ನ್ಯೂಸ್

ಸಿಐಡಿ ಇನ್‌ಸ್ಪೆಕ್ಟರ್ ವಿರುದ್ಧ ವರದಕ್ಷಣೆ ಕಿರುಕುಳ ಕೇಸ್

ಗೋವಿಂದರಾಜು ಚಿನ್ನಕುರ್ಚಿ

ಬೆಂಗಳೂರು: ಸಿಐಡಿ ಇನ್‌ಸ್ಪೆಕ್ಟರ್ ಬಿ. ಮಲ್ಲಿಕಾರ್ಜುನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಿಕೆರೆ ನಿವಾಸಿ ಭವಾನಿ, ತನ್ನ ಪತಿ ಇನ್‌ಸ್ಪೆಕ್ಟರ್ ದೂರು ನೀಡಿದ್ದಾರೆ. ಈ ಮೇರೆಗೆ ಮಲ್ಲಿಕಾರ್ಜುನ್ ಸೇರಿ ನಾಲ್ವರ ವಿರುದ್ಧ ವಂಚನೆ ಮತ್ತು ವರದಕ್ಷಿಣೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2012ರಲ್ಲಿ ಮಲ್ಲಿಕಾರ್ಜುನ್ ಜತೆ ನನ್ನ ಮದುವೆ ಆಗಿದ್ದು, ವಿವಾಹ ಸಮಯದಲ್ಲಿ 8 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ಮತ್ತು 5 ಕೆಜಿ ಬೆಳ್ಳಿ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ಹಣಕ್ಕಾಗಿ ಪತಿ ಪೀಡಿಸುತ್ತಿದ್ದ. ಇದಕ್ಕೆ ಅವರ ಸಹೋದರ ಬಸಪ್ಪ, ಸಾಕುತಾಯಿ ಶಿವಮ್ಮ ಸಾಥ್ ನೀಡಿದ್ದರು. 1 ವರ್ಷ ತುಂಬುವಷ್ಟರದಲ್ಲೇ ಗರ್ಭ ಧರಿಸಿದಾಗ ಅಬಾರ್ಷನ್‌ಗೆ ಒತ್ತಡ ಹೇರಿ ಪತಿ ಕಿರುಕುಳ ನೀಡಿದ್ದರು. ಆದ್ಯಾಗೂ ಗಂಡು ಮಗುವಿಗೆ ಜನ್ಮ ನೀಡಿದೆ. ಬಾಣಂತನಕ್ಕಾಗಿ ತವರು ಮನೆಗೆ ಹೋದಾಗ ಬೇರೊಬ್ಬ ಮಹಿಳೆ ಜತೆಗೆ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು.

ಆ ಸಮಯದಲ್ಲಿ ಬಸವೇಶ್ವರನಗರ ಠಾಣೆಯಲ್ಲಿ ಎಸ್‌ಐಯಾಗಿ ಮಲ್ಲಿಕಾರ್ಜುನ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಬಸವೇಶ್ವರನಗರ ಠಾಣೆಗೆ ದೂರು ಸಲ್ಲಿಸಿದ್ದೆ. ಇದನ್ನೇ ನೆಪ ಮಾಡಿಕೊಂಡು ಪತಿ ವಿರುದ್ಧ ದೂರು ಮಾಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರಿನಲ್ಲಿ ಭವಾನಿ ಆರೋಪಿಸಿದ್ದಾರೆ. ಇದರ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್‌ಸ್ಪೆಕ್ಟರ್ ಹೇಳುವುದು ಏನು :

ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನಿಂದ ಭವಾನಿ ದೂರವಾಗಿದ್ದಳು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2018ರಲ್ಲಿ ಆಕೆಯಿಂದ ವಿಚ್ಚೇದನ ಪಡೆದಿದ್ದೇನೆ. ಬೇರೆ ಮಹಿಳೆ ಜತೆ ಸಂಬಂಧ ಹೊಂದಿದ್ದೇನೆ ಎಂದು ಆರೋಪಿಸುವ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ. ಆಕೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೆನೆ ಎಂದು ತಿಳಿಸಿದ್ದಾರೆ.