Dog Trafficking: ಕೆಲವು ದಿನಗಳ ಹಿಂದೆ ಬೀದಿನಾಯಿಗಳು ಹಾಗೂ ಬೆಕ್ಕುಗಳನ್ನು ಸಾಕುವ ನೆಪದಲ್ಲಿ ಆಶ್ರಯ ತಾಣವನ್ನು ತೆರೆದಿದ್ದು, ಆ ಪ್ರಾಣಿಗಳನ್ನು ಕೊಂದು ಚೀಲಗಳಲ್ಲಿ ತುಂಬಿಟ್ಟಿರುವ ಘಟನೆ ಕೊಲ್ಕತ್ತಾ ಪುರಸಭೆಯ ವಾರ್ಡ್ 132ರ ಬೆಹಾಲಾ ಪರ್ಣಶ್ರೀ ಪ್ರದೇಶದಲ್ಲಿ ನಡೆದಿದೆ.
ಇದ್ದಕ್ಕಿಂದತೆಯೇ ಆ ತಾಣಗಳಿಂದ ಕೊಳೆತ ವಾಸನೆ ಬರುವುದನ್ನು ಗಮನಿಸಿದ ಸ್ಥಳೀಯರು ಬಲವಂತವಾಗಿ ಆ ತಾಣವನ್ನು ಪ್ರವೇಶಿಸಿ, ಪರಿಶೀಲಿಸಿದಾಗ ನಾಯಿಗಳು ಹಾಗೂ ಬೆಕ್ಕುಗಳ ಶವಗಳು ಬಿದ್ದಿದ್ದನ್ನು ಕಂಡಿದ್ದಾರೆ. ಇನ್ನು ರೂಂ ತುಂಬಾ ರಕ್ತ ಚಿಮ್ಮುತ್ತಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಪ್ರಾಣಿಗಳನ್ನು ಕೊಂದು ಅವುಗಳನ್ನು ಚೀಲದಲ್ಲಿ ತುಂಬಿದ್ದು, ಆ ಚೀಲಗಳಲ್ಲಿ ಹುಳಗಳು ಸಿಲುಕಿಕೊಂಡಿವೆ ಎಂದು ಆರೋಪಿಸಿದ್ದಾರೆ. ಇನ್ನು ಪರ್ಣಶ್ರೀ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪ್ರಾಣಿ ಕಲ್ಯಾಣ ಸಂಸ್ಥೆಗಳು ಪ್ಲಾಸ್ಟಿಕ್ ಚೀಲಗಳಲ್ಲಿ ಸುತ್ತಿಡಲಾಗಿದ್ದ ನಾಯಿಮರಿಗಳು ಹಾಗೂ ಬೆಕ್ಕಿನ ಮರಗಳ ಶವವನ್ನು ಪೊಲೀಸರಿಂದ ವಶಪಡಿಸಿಕೊಂಡಿದ್ದು, ಶವಗಳ ಪರೀಕ್ಷೆಗೆ ಕಳುಹಿಸಿದ್ದು, ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಸಾವಿಗೆ ಕಾರಣವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
ಆಶ್ರಯ ತಾಣಗಳಲ್ಲಿ ನಾಯೀ ಹಾಗೂ ಬೆಕ್ಕಿನ ಮೃತ ದೇಹವನ್ನು ಪ್ರತ್ಯೇಕವಾಗಿ ಇಡಲಾಗಿದೆ. ಈ ಆರೋಪಿಗಳು ವಿವಿಧ ರೆಸ್ಟೋರೆಂಟ್‌ಗಳಿಗೆ ಸತ್ತ ನಾಯಿ ಮಾಂಸವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ಆಶ್ರಯ ತಾಣಗಳ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ.(ಏಜೆನ್ಸೀಸ್)