ನ್ಯೂಸ್

ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಅಗ್ರ 10 ದೇಶಗಳ ಪೈಕಿ ಭಾರತ ಯಾವ ಸ್ಥಾನ ಪಡೆದಿದೆ ಗೊತ್ತಾ?

ನವದೆಹಲಿ: ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಪ್ರಮುಖ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ ಎಂದು ಆಹಾರ ಕೃಷಿ ಸಂಸ್ಥೆ ವರದಿ ತಿಳಿಸಿದೆ. ಭಾರತವು 2010 ರಿಂದ 2020 ರವರೆಗೆ ವಾರ್ಷಿಕವಾಗಿ 2,66,000 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸೋಮವಾರ ಬಿಡುಗಡೆಯಾದ ವರದಿ ಪ್ರಕಾರ, ಚೀನಾವು 1,937,000 ಹೆಕ್ಟೇರ್‌ಗಳ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಪ್ರಥಮ ಸ್ಥಾನದಲ್ಲಿದೆ. 4,46,000 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಹೊಂದುವ ಮೂಲಕ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಭಾರತ ಮೂರನೇ ಸ್ಥಾನದಲ್ಲಿದೆ. ಟಾಪ್ 10ರ ಪಟ್ಟಿಯಲ್ಲಿರುವ ಇತರ ದೇಶಗಳಲ್ಲಿ ಚಿಲಿ, ವಿಯೆಟ್ನಾಂ, ಟರ್ಕಿ, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಇಟಲಿ ಮತ್ತು ರೊಮೇನಿಯಾ ಸೇರಿವೆ.

ನವೀನ ವಿಧಾನಗಳ ಮೂಲಕ ಕೃಷಿ ಅರಣ್ಯವನ್ನು ವಿಸ್ತರಿಸುವಲ್ಲಿನ ಪ್ರಯತ್ನಗಳಿಗಾಗಿ ಯುಎನ್​ ಸಂಸ್ಥೆ ಭಾರತವನ್ನು ಶ್ಲಾಘಿಸಿದೆ. ಇದು ದೇಶದಲ್ಲಿ ಉತ್ತಮ-ಬೆಂಬಲಿತ ಕೃಷಿ ಅರಣ್ಯವನ್ನು ಗುರಿಯಾಗಿಟ್ಟುಕೊಂಡು ಹೊಸ ರಾಷ್ಟ್ರೀಯ ನೀತಿಯ ಅಭಿವೃದ್ಧಿಯನ್ನು ಒಳಗೊಂಡಿದೆ.  ಕೆಲವು ದೇಶಗಳಲ್ಲಿ ಅರಣ್ಯನಾಶವಾದ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ಹವಾಮಾನ ಬದಲಾವಣೆ ಕಾಳ್ಗಿಚ್ಚಿನಂತಹ ಮತ್ತು ಪ್ರಾಕೃತಿಕ ವಿಕೋಪಗಳು ಅರಣ್ಯ ನಾಶಕ್ಕೆ ಕಾರಣ ಎಂದು ಎಫ್​ಎಒ ಹೇಳಿದೆ.