ನ್ಯೂಸ್

ವೈದ್ಯರಿಗೆ ವರ್ಷಾಂತ್ಯದವರೆಗೂ ವಿಮಾನದಲ್ಲಿ ರಿಯಾಯಿತಿ ನೀಡಿದ ಇಂಡಿಗೋ

suchetana

ನವದೆಹಲಿ: ಕರೊನಾ ವೈರಸ್‌ನ ಈ ಭೀಕರ ಸಮಯದಲ್ಲಿ ತಮ್ಮ ಕುಟುಂಬಸ್ಥರನ್ನೂ ದೂರ ಇರಿಸಿ, ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಮತ್ತು ನರ್ಸ್‌ಗಳಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ವಿಮಾನ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ.

ಇಂಡಿಗೊ ವೆಬ್‌ಸೈಟ್ ಮೂಲಕ ಕಾಯ್ದಿರಿಸುವಾಗ ಈ ರಿಯಾಯಿತಿಯನ್ನು ನೀಡಲಾಗುವುದು, ಇದು ಜುಲೈ 01, 2020 ರಿಂದ ಡಿಸೆಂಬರ್ 31, 2020 ರವರೆಗೆ ಅನ್ವಯವಾಗಲಿದೆ" ಎಂದು ಸಂಸ್ಥೆ ಹೇಳಿದೆ.

ವೈದ್ಯರು ಮತ್ತು ನರ್ಸ್‌ಗಳು ವಿಮಾನಯಾನದ ವೇಳೆ ತಾವು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಗುರುತಿನ ಚೀಟಿ ತೋರಿಸಿದರೆ ಸಾಕು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೋನಾ ವೈರಸ್ ಲಾಕ್ ಡೌನ್ ನಂತರ ಮೇ 25 ರಿಂದ ದೇಶೀಯ ವಿಮಾನಯಾನ ಆರಂಭಿಸಿದೆ.