Second-Hand Clothes: ಹಣವನ್ನು ಉಳಿಸಲು ಮಿತವ್ಯಯವು ಇಂದಿನ ಜನರ ಪ್ರವೃತ್ತಿಯಾಗಿದೆ, ಇದು ಜನರು ಹೊಸ, ಬ್ರಾಂಡೆಡ್ ಬಟ್ಟೆಗಳಿಗೆ ಖರ್ಚು ಮಾಡುವುದನ್ನು ತಪ್ಪಿಸಲು ಸಹಕರಿಸುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಸೆಕೆಂಡ್ ಹ್ಯಾಂಡ್ ವಸ್ತುಗಳ ಅಂಗಡಿಗಳು ಸಹ ಸಾಕಷ್ಟಾಗಿವೆ. ಇಂತಹ ಮಾರುಕಟ್ಟೆಗಳಲ್ಲಿ ನೀವು ಬಟ್ಟೆ, ಎಲೆಕ್ಟ್ರಾನಿಕ್ಸ್ ಮತ್ತು ಇತರ ಅನೇಕ ಅಗತ್ಯ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದಾಗಿದೆ. ಆದರೆ ಈ ರೀತಿಯ ವಸ್ತುಗಳನ್ನು ನೀವು ಹೆಚ್ಚು ಬಳಸಿದರೆ ಅದರಿಂದ ನಿಮಗೆ ಕೆಟ್ಟ ಪರಿಣಾಮ ಬೀರಬಹುದು.
ಅಂದಹಾಗೆ ಇದೇ ರೀತಿ ಒಗೆಯದ ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಧರಿಸಿದ ನಂತರ ತೀವ್ರವಾದ ಚರ್ಮದ ಸೋಂಕು ಬರಲು ಕಾರಣವಾಗಿದೆ ಎಂದು ಯುವಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:RCB-CSK ಪಂದ್ಯದ ವೇಳೆ ಎರಡು ವಿಐಪಿ ಕುಟುಂಬಗಳು ಕಿತ್ತಾಟ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಏನಿದು ಜಗಳ?
ವೈರಲ್ ಆದ ಈ ವಿಡಿಯೋದಲ್ಲಿ, ಆ ಯುವಕ ತನ್ನ ಕಥೆಯನ್ನು ಹಂಚಿಕೊಂಡಿದ್ದು,ಅವನ ಮುಖದ ಸ್ಥಿತಿಯನ್ನು ಬಹಿರಂಗಪಡಿಸಿದನು, ಅದು ಅನೇಕರನ್ನು ಬೆಚ್ಚಿಬೀಳಿಸಿದೆ.ಅವನು ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಖರೀದಿಸಿ ತೊಳೆಯದೆ ಧರಿಸಿದ್ದನು. ಸ್ವಲ್ಪ ಸಮಯದ ನಂತರ, ಅವನ ಮುಖದ ಮೇಲೆ ತೀವ್ರವಾದ ತುರಿಕೆ ಪ್ರಾರಂಭವಾಯಿತು. ನಂತರ ಮುಖದ ಮೇಲೆ ದೊಡ್ಡ ಹುಣ್ಣುಗಳು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾನೆ.
ವೈರಲ್ ಆದ ವಿಡಿಯೋ ನೋಡಿದ ನಂತರ, ನ್ಯೂಯಾರ್ಕ್‌ನ ಚರ್ಮರೋಗ ತಜ್ಞ ಡಾ. ಚಾರ್ಲ್ಸ್ ಪೂಜಾ, ಮಾರುಕಟ್ಟೆಯಿಂದ ಬಟ್ಟೆಗಳನ್ನು ಖರೀದಿಸಿದ ನಂತರ ಯಾವಾಗಲೂ ತೊಳೆಯಬೇಕು ಎಂದು ಎಚ್ಚರಿಸಿದರು, ವಿಶೇಷವಾಗಿ ಸೆಕೆಂಡ್ ಹ್ಯಾಂಡ್. ಅಂತಹ ಬಟ್ಟೆಗಳನ್ನು ಹೆಚ್ಚಾಗಿ ಚರ್ಮದ ಮೇಲೆ ಪರಿಣಾಮ ಬೀರುವ ಬಲವಾದ ರಾಸಾಯನಿಕಗಳಿಂದ ಸಂಸ್ಕರಿಸಲಾಗುತ್ತದೆ. ತೊಳೆಯದ ಬಟ್ಟೆಗಳನ್ನು ಧರಿಸುವುದರಿಂದ ಸೋಂಕು ಮಾತ್ರವಲ್ಲದೆ ರಿಂಗ್‌ವರ್ಮ್‌ನಂತಹ ಶಿಲೀಂಧ್ರಗಳ ಸೋಂಕು ಕೂಡ ಉಂಟಾಗುತ್ತದೆ. ಆದ್ದರಿಂದ, ತೊಳೆಯದ ಬಟ್ಟೆಗಳನ್ನು ಧರಿಸುವ ತಪ್ಪನ್ನು ಎಂದಿಗೂ ಮಾಡಬೇಡಿ. ನಿಮ್ಮ ಚರ್ಮವನ್ನು ರಕ್ಷಿಸಲು ಬಳಸುವ ಮೊದಲು ಯಾವಾಗಲೂ ಅವುಗಳನ್ನು ಸ್ವಚ್ಛಗೊಳಿಸಿ ಎಂದು ಹೇಳಿದ್ದಾರೆ.(ಏಜೆನ್ಸೀಸ್)