Sneeze: ಸಾಮಾನ್ಯವಾಗಿ ಜಗತ್ತಿನ ಎಲ್ಲ ಪ್ರಾಣಿಗಳಿಗೆ ನಿದ್ದೆ ಅವಶ್ಯಕ. ಧೀರ್ಘ ನಿದ್ದೆ ಮಾಡಿದರೆ ನಮ್ಮ ದೇಹ ದಣಿದಿದೆ ಎಂಧರ್ಥ. ಮುನುಷ್ಯ ಸಾಕಷ್ಟು ನಿದ್ದೆ ಮಾಡಿದ ಬಳಿಕ ದೇಹ ಆಹ್ಲಾದಕಾರ ಎನಿಸುತ್ತದೆ. ಹಾಗೆಯೇ ಗಾಢನಿದ್ದೆಯಲ್ಲಿದ್ದಾಗ ಸಾಮಾನ್ಯವಾಗಿ ಸೀನುವುದಿಲ್ಲ ಎಂಬವುದನ್ನು ಗಮನಿಸಿರಬಹದು. ಹೌದಲ್ವ, ಇದಕ್ಕೆ ಕಾರಣ ಏನು ಎಂಬುವುದು ತಿಳಿಯೋಣ ಬನ್ನಿ..
ಮಕ್ಕಳಿಂದ ಹಿಡಿದು ವೃದ್ದರ ವರೆಗೆ ನಿದ್ರೆಯ ಬಗ್ಗೆ ವಿಭಿನ್ನ ಸಂಗತಿಗಳಿವೆ. ವಾಸ್ತವವಾಗಿ ನಿದ್ರೆಯು ನಮ್ಮ ಜೀವನ ಶೈಲಿ, ವಯಸ್ಸು ಮತ್ತು ವೈದ್ಯಕೀಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ತಜ್ಞರ ಪ್ರಕಾರ, ನವಜಾತ ಶಿಶುವಿಗೆ 14 ರಿಂದ 17 ಗಂಟೆಗಳ ನಿದ್ರೆ ಬೇಕು. 4 ರಿಂದ 11 ತಿಂಗಳ ವಯಸ್ಸಿನವರು ದಿನಕ್ಕೆ 12-15 ಗಂಟೆಗಳ ಕಾಲ ಮಲಗಬೇಕು. 1 ರಿಂದ 2 ವರ್ಷದ ಮಕ್ಕಳು ಕನಿಷ್ಠ 11 ರಿಂದ 14 ಗಂಟೆಗಳ ಕಾಲ ನಿದ್ರಿಸಬೇಕು. ಇದಲ್ಲದೆ, 3 ರಿಂದ 5 ವರ್ಷದ ಮಕ್ಕಳು 10 ರಿಂದ 13 ಗಂಟೆಗಳ ಕಾಲ, 6 ರಿಂದ 12 ವರ್ಷದ ಮಕ್ಕಳು 9-12 ಗಂಟೆಗಳ ಕಾಲ, 13 ರಿಂದ 18 ವರ್ಷದ ಮಕ್ಕಳು 8 ರಿಂದ 10 ಗಂಟೆಗಳ ಕಾಲ, 18 ರಿಂದ 60 ವರ್ಷದ ವಯಸ್ಕರು ಕನಿಷ್ಠ 7 ರಿಂದ 9 ಗಂಟೆಗಳ ಕಾಲ ನಿದ್ರಿಸಬೇಕು. ಹಾಗಯೇ, 61 ವರ್ಷಕ್ಕಿಂತ ಮೇಲ್ಪಟ್ಟ ಜನರು 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು ಎಂದು ಹೇಳುತ್ತಾರೆ. ಹೀಗೆ ನಿದ್ದೆ ಎಲ್ಲರಿಗೂ ಎಲ್ಲ ವಯಸ್ಸಿನಲ್ಲಿ ಉತ್ತಮ ನಿದ್ದೆ ಅವಶ್ಯಕ.
ಸಾಮಾನ್ಯ ಸಮಯದಲ್ಲಿ ಮತ್ತು ರೋಗ ಪೀಡಿತರಾದ ಸಂದರ್ಭದಲ್ಲಿ ಕೆಮ್ಮು ಮತ್ತು ಸೀನುಗಳು ಬರುವುದಿಲ್ಲ. ಆದರೆ. ನಿದ್ದೆಯ ಸಂದರ್ಭದಲ್ಲಿ ಮಾತ್ರ ಕೆಮ್ಮು, ಸೀನುಗಳು ನಮ್ಮ ಬಳಿ ಸುಳಿಯುದಿಲ್ಲ ಎಂಬುದು ಗೊತ್ತೆ? ಹೌದು, ಅದಕ್ಕೆ ಕಾರಣ, ಒಬ್ಬ ವ್ಯಕ್ತಿಯು ನಿದ್ರಿಸುವಾಗ ಅವನ ದೇಹದ ಅಧಿಕ ಭಾಗಗಳು ವಿಶ್ರಾಂತಿ ಪಡೆಯುತ್ತವೆ. ಹೀಗಾಗಿ, ನಾವು ನಿದ್ದೆ ಮಾಡುವಾಗ ಕೆಮ್ಮಲ್ಲ ಮತ್ತು ಸೀನಲ್ಲ ಎಂದು ತಜ್ಞರು ಹೇಳುತ್ತಾರೆ. ಕೆಮ್ಮಲು ಮತ್ತು ಸೀನಲು ಸಹಾಯ ಮಾಡುವ ನರಗಳು ಶಾಂತಾ ಸ್ಥಿತಿಯಲ್ಲಿರುತ್ತವೆ. ಅದಗ್ಯೂ, ನಿದ್ರಿಸುವಾಗ ಸಲ್ಪ ಸೀನುವಿಕೆ ಇರಬಹುದು. ಆದರೆ, ಗಾಢ ನಿದ್ದೆಯಲ್ಲಿ ಸೀನುವಿಕೆ ಅಸಾಧ್ಯ ಎನ್ನುತ್ತಾರೆ ತಜ್ಞರು. ಆದರೆ, ಕೆಲವೊಮ್ಮೆ ಅಜಿರ್ಣ ಮತ್ತು ಅನರೋಗಕ್ಕೆ ತುತ್ತಾದಗಾ ಸೀನು ಬುರತ್ತದೆ.(ಏಜೆನ್ಸೀಸ್)