ನಿಮಗೆ ತಿಳಿಯದೇ ನಿಮ್ಮ PAN Card ಎಲ್ಲಿ ಬಳಸಲಾಗುತ್ತಿದೆ ಗೊತ್ತೇ? ಇದೀಗ ಒಂದೇ ನಿಮಿಷದಲ್ಲಿ ತಿಳಿಯಿರಿ! 
ನ್ಯೂಸ್

ನಿಮಗೆ ತಿಳಿಯದೇ ನಿಮ್ಮ PAN Card ಎಲ್ಲಿ ಬಳಸಲಾಗುತ್ತಿದೆ ಗೊತ್ತೇ? ಇದೀಗ ಒಂದೇ ನಿಮಿಷದಲ್ಲಿ ತಿಳಿಯಿರಿ!

ಬೆಂಗಳೂರು: ಇಂದಿನ ಡಿಜಿಟಲ್​ ಯುಗದಲ್ಲಿ ಪ್ಯಾನ್ ಕಾರ್ಡ್(PAN Card)ಸಂಖ್ಯೆಯೇ ಮಹತ್ವ ಪಡೆದಿದೆ. ಅಲ್ಲದೆ, ಸಾಲ, ಕ್ರೆಡಿಟ್ ಕಾರ್ಡ್ ಅಥವಾ ಹೂಡಿಕೆಯಂತಹ ಯಾವುದೇ ಹಣಕಾಸಿನ ವಹಿವಾಟಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಆದರೆ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಎಲ್ಲಿ ಬಳಸಲಾಗುತ್ತಿದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಲಾಭ ಯಾರಾದರೂ ಪಡೆಯುತ್ತಿದ್ದಾರೆಯೇ ಎಂಬುದು ತಿಳಿಯೋಣ..
ಅನೇಕ ಜನರು ಸಾಮಾನ್ಯವಾಗಿ ಬ್ಯಾಂಕ್​ ಹಾಗೂ ಇತರೆ ಸ್ಥಳಗಳಲ್ಲಿ ಫಾರ್ಮ್​​(ಆನ್​ಲೈನ್​ ಅಥವಾ ಆಫ್​ಲೈನ್​) ತುಂಬುವ ವೇಳೆ ತಮ್ಮ ಪ್ಯಾನ್​ ಸಂಖ್ಯೆ ಯನ್ನು ಕೊಟ್ಟಿರುತ್ತಾರೆ. ಈ ವೇಳೆ ಈ ಮಾಹಿತಿಯು ತಪ್ಪು ಕೈಗಳಿಗೆ ಬಿದ್ದರೆ, ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಯಾರಾದರೂ ನಿಮ್ಮ ಹೆಸರಿನಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು, ಕ್ರೆಡಿಟ್ ಕಾರ್ಡ್ ನೀಡಬಹುದು ಅಥವಾ ನಿಮ್ಮ ಹೆಸರು ವಂಚನೆಯ ವಹಿವಾಟಿನಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿ, ನಿಮ್ಮ ಪ್ಯಾನ್ ಕಾರ್ಡ್ ಇತಿಹಾಸವನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಬಹಳ ಮುಖ್ಯವಾಗಿದೆ.

ಪ್ಯಾನ್​ ಎಲ್ಲಿ ಬಳಕೆಯಾಗಿದೆ ಎಂಬುದು ಒಂದೇ ನಿಮಿಷದಲ್ಲಿ ಚೆಕ್​ ಮಾಡಿ

ನಿಮ್ಮ ಪ್ಯಾನ್ ಸಂಖ್ಯೆ ಎಲ್ಲಿ ಬಳಕೆ ಆಗಿದೆ ಎಂಬುದು ಪರಿಶೀಲನೆ ಮಾಡಲು ಬ್ಯಾಂಕ್​ ಅಥವಾ ಏಜೆಂಟ್​ ಗಳ ಹತ್ತಿರ ಭೇಟಿ ನೀಡುವ ಅವಶ್ಯಕತೆ ಇಲ್ಲ. ಇದನ್ನು ನಿಮ್ಮ ಸ್ಮಾರ್ಟ್​ಫೋನ್ನಲ್ಲಿಯೇ ಚೆಕ್​ ಮಾಡಿಕೊಳ್ಳಬಹುದು. ಹೌದು, CIBIL, Experian, ಅಥವಾ Equifax ನಂತಹ ಕ್ರೆಡಿಟ್ ಬ್ಯೂರೋದ ವೆಬ್‌ಸೈಟ್‌ಗೆ ಭೇಟಿ ನೀಡಿ.
ಈ ವೆಬ್​ಸೈಟ್​ ಓಪನ್ ಆದ ಬಳಿಕ ಅಲ್ಲಿ ನಿಮ್ಮ ಕ್ರೆಡಿಟ್ ವರದಿ ಅಥವಾ ಉಚಿತ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸುವ ಆಯ್ಕೆಯನ್ನು ನೀವು ಕಾಣಬಹುದು. ಇಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಪ್ಯಾನ್ ಸಂಖ್ಯೆ ಸೇರಿ ಕೆಲ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಬೇಕು. ಭರ್ತಿಯಾದ ಕೆಲವೇ ಸೆಕೆಂಡ್​ಗಳಲ್ಲಿ ನಿಮ್ಮ ಹೆಸರಿನಲ್ಲಿ ಯಾವ ಸಾಲಗಳು, ಕ್ರೆಡಿಟ್ ಕಾರ್ಡ್‌ಗಳು ಅಥವಾ ಇತರ ಹಣಕಾಸು ಖಾತೆಗಳಿವೆ ಎಂಬುದನ್ನು ನೀವು ನೋಡಲು ಸಾಧ್ಯವಾಗುತ್ತದೆ.
ನೀವು ಎಂದಿಗೂ ತೆಗೆದುಕೊಳ್ಳದ ಸಾಲ ಅಥವಾ ಕಾರ್ಡ್ ಅನ್ನು ನೀವು ನೋಡಿದರೆ, ನಿಮ್ಮ ಪ್ಯಾನ್ ಅನ್ನು ಯಾರೋ ದುರುಪಯೋಗಪಡಿಸಿಕೊಂಡಿರಬಹುದು.
ದುರುಪಯೋಗ ಆದ್ರೆ ಏನು ಮಾಡಬೇಕು?
ಸಂಬಂಧಿತ ಬ್ಯಾಂಕ್ ಅಥವಾ ಹಣಕಾಸು ಕಂಪನಿಯನ್ನು ಸಂಪರ್ಕಿಸಿ ಮತ್ತು ನೀವು ಅಂತಹ ಯಾವುದೇ ಸಾಲವನ್ನು ಪಡೆದಿಲ್ಲ ಎಂದು ತಿಳಿಸಿ. ಅಗತ್ಯವಿದ್ದರೆ, ಪೊಲೀಸರಿಗೆ FIR ಅಥವಾ ಸೈಬರ್ ಅಪರಾಧ ವರದಿಯನ್ನು ಸಲ್ಲಿಸಿ(ಏಜೆನ್ಸೀಸ್​).