Pitbull : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬನ್ನು ನಾಯಿ ದಾಳಿ ನಡೆಸಿ ಕೊಂದಿರುವ ಘಟನೆ ಮಂಗಳವಾರ (ಆ.19) ರಂದು ಚನೈನ ಜಾಫರ್ಖಾನ್ಪೇಟೆ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ: ದೆಹಲಿಯ ದರಿಯಾಗಂಜ್ನಲ್ಲಿ ಕಟ್ಟಡ ಕುಸಿದು ಸ್ಥಳದಲ್ಲೇ ಮೂವರು ಸಾವು, ಹಲವರಿಗೆ ಗಾಯ| Building collapses
ಕರುಣಾಕರನ್ ಮೃತ ದುರ್ದೈವಿ ಎಂದು ತಿಳಿದುಬಂದಿದೆ. ಇನ್ನು ಈತ ಕೆಲಸ ಮುಗಿಸಿ ಹೋಗುತ್ತಿರುವಾಗ ನೆರೆ ಮನೆಯ ನಾಯಿ ಅವರ ಮೇಲ ಆಕ್ರಮಣ ಮಾಡಿ, ಬಲಭಾಗದ ತೊಡೆ ಹಾಗೂ ಖಾಸಗಿ ಭಾಗಗಳನ್ನು ಕಚ್ಚಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿದೆ ಇದರಿಂದ ತಪ್ಪಿಸಿಕೊಳ್ಳಲಾಗದೆ ಅಲ್ಲಿಯೇ ಮೃತಪಟ್ಟಿದ್ದಾರೆ. ಈ ವೇಳೆ ಬಲಿಪಶುವಿನಿಂದ ನಾಯಿಯನ್ನು ಬೇರ್ಪಡಿಸಲು ಪ್ರಯತ್ನಿಸುವಾಗ ನಾಯಿ ಮಾಲೀಕನಿಗೂ ಗಂಭೀರ ಗಾಯ ಮಾಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಗಳು ಬಂದಿವೆ.
ಇನ್ನು ಸ್ಥಳೀಯರು ಕರುಣಾಕರನ್ ಅವರನ್ನು ಹತ್ತಿರ ಇರುವಂತಹ ಆಸ್ಪತ್ರೆಗೆ ದಾಖಲಿಸಿದ್ದು, ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಂತರ ಬಲಿಪಶುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಸಾವಿನ ನಂತರ ಪೊಲೀಸರು ನಾಯಿಯನ್ನು ವಶಪಡಿಸಿಕೊಂಡಿದ್ದು, ನಾಯಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)