ನ್ಯೂಸ್

ನಟ ಅಜಿತ್ ಆ ಸ್ಮಾರಕಕ್ಕೆ ಮಂಡಿಯೂರಿ, ಪಾದಕ್ಕೆ ಮುತ್ತಿಟ್ಟು, ಕಣ್ಣೀರು ಹಾಕಿದ್ದೇಕೆ ಗೊತ್ತಾ? Viral Post

Viral Post: ತಮಿಳು ನಟ ಅಜಿತ್ ಕುಮಾರ್ ಫಾರ್ಮುಲಾ 1 ದಿಗ್ಗಜ ಐರ್ಟನ್ ಸೆನ್ನಾ ಅವರ ಸ್ಮಾರಕಕ್ಕೆ ಮಂಡಿಯೂರಿ ಗೌರವ ಸಲ್ಲಿಸಿ, ಪಾದಕ್ಕೆ ಮುತ್ತಿಟ್ಟ ಭಾವನಾತ್ಮಕ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ.

ಅಜಿತ್ ರೇಸಿಂಗ್ ತಂಡದ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಒಂದು ಸ್ಮಾರಕದ ಮುಂದೆ ಮಂಡಿಯೂರಿ ಗೌರವ ಸಲ್ಲಿಸಿ, ಪಾದಕ್ಕೆ ಮುತ್ತಿಡುತ್ತಾರೆ. ಈ ಸ್ಮಾರಕ ಇಮೋಲಾ ಸರ್ಕ್ಯೂಟ್‌ನಲ್ಲಿ ನಡೆದ ರೇಸ್‌ನಲ್ಲಿ ಮೃತಪಟ್ಟ, 3 ಬಾರಿ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಆದ ಬ್ರೆಜಿಲ್‌ನ ಐರ್ಟನ್ ಸೆನ್ನಾ ಅವರ ಸ್ಮಾರಕ. ಇಮೋಲಾ ರೇಸ್ ಟ್ರ್ಯಾಕ್‌ನಲ್ಲಿ ದುರಂತ ಅಪಘಾತದಲ್ಲಿ ನಿಧನರಾಗಿದ್ದರು.

ಅವರ ಗೌರವಾರ್ಥವಾಗಿ, ಆ ಸ್ಥಳದಲ್ಲಿ ಅವರ ಒಂದು ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಅಭಿಮಾನಿಗಳು ಮತ್ತು ರೇಸರ್‌ಗಳಿಗೆ ಸ್ಮರಣಾರ್ಥ ಸ್ಥಳವಾಗಿ ಕಾರ್ಯನಿರ್ವಹಿಸುತ್ತಿದೆ.

ನಟ ಅಜಿತ್ ಕುಮಾರ್ ಆ ಸ್ಥಳಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ಭಾವುಕರಾಗಿ ಸೆನ್ನಾ ಅವರ ಪ್ರತಿಮೆಯ ಮುಂದೆ ಮಂಡಿಯೂರಿ ಅದರ ಪಾದಗಳಿಗೆ ಮುತ್ತಿಟ್ಟರು, ಇದು ಅವರ ಆಳವಾದ ಮೆಚ್ಚುಗೆಯನ್ನು ಸೂಚಿಸುತ್ತದೆ. ಭಕ್ತಿಯಿಂದ ಅಜಿತ್​​ ತಮ್ಮ ರೇಸಿಂಗ್ ಹೆಲ್ಕೆಟ್ಅನ್ನು ಪ್ರತಿಮೆಯ ಕೆಳಗೆ ಇಟ್ಟು ಆಶೀರ್ವಾದವನ್ನು ಪಡೆದು ಗೌರವ ಸಲ್ಲಿಸಿದರು. (ಏಜೆನ್ಸೀಸ್​)