ನ್ಯೂಸ್

25ನೇ ಸಿನಿಮಾ ರಿಲೀಸ್ ಶುಭ ಸಂದರ್ಭದಲ್ಲಿ 1 ಕೋಟಿ ರೂ. ಬೆಲೆಬಾಳುವ ಕಾರಿಗೆ ಒಡೆಯನಾದ ಡಾಲಿ!

ಬೆಂಗಳೂರು: ಸ್ಯಾಂಡಲ್​ವುಡ್ ನಟ ಡಾಲಿ ಧನಂಜಯ್ ಅಭಿನಯದ 'ಗುರುದೇವ್ ಹೊಯ್ಸಳ’ ಸಿನಿಮಾ ಭರ್ಜರಿ ಪ್ರದಶರ್ನನ ಕಾಣುತ್ತಿದೆ. 25ನೇ ಸಿನಿಮಾ ರಿಲೀಸ್​ ಆಗಿರುವ ಖುಷಿಯಲ್ಲಿರುವ ಡಾಲಿಯವರಿಗೆ ದುಬಾರು ಬೆಲೆ ಬಾಳುವ ಕಾರು ಉಡುಗೊರೆಯಾಗಿ ಸಿಕ್ಕಿದೆ.

ಗುರುದೇವ್ ಹೊಯ್ಸಳ ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಡಾಲಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ದುಬಾರಿ ಬೆಲೆಯ Toyota Vellfire ಕಾರನ್ನ ಚಿತ್ರದ ನಿರ್ಮಾಪಕರಾದ ಕಾರ್ತಿಕ್- ಯೋಗಿ ಡಾಲಿಗೆ ಉಡುಗೊರೆ ನೀಡಿದ್ದಾರೆ. Toyota Vellfire ಕಾರಿಗೆ 1 ಕೋಟಿ ಬೆಲೆಯದಾಗಿದೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ.

25ನೇ ಚಿತ್ರ ಮತ್ತು ನನ್ನ ವಿಶೇಷ ವ್ಯಕ್ತಿಗಳಿಂದ ವಿಶೇಷ ಉಡುಗೊರೆ. ಲವ್‌ ಯೂ ನಾವು ಒಟ್ಟಿಗೆ ಮಾಡಲಿರುವ ಹೆಚ್ಚು ಹೆಚ್ಚು ಕೆಲಸಗಳಿಗಾಗಿ ಚೀರ್ಸ್. ಇಂತಹ ಒಳ್ಳೆಯ ನೆನಪುಗಳಿಗೆ ಧನ್ಯವಾದಗಳು ಎಂದು ಡಾಲಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಧನಂಜಯ್ ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಮಾರ್ಚ್ 30ರಂದು ತೆರೆ ಕಂಡಿದೆ. ಡಾಲಿ- ಅಮೃತಾ ನಟನೆಯ `ಹೊಯ್ಸಳ’ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಡಾಲಿ, ಅಮೃತಾ, ನವೀನ್ ಶಂಕರ್, ನಟನೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.