ತುರ್ತು ಚಿಕಿತ್ಸಾ ಘಟಕದ (ICU) ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ನಿದ್ದೆ ಮಾಡಿದ ಹಿನ್ನೆಲೆ ತುರ್ತುಚಿಕಿತ್ಸೆಗೆ ದಾಖಲಾಗಿದ್ದ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದಿದೆ.
ಲಾಲಾ ಲಜಪತ್ ರಾಯ್ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸುನಿಲ್ ಎಂಬಾತನ್ನು ಪೊಲೀಸರು ಈ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸುನಿಲ್ ಸ್ಟ್ರೆಚರ್ ಮೇಲೆ ರಕ್ತಸ್ರಾವವಾಗಿ ಮಲಗಿ ನೋವಿನಿಂದ ಅಳುತ್ತಿದ್ದಾಗ, ಕಿರಿಯ ವೈದ್ಯ ಭೂಪೇಶ್ ಕುಮಾರ್ ರೈ ಮತ್ತು ಅನಿಕೇತ್, ಅವರಿಗೆ(ರೋಗಿಗೆ) ತಕ್ಷಣದ ವೈದ್ಯಕೀಯ ನೆರವು ನೀಡುವ ಬದಲು ಹತ್ತಿರದಲ್ಲೇ ಮಲಗಿದ್ದರು ಎಂದು ಆರೋಪಿಸಲಾಗಿದೆ.
ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸೆರೆಹಿಡಿಯಲಾಗಿದೆ ಎನ್ನುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ಡ್ಯೂಟಿ-ಇನ್-ಚಾರ್ಚ್ ಡಾ. ಶಶಾಂಕ್ ಜಿಂದಾಲ್ ಆಸ್ಪತ್ರೆಯಲ್ಲಿಮ ಇರಲಿಲ್ಲ. ಮಾಹಿತಿ ತಿಳಿದ ಬಳಿಕ ವೈದ್ಯ ಜಿಂದಾಲ್, ಸುನಿಲ್ಗೆ ಚಿಕಿತ್ಸೆ ನೀಡಿದ್ದಾರೆ. ಆದರೆ, ಮಂಗಳವಾರ ಮುಂಜಾನೆ 7.30ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್)