ನ್ಯೂಸ್

ಡಾಲಿ ಧನಂಜಯ್ ಹುಟ್ಟುಹಬ್ಬ ಸಂಭ್ರಮ ಶುರು, ಹುಟ್ಟು ಹಬ್ಬಕ್ಕೆ 'ಅಣ್ಣ From Mexico' ಸಿನಿಮಾ ಅನೌನ್ಸ್​​

ಇಂದು ಧನಂಜಯ್ 37 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬ ನಿಮಿತ್ತ ನಿನ್ನೆ ಸಂಜೆ ಉತ್ತರಕಾಂಡ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಬಡವ ರಾಸ್ಕಲ್ ಸಿನಿಮಾ ತಂಡದಿಂದ ಹೊಸ ಸಿನಿಮಾ ಘೋಷಣೆಯಾಗಿದ್ದು ಇದಕ್ಕೆ ‘ಅಣ್ಣ ಫ್ರಂ ಮೆಕ್ಸಿಕೊ’ ಎಂದು ಟೈಟಲ್ ಇಡಲಾಗಿದೆ.


ಜೊತೆಗೆ ನಿನ್ನೆ ರಾತ್ರಿಯಿಂದಲೇ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಇಂದೂ ಕೂಡಾ ಧನಂಜಯ್ ಅಭಿಮಾನಿಗಳ ಜೊತೆ ಕಾಲ ಕಳೆಯಲಿದ್ದಾರೆ. ಈ ಬಾರಿ ಧನಂಜಯ್ ಹುಟ್ಟುಹಬ್ಬದ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ.


ಬಡವ ರಾಸ್ಕಲ್ ಚಿತ್ರತಂಡದಿಂದ ಡಾಲಿಗೆ ಸ್ಪೆಷಲ್​ ಗಿಫ್ಟ್​​​ ಸಿಕ್ಕಿದ್ದು, ಮಧ್ಯರಾತ್ರಿ 12 ಗಂಟೆಗೆ ಟೈಟಲ್​​ ಹಾಗೂ ಫಸ್ಟ್​​ ಲುಕ್​ motion​ ಪೋಸ್ಟರ್​​ ಅನೌನ್ಸ್​​ ಮಾಡಲಾಗಿದೆ. ಈ ಚಿತ್ರಕ್ಕೆ 'ಅಣ್ಣ From Mexico' ಎಂದು ಕ್ಯಾಚಿ ಟೈಟಲ್​ ಇಡಲಾಗಿದೆ.


ಕೋವಿಡ್ ಹಾಗೂ ಇತರೆ ಕಾರಣಗಳಿಂದ ಕಳೆದ ಕೆಲ ವರ್ಷಗಳಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದ ನಟ ಡಾಲಿ ಧನಂಜಯ್ ಈ ವರ್ಷ ಅಭಿಮಾನಿಗಳೊಟ್ಟಿಗೆ ಅದ್ಧೂರಿಯಾಗಿ ಹುಟ್ಟುಹಬ್ಬ (Birthday) ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ.

ತಮ್ಮ ಹುಟ್ಟುಹಬ್ಬ ಆಚರಣೆ ಕುರಿತಂತೆ ಅಭಿಮಾನಿಗಳಿಗೆ ಮಾಹಿತಿ ನೀಡುವ ವಿಡಿಯೋ ಬಿಡುಗಡೆ ಮಾಡಿರುವ ನಟ ಧನಂಜಯ್, ಜೊತೆಗೆ ‘ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ಚೆನ್ನಾಗಿ ಆಚರಿಸಿಕೊಂಡು ಬರುತ್ತಿದ್ದೀರ. ವಿಶ್ ಮಾಡುತ್ತಿದ್ದೀರ, ಮನೆಯ ಹತ್ತಿರ ಬರುತ್ತೀರ, 2018ರಲ್ಲಿ ಜಯನಗರದ ಶಾಲಿನಿ ಗ್ರೌಂಡ್ಸ್​ನಲ್ಲಿ ನನ್ನ ಹುಟ್ಟುಹಬ್ಬವನ್ನು ಕೊನೆಯದಾಗಿ ನಿಮ್ಮೊಂದಿಗೆ ಆಚರಿಸಿಕೊಂಡಿದ್ದೆ. ಅದಾದ ಬಳಿಕ ಕೋವಿಡ್ ಸೇರಿದಂತೆ ನಾನಾ ಕಾರಣಗಳಿಂದ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ” ಎಂದು ವಿಡಿಯೋ ಒಂದನ್ನ ಎರಡು ದಿನಗಳ ಹಿಂದೆ ಪೋಸ್ಟ್​​ ಮಾಡಿದ್ರು.