Flooded Street: ಮಳೆಗಾಲ ಬಂತೆಂದರೆ ಸಾಕು ಎಲ್ಲೆಲ್ಲಿಯೂ ಮಳೆಯಿಂದ ಹಾನಿಗೊಳಗಾಗ ಅನೇಕ ವೈರಲ್ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿರುತ್ತೇವೆ. ಆದರೆ ಇದೀಗ ಇಂತಹದ್ದೇ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅದೇನೆಂದರೆ, ಮಳೆಯಿಂದ ರಸ್ತೆಯಲ್ಲೆಲ್ಲಾ ನೀರು ತುಂಬಿ ಪ್ರವಾಹದಂತಾದ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿ ಮ್ಯಾನ್‌ಹೋಲ್‌ನಿಂದ ಎದ್ದು ಬಂದು ಗೊರಿಲ್ಲಾ ರೀತಿ ವರ್ತಿಸಿದ ಘಟನೆ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ದೆಹಲಿ-ಶ್ರೀನಗರ ಇಂಡಿಗೋ ವಿಮಾನದಲ್ಲಿ ಪ್ರಕ್ಷುಬ್ಧತೆ; ವಾಯುಪ್ರದೇಶದೊಳಗೆ ಪ್ರವೇಶ ನಿರಾಕರಿಸಿದ ಪಾಕ್ | Indigo-flight
ಇಂಟರ್ನೆಟ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಸೆರೆಹಿಡಿದಿದ್ದು, ಮಳೆಯಿಂದ ಪ್ರವಾಹದಂತಾದ ರಸ್ತೆಯ ಮಧ್ಯದಲ್ಲಿರುವ ಮ್ಯಾನ್‌ಹೋಲ್‌ನಿಂದ ವ್ಯಕ್ತಿಯೊಬ್ಬ ಹೊರ ಬಂದು, ಇದ್ದಕ್ಕಿದ್ದಂತೆ ಗೊರಿಲ್ಲಾದ ರೀತಿಯಲ್ಲಿ ತನ್ನ ಮುಷ್ಟಿಯಿಂದ ಎದೆಯನ್ನು ಬಡಿಯುತ್ತಾ ಪ್ರಾಣಿಯ ರೀತಿಯಲ್ಲಿ ವರ್ತಿಸುತ್ತಾನೆ.
ಇಲ್ಲಿದೆ ವಿಡಿಯೋ
ಈ ವಿಡಿಯೋದಲ್ಲಿ ಪಾದಚಾರಿಗಳು ಹತ್ತಿರದ ಅಂಗಡಿಯ ಕೆಳಗೆ ಮಳೆಯಿಂದ ಒದ್ದೆಯಾಗಿ ಆಶ್ರಯ ಪಡೆಯಲು ನಿಂತಿರುತ್ತಾರೆ. ಇದ್ದಕ್ಕಿದ್ದಂತೆ ಅಪರಿಚಿತ ವ್ಯಕ್ತಿಯೊಬ್ಬ ಮ್ಯಾನ್‌ಹೋಲ್‌ನಿಂದ ಬಂದು ಗೊರಿಲ್ಲಾ ತರಹದ ಪ್ರದರ್ಶನ ನೀಡುತ್ತಾನೆ.
ಈ ವಿಚಿತ್ರ ವರ್ತನೆಗೆ ನಿಖರವಾಗಿ ಕಾರಣವೇನು? ಅವರು ರೀಲ್ಸ್ಗಾಗಿ ಹೀಗೆ ಮಾಡಿದರೂ, ತೊಂದರೆಗೊಳಗಾಗಿದ್ದರೋ ಅಥವಾ ಪ್ರವಾಹದ ನಡುವೆ ಮ್ಯಾನ್‌ಹೋಲ್‌ನಿಂದ ಸುರಕ್ಷಿತವಾಗಿ ಹೊರಬರಲು ಸಂತೋಷಪಟ್ಟಿದ್ದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಗೊಂದಲದ ಹೊರತಾಗಿಯೂ, ಈ ವಿಡಿಯೋ ಸುಮಾರು 5.8 ಮಿಲಿಯನ್ ವೀಕ್ಷಣೆಗಳು, 77,000 ಲೈಕ್‌ಗಳು ಮತ್ತು 300+ ಕಾಮೆಂಟ್‌ಗಳನ್ನು ಗಳಿಸಿದೆ. (ಏಜೆನ್ಸೀಸ್)