ಭವ್ಯ ರಾಮ ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ಗೆ ದೇಶದ ಮೂಲೆ ಮೂಲೆಗಳಿಂದ ದೇಣಿಗೆ ಹರಿದುಬರುತ್ತಿದೆ. ಈವರೆಗೆ ಟ್ರಸ್ಟ್ಗೆ 15 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ ಎಂದು ಕೋಶಾಧ್ಯಕ್ಷ ಗೋವಿಂದ ದೇವ ಗಿರಿ ಮಹಾರಾಜ್ ಮಾಹಿತಿ ನೀಡಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಒಬ್ಬ ವ್ಯಕ್ತಿ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ಸಂಗ್ರಹವಾದ ನಿಧಿ ಕೂಡ ಟ್ರಸ್ಟ್ಗೆ ಹಸ್ತಾಂತರ ಮಾಡಲಾಗುತ್ತದೆ. ಮಂದಿರ ನಿರ್ವಣಕ್ಕೆ ಈವರೆಗೆ ಸುಮಾರು 35 ಕೋಟಿ ರೂ. ಸಂಗ್ರಹವಾಗಿದೆ. ಇನ್ನೂ ಅನೇಕ ವ್ಯಕ್ತಿಗಳು, ಧಾರ್ವಿುಕ ಸಂಸ್ಥೆಗಳು ಮಂದಿರಕ್ಕೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಣೆ ಮಾಡಿವೆ. ಶಿಲಾನ್ಯಾಸ ನಡೆದ ಕೆಲ ದಿನಗಳಲ್ಲೇ ಈ ಹಣ ಟ್ರಸ್ಟ್ ಖಾತೆಗೆ ಜಮಾ ಆಗಲಿದೆ ಎಂದು ಎಂದು ಅವರು ಮಾಹಿತಿ ನೀಡಿದ್ದಾರೆ.
ಮೃತ ಕರಸೇವಕರ ಕುಟುಂಬಕ್ಕೆ ಆಹ್ವಾನ
ರಾಮ ಮಂದಿರ ಹೋರಾಟದಲ್ಲಿ ಮೃತರಾದ ಇಬ್ಬರು ಕರಸೇವಕರ ಕುಟುಂಬಕ್ಕೆ ಶಿಲಾನ್ಯಾಸದಲ್ಲಿ ಭಾಗಿಯಾಗುವ ಅವಕಾಶ ಲಭಿಸಿದೆ. ಸುಮಾರು 3 ದಶಕಗಳ ಹಿಂದೆ ನಡೆದ ಹೋರಾಟದಲ್ಲಿ ರಾಮ್ ಕುಮಾರ್ ಕೊಠಾರಿ ಹಾಗೂ ಶರತ್ ಕುಮಾರ್ ಪೊಲೀಸರ ಗುಂಡಿನ ದಾಳಿಗೆ ಮೃತಪಟ್ಟಿದ್ದರು. ಈ ಕುಟುಂಬದ ಇಬ್ಬರನ್ನು ಈಗ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ದೇಶಾದ್ಯಂತ ಆಂದೋಲನ
ಮಂದಿರ ನಿರ್ಮಾಣ ಕಾರ್ಯಕ್ಕೆ ಕೊಡುಗೆ ನೀಡಲು ದೇಶದ ಎಲ್ಲ ನಾಗರಿಕರಿಗೆ ಅವಕಾಶ ನೀಡಲಾಗುವುದು. ದೇಣಿಗೆ ಸಂಗ್ರಹ ಕುರಿತು ಇನ್ನು ಕೆಲ ದಿನಗಳಲ್ಲಿ ಆಂದೋಲನ ಆರಂಭಿಸಲಾಗುವುದು. ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗುವುದು. ದೇಶದ ಪ್ರತಿ ಗ್ರಾಮ, ಮನೆಗಳನ್ನು ಸಂರ್ಪಸಿ ದೇಣಿಗೆ ಪಡೆಯುವ ಯೋಜನೆ ರೂಪಿಸಲಾಗಿದೆ. ದೇಶದ ಬೃಹತ್ ಉದ್ಯಮಿಗಳೂ ಹಣ ನೀಡಲು ಮುಂದೆ ಬಂದಿದ್ದು, ಅವರಿಂದಲೂ ದೇಣಿಗೆ ಸ್ವೀಕರಿಸಲಾಗುವುದು ಎಂದು ಗೋವಿಂದ ದೇವ ಗಿರಿ ಮಹಾರಾಜ್ ಹೇಳಿದ್ದಾರೆ. ಒಂದು ಕ್ವಿಂಟಲ್ಗಿಂತಲೂ ಹೆಚ್ಚು ಬೆಳ್ಳಿ, ಬಂಗಾರ ಇನ್ನಿತರ ಅಮೂಲ್ಯ ವಸ್ತುಗಳನ್ನು ಜನರು ಟ್ರಸ್ಟ್ಗೆ ಕಳಿಸಿದ್ದಾರೆ. ದೇಶದ ವಿವಿಧೆಡೆಯಿಂದ 500ಕ್ಕೂ ಹೆಚ್ಚು ಕಲಶಗಳು ಬಂದಿವೆ.
ರಾಜನಾಥ, ಅಮಿತ್ ಷಾ ಗೈರು
ರಕ್ಷಣಾ ಸಚಿವ ರಾಜನಾಥ ಸಿಂಗ್, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಕಾರಣಾಂತರದಿಂದ ಪಾಲ್ಗೊಳ್ಳುತ್ತಿಲ್ಲ್ಲ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ, ಮುರಳಿಮನೋಹರ ಜೋಷಿ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ಕರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಗೃಹಸಚಿವ ಅಮಿತ್ ಷಾ ಗೈರಾಗಲಿದ್ದಾರೆ.
ರಘುಪತಿ ಲಡ್ಡು
ಪಟನಾದ ಮಹಾವೀರ ಟ್ರಸ್ಟ್ ಒಂದು ಲಕ್ಷ ಲಡ್ಡುಗಳನ್ನು ವಿತರಣೆ ಮಾಡಲಿದೆ. ಇದಕ್ಕೆ ರಘುಪತಿ ಲಡ್ಡು ಎಂದು ಹೆಸರಿಡಲಾಗಿದೆ. 51 ಸಾವಿರ ಲಡ್ಡುಗಳನ್ನು ರಾಮಜನ್ಮಭೂಮಿ ಪ್ರದೇಶದ ಜನರಿಗೆ ವಿತರಿಸಲಾಗುವುದು. ಇನ್ನುಳಿದ ಲಡ್ಡುಗಳನ್ನು ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರಗಳಲ್ಲಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಗುವುದು ಎಂದು ಮಹಾವೀರ ಟ್ರಸ್ಟ್ ತಿಳಿಸಿದೆ. ಇದಲ್ಲದೇ ರಾಮ ಮಂದಿರ ಟ್ರಸ್ಟ್ ಹಾಗೂ ಹಲವು ಸಂಘ ಸಂಸ್ಥೆಗಳು ಸುಮಾರು 15 ಲಕ್ಷ ಲಡ್ಡು ತಯಾರಿಸಿದ್ದು, ಇದಕ್ಕೆ 55 ಸಾವಿರ ಕೆಜಿ ಹಸುವಿನ ತುಪ್ಪ ಬಳಸಲಾಗಿದೆ.