ನ್ಯೂಸ್

ಡೊನಾಲ್ಡ್​ ಟ್ರಂಪ್​ ಸುಂಕ ಹೊಡೆತ: ಮಾರುಕಟ್ಟೆ ಕಳೆದುಕೊಳ್ಳುವ ಭಯದಲ್ಲಿ ಕಾಶ್ಮೀರಿ ವ್ಯಾಪಾರಸ್ಥರು! | Kashmiris

Kashmiris: ಭಾರತೀಯ ಸರಕುಗಳ ಮೇಲೆ ಟ್ರಂಪ್​ ವಿಧಿಸಿದ ಶೇ.50 ರಷ್ಟು ಸುಂಕದ ಹಿನ್ನೆಲೆ ಕಾಶ್ಮೀರಿ ಕಾರ್ಪೆಟ್​ ರಫ್ತುದಾರರಲ್ಲಿ ಈ ಬೆಳವಣಿಗೆ ಆತಂಕ ಹೆಚ್ಚಿಸುತ್ತಿದೆ. ಇದು ಕಣಿವೆಯ ಅತ್ಯಂತ ತೀವ್ರ ವ್ಯಾಪಾರಗಳಲ್ಲಿ ಪರಿಣಾಮ ಬೀರುವ ಸಂಕೇತ ಎಂದು ಅವರು ಭಾವಿಸಿದ್ದಾರೆ.

ಕಾಶ್ಮೀರಿ ಕಾರ್ಪೆಟ್​ಗಳು ಅಮೇರಿಕದಲ್ಲಿ ಈಗ ಸರಿಸುಮಾರು 52.9 ರಷ್ಟು ಸುಂಕವನ್ನು ಆಕರ್ಷಿಸಲಿವೆ. ಈ ಮೊದಲು ಅವುಗಳ ಮೇಲೆ 2.9 ರಷ್ಟಟಿತ್ತು. ಈ ಅಭೂತಪೂರ್ವ ಹೆಚ್ಚಳವು, ಬಹಳ ವರ್ಷಗಳಿಂದ ಕಾಶ್ಮೀರದ ರಫ್ತು ಮಾರುಕಟ್ಟೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿರುವ ಅಮೇರಿಕನ್​ ಖರೀದಿದಾರರಿಗೆ ಕೈಯಿಂದ ಹೆಣೆದ ರಗ್ಗುಗಳು ಅತ್ಯಂತ ದುಬಾರಿ ವಸ್ತುಗಳಾಗಿ ಹೊರಹೊಮ್ಮುತ್ತವೆ ಎಂದು ರಫ್ತುದಾರರು ತಿಳಿಸಿದ್ದಾರೆ ಎಂದು ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಅಮೇರಿಕಾ ಯಾವಾಗಲೂ ನಮಗೆ ವಿಶ್ವಾಸಾರ್ಹ ಮಾರುಕಟ್ಟೆಯಾಗಿದೆ. ಈ ಮೊದಲು $5000 ಮೌಲ್ಯದ ಕಾರ್ಪೆಟ್​ಗಳು $ 7500 ಕ್ಕಿಂತ ಹೆಚ್ಚು ಹಣ ವೆಚ್ಚವಾಗಲಿದೆ. ಗ್ರಾಹಕರು ಅದನ್ನು ಹೇಗೆ ಭರಿಸುತ್ತಾರೆ? ಇಲ್ಲಿ ಸಾವಿರಾರು ಕುಟುಂಬಗಳನ್ನು ಪೋಷಿಸುತ್ತಿರುವ ಕಲೆಗೆ ಇದು ಶಾಪವಾಗಬಹುದು ಎಂದು ಶ್ರೀನಗರ ಮೂಲದ ರಫ್ತುದಾರ ಶೇಖ್​ ಆಶಿಕ್​ ಹೇಳಿದರು.

ಶತಮಾನದಷ್ಟು ಹಳೆಯದಾದ ಕಾಶ್ಮೀರ ಕಲಾ ಉದ್ಯಮದಲ್ಲಿ ಕೃಷಿಯ ನಂತರ ಕಣಿವೆಯ ಉದ್ಯೋಗದಾತರಲ್ಲಿ ಒಂದಾಗಿದೆ. ನೇಕಾರರು, ಬಣ್ಣ ಬಳಿಯುವವರು, ವಿನ್ಯಾಸಕರು ಹಾಗೂ ವ್ಯಾಪಾರಿಗಳು ಇಲ್ಲಿ ನೆಲೆವಹಿಸಿದ್ದಾರೆ. ಇದರ ಉತ್ಪನ್ನಗಳ ಮೇಲೆ ಬಹುಪಾಲು ಭಾಗವನ್ನು ರಫ್ತು ಮಾಡಲಾಗುತ್ತದೆ, ಇದರ ಅಧಿಕ ಭಾಗವನ್ನು ಅಮೇರಿಕ ಹೊಂದಿದೆ.

ಇನ್ನು ವ್ಯಾಪಾರ ದತ್ತಾಂಶಗಳ ಪ್ರಕಾರ, ನೇಯ್ದ ಉಡುಪುಗಳು, ಪೀಠೋಪಕರಣ, ಜವಳಿ, ವಜ್ರಗಳಂತಹ ಇತರ ಕಾರ್ಮಿಕ ವಲಯಗಳು ಶೇಕಡಾ 50 ಕ್ಕಿಂತ ಹೆಚ್ಚಿನ ಸುಂಕದ ಅಡಿಯಲ್ಲಿ ಸಂಕಷ್ಟಕ್ಕೀಡಾಗಿದೆ. ಒಟ್ಟು ರಫ್ತಿನ ಸುಮಾರು ಶೇ.60 ರಷ್ಟಿರುವ ಅಮೇರಿಕಾ ಮಾರುಕಟ್ಟೆಯ ಮೇಲೆ ಅವಲಂಬಿತವಾದ ಕಾರ್ಪೆಟ್​ಗಳು ಈಗ ಬಹಳ ದುಬಾರಿಯಾಗಲಿದೆ.

ದೆಹಲಿಯು ವಾಷಿಂಗ್ಟನ್​ನಿಂದ ಪರಿಹಾರ ಮಾತುಕತೆ ನಡೆಸದಿದ್ದರೆ, ಕಾಶ್ಮೀರಿ ಕಾರ್ಪೆಟ್​ಗಳು ಅಮೆರಿಕಾ ಮಾರ್ಕೆಟ್​ನಲ್ಲಿ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದ ಕಾರ್ಮಿಕರು ಜೀವನೋಪಾಯ ಕಂಡುಕೊಳ್ಳುವುದು ಕಷ್ಟ ಎಂದು ತಿಳಿಸಿದ್ದಾರೆ.

ನಾವು ರಾತ್ರೋರಾತ್ರಿ ಹೊಸ ಮಾರುಕಟ್ಟೆಯನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಅಮೇರಿಕಾದ ವಿಶ್ವಾಸ ಬೆಳೆಸಲು ದಶಕಗಳೇ ಬೇಕಾಯಿತು. ಖರೀದಿದಾರರು ಹೊರನಡೆದರೆ, ಮಾರಾಟವಾಗದೆ ಉಳಿದ ಸ್ಟಾಕ್​ಗಳು ಗೋದಾಮಿನಲ್ಲಿ ಉಳಿಯುತ್ತವೆ ಎಂದು ಆಶಿಕ್​ ತಿಳಿಸಿದ್ದಾರೆ. (ಏಜೆನ್ಸೀಸ್​)