಹಿಂದೂಸ್ಥಾನ್ ಟೈಮ್ಸ್' ವರದಿ ಪ್ರಕಾರ, "ಆಗಸ್ಟ್ 21ರಂದು ಅಂದರೆ, ನಿಕ್ಕಿ ಹತ್ಯೆಯಾದ ದಿನ, ಆಕೆಯ ಸಹೋದರಿ ಕಾಂಚನ್ ಜೊತೆ ಬ್ಯೂಟಿ ಪಾರ್ಲರ್ ಅನ್ನು ಪುನಃ ನಡೆಸಲು ಬಯಸಿದ್ದಕ್ಕಾಗಿ ದಂಪತಿಗಳು ನಡುವೆ ಜಟಾಪಟಿ ಆರಂಭವಾಯಿತು. ಹೆಂಡತಿಯ ಈ ಮಾತನ್ನು ಒಪ್ಪದ ವಿಪಿನ್, ಅದನ್ನು ತಿರಸ್ಕರಿಸಿದ್ದಾರೆ. ಇಲ್ಲಿಗೆ ಸುಮ್ಮನಾಗದ ನಿಕ್ಕಿ, ಧೈರ್ಯದಿಂದ ನಮ್ಮ ನಿರ್ಧಾರವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಆ ದಿನ ಮಧ್ಯಾಹ್ನ 3.30ರ ಸುಮಾರಿಗೆ, ನಿಕ್ಕಿ ತಾನು ಮತ್ತು ಸಹೋದರಿ ಪಾರ್ಲರ್ ಮತ್ತೆ ತೆರೆಯುವುದಾಗಿ ಗಂಡನಿಗೆ ಹೇಳಿದ್ದೇ ಜಗಳಕ್ಕೆ ಕಾರಣವಾಗಿದೆ" ಎಂದು ಕಸ್ನಾ ಸ್ಟೇಷನ್ ಹೌಸ್ ಅಧಿಕಾರಿ ಧರ್ಮೇಂದ್ರ ಶುಕ್ಲಾ ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಂದಿದ್ದ ಸುಗ್ರೀವಾಜ್ಞೆ ಪ್ರತಿ ಹರಿದು ಹಾಕಿದ್ದರಂತೆ ರಾಹುಲ್ ಗಾಂಧಿ! |Rahul Gandhi
"ಈ ವೇಳೆ ನಿಕ್ಕಿಗೆ ಗದರಿದ ವಿಪಿನ್, ಬ್ಯೂಟಿ ಪಾರ್ಲರ್ ನಡೆಸುವುದು ಮತ್ತು ರೀಲ್ಸ್ ಮಾಡುವುದಕ್ಕೆ ನಮ್ಮ ಮನೆಯಲ್ಲಿ ಅನುಮತಿ ಇಲ್ಲ ಎಂದಿದ್ದಾನೆ. ಇದಕ್ಕೆ ಒಪ್ಪದ ಪತ್ನಿ ಮೇಲೆ ಕೈಮಾಡಿರುವ ಪತಿ, ಆಕೆಯನ್ನು ಮನಬಂದಂತೆ ಥಳಿಸಿದ್ದಾನೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಾಗಿ ಸುಮಾರು ಎರಡು ಗಂಟೆಗಳ ನಂತರ, ನಿಕ್ಕಿಯ ಸಹೋದರನಿಗೆ ಕಾಂಚನ್ ಫೋನ್ ಮಾಡಿ, ನಿಕ್ಕಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಿದ್ದಾಳೆ. ವರದಕ್ಷಿಣೆ ವಿವಾದಕ್ಕೆ ನನ್ನ ಸಹೋದರಿಗೆ ಆಕೆಯ ಕುಟುಂಬಸ್ಥರು ಬೆಂಕಿಯಿಟ್ಟಿದ್ದಾರೆ ಎಂದು ಸಂಜೆ 5.30ರ ಆಸುಪಾಸಿಗೆ ಕಾಂಚನ್ ದೂರವಾಣಿ ಕರೆ ಮಾಡಿರುವುದಾಗಿ ವರದಿ ಹೇಳಿದೆ.
ವರದಕ್ಷಿಣೆ ವಿಚಾರವಾಗಿ ಪತಿ ಮತ್ತು ಅತ್ತೆ-ಮಾವನಿಂದಲೇ ಗೃಹಿಣಿಯೊಬ್ಬಳು ಭೀಕರವಾಗಿ ಹತ್ಯೆಯಾದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 36 ಲಕ್ಷ ರೂ. ಹಣ ತಂದುಕೊಡುವಂತೆ ಪೀಡಿಸುತ್ತಿದ್ದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದಿರುವುದು ಸದ್ಯ ಸ್ಥಳೀಯರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಈ ಪ್ರಕರಣದ ಆರೋಪಿಗಳಾದ ಆಕೆಯ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ,(ಏಜೆನ್ಸೀಸ್).