Stickers: ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಖರೀದಿಸುವಾಗ ಹಣ್ಣಿನ ಮೇಲೆ ಹಾಕಿರುವ ಸ್ಟೀಕರ್ಸ್ ನೋಡಿರುತ್ತೇವೆ, ಆದರೆ, ಅದು ಏನು ಎಂಬುವುದನ್ನು ಬಗ್ಗೆ ತಿಳಿಯುವ ಗೋಜಿಗೆ ಹೋಗುವುದಿಲ್ಲ. ಸ್ಟೀಕರ್ಸ್ ಏಕೆ ಪ್ರತಿ ಹಣ್ಣಿನ ಮೇಲೆ ಹಚ್ಚಿರುತ್ತಾರೆ ಎಂಬುವುದನ್ನು ತಿಳಿಯೋಣ ಬನ್ನಿ..
ಮಾರುಕಟ್ಟೆಯಲ್ಲಿ ಖರೀದಿಸುವ ಪ್ರತಿ ಹಣ್ಣಿನ ಮೇಲೆ ಸ್ಟೀಕರ್ ಲೇಬಲ್ಗಳನ್ನು ಹಾಕಿರುತ್ತಾರೆ. ಅದನ್ನು ಕಿತ್ತು ಬಿಸಾಕಿ ಹಣ್ಣು ತಿನ್ನುವುದೇ ನಾವು ಎಲ್ಲರೂ ಮಾಡುವ ಕೆಲಸ. ನೋಡಿದವರು ಅದನ್ನು ಹಣ್ಣಿನ ಕಂಪನಿ ಹೆಸರು ಎಂದು ಹೇಳುತ್ತಾರೆ. ಇದನ್ನು ಬಹಳಷ್ಟು ಜನರು ನಂಬುತ್ತಾರೆ. ಇನ್ನುಮುಂದೆ ಹಣ್ಣನ್ನು ಖರೀದಿ ಮಾಡುವಾಗ ಅಥವಾ ತಿನ್ನುವ ಮೊದಲು ಅದರ ಮೇಲಿನ ಸ್ಟೀಕರ್ ಅನ್ನು ಖಂಡಿತ ಗಮನಿಸಿ ಹಣ್ಣಿನ ಮಾಹಿತಿ ಪಡೆಯಿರಿ.
ಹಣ್ಣುಗಳ ಮೇಲೆ ಹಾಕುವ ಸ್ಟಿಕ್ಕರ್‌ಗಳ ಮೇಲೆ ಕೋಡ್ ಬರೆಯಲಾಗಿರುತ್ತದೆ. ಈ ಸ್ಟಿಕ್ಕರ್‌ಗಳು ಬೇರೆ ಬೇರೆ ಕಂಪನಿಗಳದ್ದಾಗಿರಬಹುದು ಎಂದು ಎಲ್ಲರು ಭಾವಿಸುತ್ತೇವೆ. ಕಂಪನಿಗಳು ತಮ್ಮ ಪ್ರಚಾರಕ್ಕಾಗಿ ಈ ಹಣ್ಣುಗಳ ಮೇಲೆ ಸ್ಟಿಕ್ಕರ್‌ಗಳನ್ನು ಹಾಕಬಹುದು. ಆದರೆ ಅದು ಹಾಗಲ್ಲ. ವಾಸ್ತವವಾಗಿ, ಈ ಸ್ಟಿಕ್ಕರ್‌ಗಳಲ್ಲಿ ವಿಶೇಷ ಕೋಡ್‌ಗಳನ್ನು ಬರೆಯಲಾಗಿದೆ, ಇದು ಹಣ್ಣುಗಳನ್ನು ಬೆಳೆಯುವ ಗುಣಮಟ್ಟ ಮತ್ತು ಪ್ರಕ್ರಿಯೆಯ ಬಗ್ಗೆ ನಮಗೆ ತಿಳಿಸುತ್ತದೆ.
ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯದಿಂದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು? ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇದನ್ನೂ ಓದಿ:ಮನೆಗಳ ಮೇಲೆ ಜೆಟ್ ವಿಮಾನ ಪತನ; ಭಾರಿ ಪ್ರಮಾಣದ ಬೆಂಕಿ: ಮಗು ಸೇರಿ 6 ಪ್ರಯಾಣಿಕರು ಬಲಿ! | Jet plane crashes