ಮುಕ್ತೇಶ್ವರ(ಉತ್ತರಾಖಂಡ): ವಿವಾಹಿತ ಪುರುಷರ ಪ್ರೇಮದ ಬಲೆಗೆ ಸಿಲುಕಬೇಡಿ- ಹೀಗೆಂದು ಅಭಿನೇತ್ರಿ, ಟೆಲಿವಿಷನ್ ನಿರ್ದೇಶಕಿ ನೀನಾ ಗುಪ್ತಾ ತಮ್ಮ ಮನದಾಳದ ಮಾತುಗಳನ್ನು ಇನ್ಸ್ಟಾಗ್ರಾಂ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಶುಭ್ ಮಂಗಳ್ ಜ್ಯಾದಾ ಸಾವಾದಾನ್ ಬಿಡುಗಡೆಯ ಯಶಸ್ಸು ಮತ್ತು ಖುಷಿ ಆಚರಣೆಗಾಗಿ ನೀನಾ ಗುಪ್ತಾ ಅವರು ಉತ್ತರಾಖಂಡದ ಮುಕ್ತೇಶ್ವರದಲ್ಲಿದ್ದಾರೆ. ಅಲ್ಲಿನ ಪರಿಸರದಲ್ಲಿ ಮನದಾಳದ ಮಾತುಗಳನ್ನು ಆಡಿಕೊಂಡಿರುವ ನೀನಾ, ವಿವಾಹಿತ ಪುರುಷರ ಜತೆಗಿನ ಒಡನಾಟ ಆರಂಭದಲ್ಲಿ ಎಲ್ಲವೂ ಖುಷಿ ಕೊಡುತ್ತದೆ. ಅವರಿಗೂ ಅದೇ ಬೇಕಾಗಿರುತ್ತದೆ. ಹೀಗೆ ಪ್ರತಿ ಹಂತವನ್ನೂ ವಿವರಿಸುತ್ತ ಯುವತಿಯರನ್ನು, ಮಹಿಳೆಯರನ್ನು ಈ ರೀತಿ ಒಡನಾಟ ತಂದೊಡ್ಡುವ ಸಂಕೀರ್ಣ ಸನ್ನಿವೇಶದ ಕಡೆಗೆ ಬೆಳಕು ಚೆಲ್ಲಿದ್ದಾರೆ.
ವಿಡಿಯೋದ ಕೊನೆಯಲ್ಲಿ ತಾನು ಕೂಡ ಇಂತಹ ತಪ್ಪೆಸಗಿದ್ದೇನೆ. ಇದರಿಂದ ನೋವು ಉಂಡಿದ್ದೇನೆ. ಇಂತಹ ತಪ್ಪು ನೀವು ಮಾಡಬೇಡಿ ಎಂದು ಎಚ್ಚರಿಸುತ್ತಿದ್ದೇನೆ ಎಂದು ಹೇಳಿ ಭಾವುಕ ವಿಷಯವನ್ನು ನಿರ್ಲಿಪ್ತತೆಯಿಂದ ಹೇಳಿ ಎಚ್ಚರಿಸಿದ್ದಾರೆ. ಅವರ ಮಾತುಗಳಲ್ಲೇ ಆ ಮಾತುಗಳನ್ನು ಕೇಳುವುದು ಒಳಿತು.