ನ್ಯೂಸ್

ನಿಮ್ಮಿಷ್ಟದ ಪಿಜ್ಜಾ ಇನ್ಮುಂದೆ 49 ರೂ.ಗೆ ಸಿಗಲಿದೆ…

ನವದೆಹಲಿ: ಪಿಜ್ಜಾ ಎಂದರೆ ಕೆಲವರಿಗೆ ತುಂಬಾ ಇಷ್ಟ. ತಿನ್ಬೇಕು ಅಂತಾ ಆಸೆಯಾದ್ರೂ ಬೆಲೆ ನೋಡಿ ಅನೇಕರು ಯೋಜನೆ ಕೈ ಬಿಡ್ತಾರೆ. ಇನ್ಮುಂದೆ ಹಾಗೆ ಮಾಡ್ಬೇಕಾಗಿಲ್ಲ. ಡೊಮಿನೊಸ್ ಕಡಿಮೆ ಬೆಲೆಯಲ್ಲಿ ಹೊಸ ಪಿಜ್ಜಾ ಲಾಂಚ್ ಮಾಡಿದೆ.

ಡೊಮಿನೊಸ್ ಪಿಜ್ಜಾ ಭಾರತದ ಫ್ರಾಂಚೈಸಿ ಸಿಇಒ ಮಾತನಾಡಿ, ಡೊಮಿನೊಸ್ ಕಂಪನಿ ಅತ್ಯಂತ ಅಗ್ಗದ ಪಿಜ್ಜಾ ಪರಿಚಯ ಮಾಡಿದೆ. ಬೆಲೆ ಕೇವಲ 49 ರೂಪಾಯಿ. ನಿರಂತರವಾಗಿ ಏರ್ತಿರುವ ಬೆಲೆ ನಮ್ಮ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರನ್ನು ತೃಪ್ತಿಪಡಿಸುವುದು ನಮ್ಮ ಗುರಿ. ಅತಿ ಕಡಿಮೆ ಬೆಲೆಗೆ ಅವರಿಗೆ ಪಿಜ್ಜಾ ಸಿಗುವಂತಾಗ್ಲಿ ಎನ್ನುವ ಕಾರಣಕ್ಕೆ ನಾವು ಇದನ್ನು ಲಾಂಚ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಡೊಮಿನೊಸ್ ಪರಿಚಯ ಮಾಡ್ತಿರುವ 49 ರೂಪಾಯಿ ಬೆಲೆಯ ಪಿಜ್ಜಾ 7 ಇಂಚುಗಳಿರಲಿದೆ. ಭಾರತದ ಎಲ್ಲ ಡೊಮಿನೊಸ್ ಶಾಖೆಯಲ್ಲಿ ನಿಮಗೆ 49 ರೂಪಾಯಿ ಬೆಲೆಯ ಪಿಜ್ಜಾ ಸಿಗಲಿದೆ.

ಭಾರತದಲ್ಲಿ 49 ರೂಪಾಯಿಗೆ ಫಿಜ್ಜಾ ಸಿಕ್ಕಿದ್ರೆ, ಚೀನಾದ ಶಾಂಘೈನಲ್ಲಿ 3.80 ಡಾಲರ್ ಗೆ ಪಿಜ್ಜಾ. ಅದೇ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಅತಿ ಕಡಿಮೆ ಬೆಲೆ ಪಿಜ್ಜಾ ಬೆಲೆ 12 ಡಾಲರ್ ಆಗಿದೆ.

ಭಾರತದ ಮಾರುಕಟ್ಟೆಯಲ್ಲಿ ಉಳಿದ ಫಾಸ್ಟ್ ಫುಡ್ ಗಳ ಬೆಲೆ ತುಂಬಾ ಕಡಿಮೆಯಿದೆ. ನಿಮಗೆ ಸಮೋಸಾ ಕೇವಲ 10 ರೂಪಾಯಿಗೆ ಸಿಗುತ್ತದೆ. ಜನರು ಪಿಜ್ಜಾ ಮೇಲೆ ಆಸೆಯಿದ್ರೂ ಬೆಲೆ ಹೆಚ್ಚಾಗಿರುವ ಕಾರಣಕ್ಕೆ ಪಿಜ್ಜಾ ಬದಲು ಬೇರೆ ಫಾಸ್ಟ್ ಫುಡ್ ಮೊರೆ ಹೋಗುತ್ತಾರೆ. ಹೀಗಾಗಿ ಬೆಲೆ ಕಡಿಮೆ ಮಾಡುವುದು ಅನಿವಾರ್ಯವಾಗಿದೆ.