ನ್ಯೂಸ್

ಉದ್ಧಟತನ ತೋರಿದ ಸೋನು ನಿಗಮ್ ಸಿಂಗ್ ! ಕನ್ನಡಿಗರನ್ನು ಕೆಣಕಿ ಹಿಂದಿ ಪರ ವಕಾಲತ್ತು ವಹಿಸಿದ Sonu Nigam Singh

ಬೆಂಗಳೂರು: ( Sonu Nigam Singh )  ಬ್ಯಾಂಕ್ ಮ್ಯಾನೇಜರ್ ಮತ್ತು ಗ್ರಾಹಕರ ನಡುವಿನ ಕನ್ನಡ ವಿರೋಧಿ ಭಾಷಾ ಸಂಘರ್ಷದ ವೈರಲ್ ವೀಡಿಯೊದ ಕುರಿತು ಕಿಡಿಕಾರಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಸೋನು ನಿಗಮ್ ಸಿಂಗ್​ ಆಕ್ರೋಶ ವ್ಯಕ್ತಪಡಿಸಿ  ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನ SBI ಬ್ಯಾಂಕ್‌ನಲ್ಲಿ ಮ್ಯಾನೇಜರ್ ಕನ್ನಡ ಮಾತನಾಡಲು ನಿರಾಕರಿಸಿದ ಘಟನೆ ವಿವಾದ ಸೃಷ್ಟಿಸಿದ್ದು, ಈ ಕುರಿತು ಕನ್ನಡ ಪರ ಹೋರಾಟಗಾರರ ಪ್ರತಿಭಟನೆಗೆ ಮಣಿದ ಮ್ಯಾನೇಜರ್ ಕ್ಷಮೆ ಕೋರಿದ್ದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ವಿಷಯದಲ್ಲಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಎಸ್​ಬಿಐ ಬ್ಯಾಂಕ್​ನ ಬ್ರ್ಯಾಂಚ್ ಮ್ಯಾನೇಜರ್ ಅರವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬ್ಯಾಂಕಿಂಗ್ ವಲಯ ಸಿಬ್ಬಂದಿಗಳು ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಅಗತ್ಯತೆ ಇದೆ’ ಎಂದಿದ್ದರು. ಈ ಬೆನ್ನಲ್ಲೇ ಸೋನು ನಿಗಮ್ ಸಿಂಗ್​ ಟ್ವೀಟ್ ಮಾಡಿದ್ದಾರೆ.

ಸೋನು ನಿಗಮ್ ಸಿಂಗ್​​​ ಟ್ವೀಟ್​​ನಲ್ಲಿ ಏನಿದೆ?:  ಸಂಸದ ತೇಜಸ್ವಿ ಸೂರ್ಯರ ಈ ಟ್ವೀಟ್ ಗೆ ಸೋನು ನಿಗಮ್ ಸಿಂಗ್ ಕಿಡಿಕಾರಿದ್ದು, ‘ಕನ್ನಡ ಸಿನಿಮಾ ಹಿಂದಿಗೆ ಡಬ್​ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ. ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೋಬ್ಬ ಭಾಷಾ ಹೋರಾಟಗಾರ ಅಷ್ಟೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.

ಸೋನು ನಿಗಮ್ ಸಿಂಗ್ ಯಾರು?:

ಬಾಲಿವುಡ್ ಗಾಯಕ ಸೋನು ನಿಗಮ್ ಹೆಸರು ತಳುಕು ಹಾಕಿಕೊಂಡಿದೆ. ಏಕೆಂದರೆ ಪ್ರಸ್ತುತ ತೇಜಸ್ವಿ ಸೂರ್ಯ ಕುರಿತು ಟ್ವೀಟ್ ಮಾಡಿರುವ ಸೋನು ನಿಗಮ್ ಬಾಲಿವುಡ್ ಗಾಯಕ ಸೋನು ನಿಗಮ್ ಅಲ್ಲ... ಈತನ ಹೆಸರು ಸೋನು ನಿಗಮ್ ಸಿಂಗ್ (@SonuNigamSingh). ಈ ಸೋನು ನಿಗಮ್ ಸಿಂಗ್ ಎಕ್ಸ್ ಖಾತೆಯಲ್ಲಿನ ಮಾಹಿತಿಯಂತೆ ಈತ ಬಿಹಾರ ನಿವಾಸಿಯಾಗಿದ್ದು, ವೃತ್ತಿಯಲ್ಲಿ ವಕೀಲ ಎಂದು ಹೇಳಿಕೊಂಡಿದ್ದಾನೆ.

ಈ ಟ್ವೀಟ್ ಮಾಡಿದ್ದು ಗಾಯಕ ಸೋನು ನಿಗಮ್ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ ಗಾಯಕ ಸೋನು ನಿಗಮ್ ಅವರು ಟ್ವಿಟರ್ ಬಳಕೆ ಮಾಡೋದು ನಿಲ್ಲಿಸಿ ಏಳು ವರ್ಷಗಳು ಕಳೆದಿವೆ.