ನವದೆಹಲಿ: ಸಾಕುನಾಯಿಯೊಂದು ಸ್ಕೂಟರ್ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿರೋ ವಿಡಿಯೋ ನೆಟ್ಟಿಗರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ.
ಮೊದಲಿಗೆ ಎಲ್ಲರನ್ನು ಸೆಳೆಯುವಂತೆಹ ಅಂಶ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾದರೆ, ಶ್ವಾನವೊಂದು ಹೆಲ್ಮೆಟ್ ಧರಿಸಿ ಮಾಲೀಕನ ಸ್ಕೂಟರ್ ಹಿಂಬದಿಯಲ್ಲಿ ಮನುಷ್ಯರಂತೆ ಕುಳಿತು ತನ್ನ ಎರಡು ಕಾಲುಗಳನ್ನು ಮಾಲೀಕನ ಭುಜದ ಮೇಲಿಟ್ಟು ಆರಾಮವಾಗಿ ಪ್ರಯಾಣ ಮಾಡುತ್ತಿರುವುದನ್ನು ಹಿಂಬದಿಯಲ್ಲಿ ಬರುತ್ತಿದ್ದ ಸ್ಕೂಟರ್ ಸವಾರರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಚೆನ್ನೈನಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು, ಜಾಲತಾಣದಲ್ಲಿ ಹರಿಬಿಟ್ಟ ದಿನದಿಂದ ಈವರೆಗೂ ವಿಡಿಯೋಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 66 ಸಾವಿರಕ್ಕೂ ಹೆಚ್ಚು ವೀಕ್ಷಣೆ ಮಾಡಿದ್ದು, ಸಾವಿರಕ್ಕೂ ಅಧಿಕ ರೀಟ್ವೀಟ್ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಯಿ ಪ್ರಯಾಣ ಕಾಳಜಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ, ಅನೇಕರು ತಮ್ಮದೇ ರೀತಿಯಲ್ಲಿ ವಿಡಿಯೋ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)