ಬೆಂಗಳೂರು: ಸಂಸತ್ತಿನಲ್ಲಿ ಮೂರು ಕಾಯ್ದೆಗಳ ತಿದ್ದುಪಡಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಗಳ ವಿರುದ್ಧ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಕೆಲವೆಡೆ ರೈತರು-ರೈತ ಸಂಘಟನೆಗಳಿಂದಲೂ ಪ್ರತಿಭಟನೆ ನಡೆದಿವೆ. ಆದರೆ ಹಾಗೆ ಪ್ರತಿಭಟನೆ ಮಾಡಿದವರೆಲ್ಲರೂ ನೈಜ ರೈತರಾ ಎಂಬ ಅನುಮಾನವೊಂದು ಈಗ ಮೂಡಿದೆ.
ಅದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋಗಳು. ರೈತರು ಕಾಯ್ದೆಗಳ ತಿದ್ದುಪಡಿ ವಿರುದ್ಧ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ತುಣುಕುಗಳನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಹಂಚಿಕೊಂಡಿದ್ದಾರೆ. ಇದೀಗ ಆ ವಿಡಿಯೋಗಳ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿದೆ.
ಅಂಥ ಕೆಲವು ವಿಡಿಯೋಗಳ ತುಣುಕುಗಳನ್ನು ಕೊಲ್ಯಾಜ್ ಮಾಡಿರುವ ಬಿಜೆಪಿ ಬೆಂಬಲಿಗರು ಕಾಯ್ದೆಗಳ ತಿದ್ದುಪಡಿ ವಿರುದ್ಧದ ಧ್ವನಿಯ ಅಸಲಿಯತ್ತನ್ನೇ ಪ್ರಶ್ನಿಸಿದ್ದಾರೆ. ರೈತರೆಂದು ಹೇಳಿಕೊಂಡು ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಮಾತನಾಡಿರುವವರಿಗೆ ವಿಡಿಯೋ ಮಾಡುತ್ತಿರುವವರು ಹೀಗೇ ಮಾತನಾಡುವಂತೆ ನಿರ್ದೇಶಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಇವುಗಳ ಆಧಾರದ ಮೇಲೆ ಇದೀಗ ಕೆಲವರ ಪ್ರತಿಭಟನೆಯ ನೈಜತೆ ಬಗ್ಗೆ ಅನುಮಾನ ಮೂಡಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಆ ವಿಡಿಯೋ ಇಲ್ಲಿದೆ..