ನವದೆಹಲಿ: ವೈದ್ಯರೊಬ್ಬರು ಉಸಿರು ನಿಂತು ಹೋಗಿದ್ದ ನವಜಾತ ಶಿಶುವಿಗೆ ಉಸಿರು ( Doctor Save Baby ) ನೀಡುವ ಮೂಲಕ ಮರು ಜೀವವನ್ನೇ ನೀಡಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನಿದೆ?:
Educativefeed ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ವೈದ್ಯರೊಬ್ಬರು ನವಜಾತ ಶಿಶುವನ್ನು ಕೈಯಲ್ಲಿ ಹಿಡಿದುಕೊಂಡು ಆಪರೇಷನ್ ಥಿಯೇಟರ್‌ನಿಂದ ಹೊರ ಬರುತ್ತಿರುವ ದೃಶ್ಯವನ್ನು ಕಾಣಬಹುದು. ಮಗುವಿನ ಉಸಿರು ನಿಂತಿದ್ದರಿಂದ ಈ ಮಗುವನ್ನು ಹೇಗಾದರೂ ಬದುಕಿಸಲೇಬೇಕು ಎಂದು ಪಣತೊಟ್ಟು ಬಂದ ಆ ವೈದ್ಯ ಕೆಲವು ವೈದ್ಯಕೀಯ ಸಾಧನಗಳ ಸಹಾಯದಿಂದ ಮಗುವಿಗೆ ಉಸಿರು ತುಂಬಿ ಮರು ಜೀವವನ್ನೇ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 4.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ.. ಪ್ರಾಣ ಕೊಟ್ಟ ದೇವರು ಒಂದು ಕಡೆಯಾದ್ರೆ ಉಳಿಸಿದ ದೇವರು ನೀವು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.