ನ್ಯೂಸ್

ದೇಶಾದ್ಯಂತ ಫ್ರಾಂಚೈಸಿ ಪ್ರಾರಂಭಿಸುವುದಾಗಿ 'ಡಾಲಿ ಚಾಯ್‌ವಾಲಾ' ಪೋಸ್ಟ್|Dolly Chaiwala Franchise

Dolly Chaiwala : ನಾಗ್ಪುರದ ಬೀದಿಗಳಲ್ಲಿ ವಿಶಿಷ್ಟ ರೀತಿಯಲ್ಲಿ ಚಹಾ ಮಾರಾಟ ಮಾಡುವ ಮೂಲಕ ಡಾಲಿ ಚಾಯ್‌ವಾಲಾ ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಠಿಸಿದ್ದಾರೆ. ಡಾಲಿ ಈಗ ತನ್ನ ವ್ಯವಹಾರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದು, ಇದೀಗ ಅವರು ದೇಶಾದ್ಯಂತ ತಮ್ಮ ಚಹಾ ಫ್ರಾಂಚೈಸಿಯನ್ನು ಪ್ರಾರಂಭಿಸಲಿದ್ದಾರೆ.

ಡಾಲಿ ಚಾಯ್‌ವಾಲಾ ಅವರ ನಿಜವಾದ ಹೆಸರು ಸುನಿಲ್ ಪಟೇಲ್. ಡಾಲಿ ತಮ್ಮ ವಿಶಿಷ್ಟ ಉಡುಗೆ ತೊಡುಗೆ ಮತ್ತು ವಿಶಿಷ್ಟ ಶೈಲಿಯಿಂದಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಿದ್ಧರಾದರು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸ್ಟಾಲ್‌ಗೆ ಭೇಟಿ ನೀಡಿದಾಗ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು. ಇನ್ನೂ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಡಾಲಿ, ಫ್ರಾಂಚೈಸಿ ಮೂಲಕ ಚಹಾ ಅಂಗಡಿಗಳು ಮತ್ತು ಕಾರ್ಟ್​ಗಳನ್ನು ಪ್ರಾರಂಭಿಸುವ ತನ್ನ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಾಲಿ ಚಾಯ್​ವಾಲಾ ದೇಶಾದ್ಯಂತ ಫ್ರಾಂಚೈಸಿ ತೆರೆಯಲು ಅವಕಾಶ ನೀಡ್ತಿದ್ದಾರೆ. ಈ ಬಗ್ಗೆ @dolly_ki_tapri_nagpur ನಲ್ಲಿ ಜಾಹೀರಾತು ಪ್ರಕಟಿಸಿದ್ದು, ಭಾರತದಾದ್ಯಂತ ಡಾಲಿ ಫ್ರಾಂಚೈಸಿ ಟೀ ಅಂಗಡಿಗಳು ಮತ್ತು ಕಾರ್ಟ್​ಗಳನ್ನು ಪ್ರಾರಂಭಿಸುತ್ತಿದ್ದಾರೆ. ಕಾರ್ಟ್​ಗಳಿಂದ ಪ್ರಮುಖ ಕೆಫೆಗಳವರೆಗೆ ಮೂರು ಫ್ರಾಂಚೈಸಿ ಆಯ್ಕೆಗಳು ಲಭ್ಯವಿರುತ್ತವೆ ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.

(ಏಜೆನ್ಸೀಸ್)

ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಒಂದು ಟೀಗಾಗಿ ಇಷ್ಟೊಂದು ಹಣ ಕೊಟ್ಟು ಫ್ರಾಂಚೈಸಿ ಖರೀದಿ ಮಾಡೋದು ಪ್ರಯೋಜನಕ್ಕೆ ಬರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮೂರು ಮಾದರಿಗಳಲ್ಲಿ ಡಾಲಿ ಚಾಯ್​ವಾಲಾ ಫ್ರಾಂಚೈಸಿ ಲಭ್ಯವಿರುತ್ತದೆ. ಸರಳ ಕಾರ್ಟ್​ನೊಂದಿಗೆ ಪ್ರಾರಂಭಿಸುವುದಾದ್ರೆ ಸುಮಾರು 4.5 ರಿಂದ 6 ಲಕ್ಷ ಖರ್ಚಾಗುತ್ತದೆ. ಅಂಗಡಿ ರೂಪದಲ್ಲಿದ್ದರೆ ಪ್ರಾರಂಭಿಸಿದರೆ 20 ರಿಂದ 22 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರೊಂದಿಗೆ, 39 ರಿಂದ 43 ಲಕ್ಷ ರೂಪಾಯಿ ಖರ್ಚು ಮಾಡಿದ್ರೆ ನೀವು ಫ್ಲ್ಯಾಗ್ಶಿಪ್ ಕೆಫೆ ಪ್ರಾರಂಭಿಸಬಹುದು ಎನ್ನಲಾಗಿದೆ. ಆದ್ರೆ ಇದ್ರ ಬಗ್ಗೆ ಡಾಲಿ ಚಾಯ್ ವಾಲಾ ಕಡೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಡಾಲಿ ತಮ್ಮ ಕಂಪನಿಗೆ ವೈರಲ್ ಸ್ಟ್ರೀಟ್ ಬ್ರ್ಯಾಂಡ್ ಎಂದು ಹೆಸರಿಸಿದ್ದಾರೆ. ಡಾಲಿ ಚಾಯ್ ವಾಲಾ ಫ್ರಾಂಚೈಸಿ ಅಧಿಕೃತವಾಗಿ ತೆರೆದಿದೆ. ಇದು ಭಾರತದ ಮೊದಲ ವೈರಲ್ ಸ್ಟ್ರೀಟ್ ಬ್ರ್ಯಾಂಡ್ ಆಗಿದೆ. ಈಗ ಇದು ಒಂದು ವ್ಯಾಪಾರದ ಅವಕಾಶ ನೀಡಿದ್ದು, ತಳ್ಳುವ ಗಾಡಿಯಿಂದ ಹಿಡಿದು ಪ್ರಮುಖ ಕೆಫೆಗಳವರೆಗೆ, ನಾವು ಇದನ್ನು ದೇಶಾದ್ಯಂತ ಪ್ರಾರಂಭಿಸುತ್ತಿದ್ದೇವೆ, ಈ ಕನಸನ್ನು ಮುಂದಕ್ಕೆ ಕೊಂಡೊಯ್ಯಲು ನಿಜವಾದ ಉತ್ಸಾಹ ಹೊಂದಿರುವ ಜನರನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದಾರೆ.