ನ್ಯೂಸ್

ನನ್ನ ಹಣ ಅನಾಥಾಶ್ರಮಕ್ಕೆ ನೀಡಿ... ಅಂಗಾಂಗ ದಾನ ಮಾಡಿ... ಡೆತ್​​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ! | Suicide

Suicide: 25 ವರ್ಷದ ಚಾರ್ಟರ್ಡ್​ ಅಕೌಂಟೆಂಟ್​ ಯುವಕನೊಬ್ಬ ಹಿಲಿಯಂ ಅನಿಲ ಸೇವಿಸಿ, ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ಸೋಮವಾರ ನಡಿದಿದೆ.

ಧೀರಜ್ ಕನ್ಸಾಲ್ ( 25) ಮೃತ. ರಾಜಧಾನಿಯಲ್ಲಿ ಹೀಲಿಯಂ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದಾಗಿದ್ದು, ಗೋಲ್ ಮಾರುಕಟ್ಟೆಯ ಬಳಿಯ ಏರ್‌ಬಿಎನ್‌ಬಿ ವಸತಿ ಸೌಕರ್ಯದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಣೆಯ ಬಳಿ ಕೆಟ್ಟ ವಾಸನೆ ಬರುತ್ತಿರುವುದನ್ನು ಕಂಡ ಮಾಲೀಕರು ಅಲಾರಾಂ ಕೂಗಿ ಪೊಲೀಸರಿಗೆ ಮಾಹಿತಿ ನೀಡಿದಾಗ ಬಾಗಿಲು ಒಡೆದು ನೋಡಿದ್ದಾರೆ. ಪೊಲೀಸ್ ತಂಡವು ಕನ್ಸಾಲ್ ಹಾಸಿಗೆಯ ಮೇಲೆ ಮೃತಪಟ್ಟಿರುವುದು ಕಂಡುಬಂದಿದೆ. ಒಂದು ತುದಿ ಸಿಲಿಂಡರ್‌ಗೆ ಮತ್ತು ಇನ್ನೊಂದು ತುದಿ ಬಾಯಿಯೊಳಗೆ ಸಂಪರ್ಕಗೊಂಡಿರುವ ಪೈಪ್ ಕೂಡ ಪತ್ತೆಯಾಗಿದೆ. ಅವರ ಮುಖ ಮತ್ತು ಕುತ್ತಿಗೆಯನ್ನು ಪಾರದರ್ಶಕ ಪ್ಲಾಸ್ಟಿಕ್ ಹಾಳೆಯಿಂದ ಸುತ್ತಿಡಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಡೆತ್​ನೋಟ್​ನಲ್ಲೇನಿದೆ?

ಫೇಸ್‌ಬುಕ್ ಪೋಸ್ಟ್‌ನಲ್ಲಿ, ಕನ್ಸಾಲ್ ತಮ್ಮ ಸಾವಿಗೆ "ಯಾರನ್ನೂ ದೂಷಿಸಬಾರದು, ಇದು ನನ್ನ ಆಯ್ಕೆ ಮಾತ್ರ. ನನ್ನ ಜೀವನದಲ್ಲಿ ನಾನು ಭೇಟಿಯಾದ ಪ್ರತಿಯೊಬ್ಬ ವ್ಯಕ್ತಿಯೂ ನನಗೆ ನಿಜವಾಗಿಯೂ ದಯೆ ತೋರಿಸಿದ್ದರು. ಆದ್ದರಿಂದ ದಯವಿಟ್ಟು ಈ ಕಾರಣದಿಂದಾಗಿ ಯಾರಿಗೂ ತೊಂದರೆ ನೀಡಬೇಡಿ ಎಂದು ನಾನು ಪೊಲೀಸರು ಮತ್ತು ಸರ್ಕಾರವನ್ನು ವಿನಂತಿಸುತ್ತೇನೆ" ಎಂದು ಬರೆದಿದ್ದಾರೆ.

ತಮ್ಮ ಹಣವನ್ನು ಅನಾಥಾಶ್ರಮ ಅಥವಾ ವೃದ್ಧಾಶ್ರಮಕ್ಕೆ ದಾನ ಮಾಡಬೇಕು. ಅಂಗಾಂಗಗಳನ್ನು ಸಹ ದಾನ ಮಾಡಬೇಕು ಎಂದು ಡೆತ್​​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕನ್ಸಾಲ್ ಸೂಸೈಡ್​ ಮಾಡಿಕೊಳ್ಳಲು ಗಾಜಿಯಾಬಾದ್‌ನಲ್ಲಿರುವ ಇ-ಕಾಮರ್ಸ್ ವೆಬ್‌ಸೈಟ್‌ನಿಂದ ಹೀಲಿಯಂ ಸಿಲಿಂಡರ್ ಅನ್ನು ಆರ್ಡರ್ ಮಾಡಿದ್ದರು ಎಂದು ನಂಬಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲೇಡಿ ಹಾರ್ಡಿಂಜ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)