ನ್ಯೂಸ್

ಕೋವಿಡ್​ ಸೋಂಕಿನ ಮಧ್ಯೆ ಗೊಂಬೆಗಳ ಮದುವೆ; ಫೋಟೋಶೂಟ್​ಗಾಗಿ ನಡೆದ ವಿವಾಹ ಕಾರ್ಯಕ್ರಮ

ನವದೆಹಲಿ: ಜಗತ್ತಿನ ಬಹುತೇಕ ಕಡೆಗಳಲ್ಲಿ ಕೋವಿಡ್ ಸೋಂಕಿನ ಭೀತಿಯಿಂದ ಲಾಕ್​ಡೌನ್ ಜಾರಿಯಲ್ಲಿದೆ. ಅಲ್ಲದೆ ಈ ಸಂದರ್ಭದಲ್ಲಿ ಜರುಗಬೇಕಿದ್ದ ಎಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ. ಹೀಗಾಗಿ ಎಷ್ಟೋ ವೆಡ್ಡಿಂಗ್ ಫೋಟೋಗ್ರಾಫರ್​ಗಳು ಕೂಡ ಮನೆಯಲ್ಲಿಯೇ ಇರುವಂತಾಗಿದೆ.

ಈ ಸಂದರ್ಭದಲ್ಲಿ ಅಮೆರಿಕದ ಮಹಿಳಾ ಫೋಟೋಗ್ರಾಫರ್ ಒಬ್ಬರು ತಮ್ಮ ಮಗಳ ಬಾರ್ಬಿ ಗೊಂಬೆಗಳನ್ನು ಬಳಸಿಕೊಂಡು ಮದುವೆಯ ದೃಶ್ಯಗಳ ಫೋಟೋ ಶೂಟ್ ಮಾಡಿದ್ದರು.

ಮದುಮಗನ ಶೇವಿಂಗ್, ವಧುವಿನ ಅಲಂಕಾರದಿಂದ ಹಿಡಿದು ಎಲ್ಲ ಸನ್ನಿವೇಶಗಳನ್ನೂ ಅವರು ಸೃಷ್ಟಿಸಿದ್ದರು. ಬ್ಯಾಟ್​ಮ್ಯಾನ್, ಸೂಪರ್​ಮ್ಯಾನ್​, ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕ ಮುಂತಾದ ಘಟಾನುಘಟಿಗಳೂ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.