ನ್ಯೂಸ್

ಭಾರತವನ್ನು ರಷ್ಯಾ ಜತೆ ಹೋಗಲು ಬಿಡಬೇಡಿ: ಯುರೋಪ್, ಅಮೆರಿಕಕ್ಕೆ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಎಚ್ಚರಿಕೆ | Volodymyr Zelensky

Volodymyr Zelensky: ಭಾರತವನ್ನು ಪಶ್ಚಿಮ ದೇಶಗಳು ತನ್ನ ನಿಕಟ ಸಂಬಂಧಗಳ ಜತೆಗೆ ರಷ್ಯಾದಿಂದ ಇಂಧನ ಆಮದಿನ ವಿಷಯವನ್ನು ಇನ್ನೊಮ್ಮೆ ವಿರ್ಮಶಿಸುವಂತೆ ಮನವೊಲಿಸಬಹುದು ಎಂದು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಈ ಬಗ್ಗೆ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಝೆಲೆನ್ಸ್ಕಿ, ರಷ್ಯಾದೊಂದಿಗಿನ ಯುದ್ಧ ಮುಂದುವರೆದಂತೆ ಭಾರತವನ್ನು ಪಾಶ್ಚಿಮಾತ್ಯ ದೇಶಗಳು ವ್ಯಾಪಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು. ನಾವು ರಷ್ಯಾದ ಜತೆಗಿನ ಭಾರತ ಸಂಬಂಧವನ್ನು ಹಿಂತೆಗೆದುಕೊಳ್ಳದಂತೆ ನಾವು ಎಲ್ಲವನ್ನೂ ಮಾಡಬೇಕು. ಭಾರತ ರಷ್ಯಾದ ಇಂಧನ ವಲಯದ ಬಗ್ಗೆ ತಮ್ಮ ಮನೋಭಾವವನ್ನು ಬದಲಾಯಿಸುತ್ತಾರೆ ಎಂದು ನನಗೆ ಖಚಿತವಾಗಿದೆ ಎಂದಿದ್ದಾರೆ.

ಭಾರತ - ಯುಕ್ರೇನ್​ ಸಂಬಂಧವನ್ನು ಗಟ್ಟಿಗೊಳಿಸಬೇಕು: ಝೆಲೆನ್ಸ್ಕಿ

ಭಾರತದ ಜತೆ ಯುಕ್ರೇನ್​​​ ಸಹಕಾರವನ್ನು ಹೆಚ್ಚಿಸುವಂತೆ ಅಮೆರಿಕ ಮತ್ತು ಯುರೋಪ್ ಅನ್ನು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ಭಾರತದ ಜತೆಗಿನ ಸಂಬಂಧವು ಕೈವ್‌ಗೆ ಬೆಂಬಲವನ್ನು ಬಲಪಡಿಸಬಹುದು. ನಮಗೆ ಈ ಪ್ರಶ್ನೆಗಳಿವೆ, ಆದರೆ ಅಧ್ಯಕ್ಷ ಟ್ರಂಪ್ ಯುರೋಪಿಯನ್ನರೊಂದಿಗೆ ಇದನ್ನು ನಿರ್ವಹಿಸಬಹುದು ಮತ್ತು ಭಾರತದೊಂದಿಗೆ ಹೆಚ್ಚು ನಿಕಟ ಮತ್ತು ಬಲವಾದ ಸಂಬಂಧಗಳನ್ನು ಬಲಪಡಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಝೆಲೆನ್ಸ್ಕಿ ಸೂಚಿಸಿದ್ದಾರೆ.

ರಷ್ಯಾ-ಯುಕ್ರೇನ್ ಸಂಘರ್ಷದಲ್ಲಿ ಭಾರತದ ಪಾತ್ರವೇನು?

ಭಾರತವು ರಷ್ಯಾ ಜತೆ ವ್ಯಾಪಾರ ಸಂಬಂಧಗಳನ್ನು ಉಳಿಸಿಕೊಂಡಿದೆ. ವಿಶೇಷವಾಗಿ ಇಂಧನ ವಲಯದಲ್ಲಿ, ಇದೇ ಸಮಯದಲ್ಲಿ ಭಾರತ ಯುದ್ಧದಲ್ಲಿ ಶಾಂತಿ ಮತ್ತು ಸಂವಾದಕ್ಕೆ ಕರೆ ನೀಡಿದೆ. ಭಾರತವು ಹೆಚ್ಚಾಗಿ ನಮ್ಮೊಂದಿಗಿದೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ. ಆದರೆ, ಈ ಬೆಂಬಲವನ್ನು ಕ್ರೋಢೀಕರಿಸಲು ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳಿಂದ ಬಲವಾದ ನಂಬಿಕೆಯ ಅಗತ್ಯವಿದೆ. ಅಲ್ಲದೆ, ಯುರೋಪಿಯನ್ನರೊಂದಿಗೆ, ಭಾರತದೊಂದಿಗೆ ಹೆಚ್ಚು ನಿಕಟ ಮತ್ತು ಬಲವಾದ ಸಂಬಂಧವನ್ನು ಮಾಡಿಕೊಳ್ಳಿ ಎಂದು ಯುಕ್ರೇನ್ ಅಧ್ಯಕ್ಷ​ ಹೇಳಿದ್ದಾರೆ. (ಏಜೆನ್ಸೀಸ್)