ರಾಣೆಬೆನ್ನೂರ: ತಾಲೂಕಿನ ಅರೇಮಲ್ಲಾಪುರ ಗ್ರಾಮದ ಸರ್ಕಾರಿ ವೈದ್ಯ ಡಾ. ನಾಗರಾಜ ಎಸ್.ಕೆ. ಅವರಿಗೆ ರಾಷ್ಟ್ರೀಯ ಚಿಕಿತ್ಸಾ ಸೇವಾ ಅಡಿಯಲ್ಲಿ ರಿಯಲ್ ಹೀರೊ ಆಫ್ ಇಂಡಿಯಾ ಅವಾರ್ಡ್‌ಅನ್ನು ಬಾಲಿವುಡ್ ನಟಿ ಮಹಿಮಾ ಚೌದರಿ ನೀಡಿದರು.
ಭಾರತದ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆಯು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ. ನಾಗರಾಜ ಎಸ್.ಕೆ. ಸರ್ಕಾರಿ ವೈದ್ಯರಾಗಿ ಸೇವೆಯಲ್ಲಿ ವಿಶೇಷವಾಗಿ ಚಿಕಿತ್ಸೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಸಮಾಜದಲ್ಲಿ ಉಚಿತ ಆರೋಗ್ಯ ತಪಾಸಣೆ ಮೂಲಕ ಗುರುತಿಸಿಕೊಂಡಿದ್ದರಿಂದ ಪ್ರಶಸ್ತಿ ಲಭಿಸಿದೆ.