ನವದೆಹಲಿ: ಭಾರತಕ್ಕೆ ಆಗಮಿಸಲಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ಗೆ ಈಗ ಅದೇ ಧ್ಯಾನ. ದೇಶಕ್ಕೆ ಭೇಟಿ ನೀಡುವ ಮುನ್ನ ಈ ಸಂಬಂಧ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತ್ಗೆ ಭೇಟಿ ನೀಡಲಿದ್ದಾರೆ ಟ್ರಂಪ್. ಈಗ ಟ್ರಂಪ್ ಮಾಡಿರುವ ಟ್ವೀಟ್ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹೇಳಿರುವುದು ವಿಶೇಷ.
ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ಹೇಳಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರಂಪ್ ನಂಬರ್ ಒನ್ ಅಂತೆ. ಇನ್ನು ಎರಡನೇ ಸ್ಥಾನದಲ್ಲಿದ್ದಾರಂತೆ ಪ್ರಧಾನಿ ನರೇಂದ್ರ ಮೋದಿ. ಇದು ಅವರ ಫಾಲೋವರ್ಸ್ ಎಷ್ಟಿದ್ದಾರೆ ಎಂಬ ಲೆಕ್ಕಾಚಾರದ ಮೇಲೆ ಹೇಳಲಾಗಿದೆ.
ಆದರೆ ಈ ಲೆಕ್ಕಾಚಾರ ಅಪದ್ಧ ಎನ್ನುತ್ತದೆ ಇಲ್ಲೊಂದು ವರದಿ. ಟ್ವಿಪ್ಲೊಮಸಿಯ 2019ರ ರ‍್ಯಾಂಕಿಂಗ್ ಪ್ರಕಾರ ವಿಶ್ವದ ನಾಯಕರಲ್ಲಿ ನರೇಂದ್ರ ಮೋದಿ ಅವರೇ ಪ್ರಥಮ ಸ್ಥಾನದಲ್ಲಿದ್ದಾರೆ. ಮೋದಿ ಅವರಿಗೆ ವಿಶ್ವದಾದ್ಯಂತ 44 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅದೇ ರೀತಿ ಅವರು ಎರಡನೇ ಸ್ಥಾನದಲ್ಲಿದ್ದಾರೆ (26 ಮಿಲಿಯನ್ ಫಾಲೋವರ್ಸ್).
ಆದರೆ ಈ ಸಾಲಿನಲ್ಲಿ ಬರಾಕ್ ಒಬಾಮಾ ಅವರನ್ನು ಸೇರಿಸಲಾಗಿಲ್ಲ. ಏಕೆಂದರೆ ಅವರೀಗ ಸಕ್ರಿಯ ರಾಜಕಾರಣದಲ್ಲಿ ಇಲ್ಲ. ಆದರೆ ಅವರಿಗೆ ಫೇಸ್ಬುಕ್ನಲ್ಲಿ 55 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇದೇ 24ರಂದು ಭಾರತಕ್ಕೆ ಆಗಮಿಸಲಿದ್ದಾರೆ. ಎರಡು ದಿನದ ಕಾರ್ಯಕ್ರಮದಲ್ಲಿ ಅವರು, ಅಹಮದಾಬಾದ್ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ. ಅಂದಹಾಗೆ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಮೇಲೆ ಭಾರತಕ್ಕೆ ಇದು ಅವರ ಮೊದಲ ಪ್ರವಾಸ. (ಏಜೆನ್ಸೀಸ್)