‘ವಸತಿ ಇತಿ’ ವಾಸ್ತು. ನಾವು ವಾಸ ಮಾಡುವ ನೆಲ (ಸ್ಥಳ) ಎಂದರ್ಥ. ‘ಶಾಸ್ತ್ರ ಇತಿ’ ನಿಯಮ (ವಿಜ್ಞಾನ) ಎಂದರ್ಥ. ಇದು ಸಂಸ್ಕೃತ ಶಬ್ದದ ಸರಳ ಅರ್ಥವಾಗಿದೆ. ವಾಸ್ತು ಶಾಸ್ತ್ರವು ನಮ್ಮ ಭಾರತ ದೇಶದ ಪುರಾತನ ಭೂವಿಜ್ಞಾನಗಳಲ್ಲಿ ಪ್ರಮುಖವಾಗಿದೆ. ಇದು 64 ವಿದ್ಯೆ ಕಲೆಗಳಲ್ಲಿ ಒಂದಾಗಿದೆ ಎಂದು ಹೇಳುತ್ತಾರೆ. ನಾವು ವಾಸಿಸುವ ಮನೆ, ಆ ಮನೆಯ ಸ್ಥಳ, ಆ ಮನೆಯ ಸುತ್ತಮುತ್ತಲ ಇರುವ ಪರಿಸರ, ಆ ಸ್ಥಳದ ಆಕಾರ, ಆ ಸ್ಥಳದ ಸರಹದ್ದು, ಉಚ್ಚ ನೀಚಗಳು, ಹಳ್ಳದಿಣ್ಣೆಗಳು, ಬಾವಿ, ಕಲ್ಯಾಣಿ, ಕೆರೆ, ನದಿ ಸಮುದ್ರ ಇವೆಲ್ಲವುಗಳ ಸ್ಥಳ, ಗುಣ, ಫಲ, ವಿಶೇಷಗಳನ್ನು ತಿಳಿಯುವ ಕಲೆಗೆ ‘ವಾಸ್ತು ಶಾಸ್ತ್ರ’ ಎಂದು ಕರೆಯುತ್ತಾರೆ.
ಮಾನವನು ಖರೀದಿಸುವ ಭೂಮಿ ವಾಸ್ತು ವಿಜ್ಞಾನದ ಸೂತ್ರಗಳನ್ವಯ ಇದೆಯೇ ಎಂಬುದನ್ನು ನಮ್ಮ ಪೂರ್ವಿಕರು ಭೂ-ಪರೀಕ್ಷೆ ಮೂಲಕ ಪತ್ತೆ ಹಚ್ಚುತ್ತಿದ್ದರು. ಖರೀದಿಸುವ ಭೂಮಿ ಸೂತ್ರಗಳನ್ವಯ ಇರಬೇಕು. ಅಂದರೆ ಆ ಭೂಮಿಯ ದಿಕ್ಕುಗಳು, ಆಯತಾಕಾರ, ಭೂಮಿಯ ಕಾಂತೀಯ ಕ್ಷೇತ್ರ (Mಚಜ್ಞಛಿಠಿಜ್ಚಿ ಊಜಿಛ್ಝಿಛ), ಭೂಮಿಯ ಅಂತರ್ಗತ ವಿಕಿರಣ, (ಎಛಿಟಟಚಠಿಜಜ್ಚಿ ಘಟ್ಞಛಿಠ), ಭೂಮಿಯ ಸುತ್ತಮುತ್ತ ಇರುವ ಪರಿಸರ, ಹಳ್ಳ-ದಿಣ್ಣೆಗಳು, ಈಶಾನ್ಯ ದಿಕ್ಕಿನಿಂದ ಆ ಭೂಮಿಗೆ ಪ್ರವೇಶಿಸುವ ಅಲ್ಟ್ರಾ ವೈಲೇಟ್ ಕಿರಣಗಳು, ಪೂರ್ವ ದಿಕ್ಕಿನಿಂದ ಚಲಿಸುವ ಆಮ್ಲಜನಕ, ಅತಿಕೆಂಪು ಕಿರಣಗಳು, (ಐfಚ್ಟಛಿಛ ್ಕಢಠ), ಏರು ತಗ್ಗುಗಳಿರದೆ ಸಮತಟ್ಟಾಗಿರಬೇಕು. ನುಣುಪಾದ ಮಣ್ಣಿನಿಂದ ಕೂಡಿರಬೇಕು, ಪೂರ್ವ ಮತ್ತು ಉತ್ತರ ದಿಕ್ಕುಗಳು ತಗ್ಗಾಗಿದ್ದು, ಆ ದಿಕ್ಕಿಗೆ ನೀರು ಪ್ರದಕ್ಷಿಣಾಕಾರವಾಗಿ ಹರಿಯುವಂತಿರಬೇಕು. ಬಿತ್ತಿದರೆ ಬೀಜವು ಬೇಗನೆ ಮೊಳಕೆ ಬರುವಂತಿರುವ ಮಣ್ಣಿನಿಂದ ಕೂಡಿರಬೇಕು. ಇಂತಹ ಲಕ್ಷಣಗಳುಳ್ಳ ಭೂಮಿಯು ಅತ್ಯುತ್ತಮವಾದುದು. ಇದಕ್ಕಿಂತ ವಿಪರೀತ ಲಕ್ಷಣಗಳಿರುವ ಭೂಮಿಯನ್ನು ಖರೀದಿಸಬಾರದು.
ಆಯ್ಕೆ ಮಾಡಲೇಬಾರದ ಅಥವಾ ಖರೀದಿಸಲೇಬಾರದ ಆಕಾರದ ಮತ್ತು ದೋಷದಿಂದ ಕೂಡಿದ ಸುಮಾರು 16 ಸೂತ್ರಗಳನ್ನು ಪೂರ್ವಿಕರು ನಮಗೆ ವಾಸ್ತುಶಿಲ್ಪ ಶಾಸ್ತ್ರದಲ್ಲಿ ನೀಡಿದ್ದಾರೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಕುಟುಂಬದವರು ಖರೀದಿಸಿದ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 364ರ 3-16 ಎಕರೆ ಭೂಮಿ ನಕ್ಷೆಯ ಅನುಸಾರ (ನಮಗೆ ದೊರೆತಿರುವ ನಕ್ಷೆ ಪ್ರಕಾರ) ವಾಸ್ತು ವಿಜ್ಞಾನ ಶಾಸ್ತ್ರಗಳ ಸೂತ್ರಗಳ ವಿರುದ್ಧವಾಗಿದೆ. ಈ ವಾಸ್ತುದೋಷದಿಂದ ಈ ಭೂಮಿಯ ಬಗ್ಗೆ ರಾಜ್ಯ, ರಾಷ್ಟ್ರಗಳ ಮಟ್ಟಿಗೆ ವಿವಾದ ಸೃಷ್ಟಿಯಾಗಿದೆ.
ಮುಖ್ಯವಾಗಿ, ಸಹೋದರನಾದವನು ತನ್ನ ಸಹೋದರಿಗೆ ಅರಿಶಿಣ-ಕುಂಕುಮ ಉಡುಗೊರೆಗಾಗಿ ಭೂಮಿಯನ್ನು ನೀಡುವುದು, ನಮ್ಮ ಪಾರಂಪರ್ಯ ಸಂಸ್ಕೃತಿಯಿಂದ ನಡೆದು ಬಂದಿದ್ದರೂ, ಇಂತಹ ಭೂಮಿ ವಾಸ್ತು ವಿಜ್ಞಾನದ ಸೂತ್ರದನ್ವಯ ಇದ್ದರೆ ಮಾತ್ರ ಉಡುಗೊರೆಯಾಗಿ ನೀಡಬೇಕು, ಇಲ್ಲದಿದ್ದರೆ ಸಹೋದರಿಯ ಕುಟುಂಬ ಕಷ್ಟಕ್ಕೆ ಸಿಲುಕುತ್ತದೆ. ಉಡುಗೊರೆಯಾಗಿ ಸಹೋದರನು ತನ್ನ ಸಹೋದರಿಗೆ ನೀಡಿರುವ ಈ ಭೂಮಿಯಲ್ಲಿ ಅನೇಕ ವಾಸ್ತುದೋಷಗಳನ್ನು ಕಾಣಬಹುದು.
ಈಶಾನ್ಯ ದಿಕ್ಕು (ಬಡಮುಡಣ ದಿಕ್ಕು): ವಾಸ್ತು ವಿಜ್ಞಾನ ಶಾಸ್ತ್ರದಲ್ಲಿ ಈ ದಿಕ್ಕನ್ನು ದೇವಮೂಲೆ ಎಂದು ಕರೆಯುತ್ತಾರೆ. ಉಡುಗೊರೆಯಾಗಿ ನೀಡಿದ ಈ ಭೂಮಿಯಲ್ಲಿ ಈಶಾನ್ಯ ಭಾಗ ದೋಷಪೂರಿತವಾಗಿದೆ. ಅಂದರೆ ಕಡಿತಗೊಂಡಿರುವುದಾಗಿ ಕಂಡುಬಂದಿದೆ. ಆದುದರಿಂದ ಈ ಭೂಮಿಗೆ ಧನಾತ್ಮಕ ಶಕ್ತಿಯಿರುವುದಿಲ್ಲ. ಭೂಮಿಯ ದೋಷದಿಂದಾಗಿ ಕುಟುಂಬದ ಮುಖ್ಯಸ್ಥರಿಗೆ ಉದ್ಯೋಗದಲ್ಲಿ ಅಡ್ಡಿಗಳು, ವಿನಾಕಾರಣ ಆರೋಪಗಳು, ಮಾನಸಿಕ ಅಸಮತೋಲನ, ಪುತ್ರ ಸಂತಾನದ ಮೇಲೆ ಬಾಧೆಗಳು ಉಂಟಾಗುತ್ತವೆ.
ಮೂಡಣ ಅಂದರೆ ಪೂರ್ವ-ಮೂಡು ತೆಂಕಣ ಎಂದರೆ ಆಗ್ನೇಯ ದಿಕ್ಕುಗಳು ಸಂಪೂರ್ಣವಾಗಿ ಕಡತಗೊಂಡಿದೆ. ಒಂದು ಕುಟುಂಬದ ಯಜಮಾನಿಗೆ ಈ ಎರಡು ದಿಕ್ಕು ಮುಖ್ಯ. ಈ ದಿಕ್ಕು ದೋಷಪೂರಿತವಾದರೆ ಆ ಭೂಮಿ ಪಡೆದ ಸ್ತ್ರೀಯರು ತೊಂದರೆಪಡುತ್ತಾರೆ. ಈ ದಿಕ್ಕನ್ನು ಅಗ್ನಿಮೂಲೆ ಎಂದು ಕರೆಯಲಾಗಿದೆ.
ನೈರುತ್ಯ- ಪಡುತೆಂಕಣ ಮತ್ತು ವಾಯವ್ಯ- ಪಡುಬಡಗು ದಿಕ್ಕುಗಳು ಈ ಭೂಮಿಯಲ್ಲಿ ದೋಷಪೂರಿತವಾಗಿವೆ. ವಾಯವ್ಯ ದಿಕ್ಕು ದೋಷಪೂರಿತವಾದರೆ ಆ ಭೂಮಿಯು ವಿವಾದಕ್ಕೆ ಒಳಗಾಗಿ, ಕೋರ್ಟು-ಕಚೇರಿ ಅಲೆಯಬೇಕಾಗುತ್ತದೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಯಮ್ಯನವರು ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಬಹುಕಾಲದಿಂದ ವಾಸ್ತುಶಾಸ್ತ್ರದ ಪ್ರಕಾರ ಮುಚ್ಚಿದ್ದ ಬಾಗಿಲನ್ನು ತೆರೆಯಲು ಅಧಿಕಾರಿಗಳಿಗೆ ಸೂಚಿಸಿ, ದಕ್ಷಿಣದ ಬಾಗಿಲನ್ನು ತೆರೆಸಿದ್ದು ಸಹ ವಾಸ್ತು ದೋಷಪೂರಿತ ಅಗ್ನಿಗೆ ತುಪ್ಪ ಸುರಿದಂತಾಗಿದೆ.