Thief: ಯುವಕನೊಬ್ಬ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿ, ಮದ್ಯದ ಅಮಲಿನಲ್ಲಿ ನಿದ್ದೆಗೆ ಅಲ್ಲೇ ಜಾರಿದ್ದನು. ಬೆಳಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರು ಮತ್ತು ಸ್ಥಳೀಯರು ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಜಾರ್ಖಂಡ್‌ನ ನೊಮುಂಡಿಯಲ್ಲಿ ನಡೆದಿದೆ.
ಪೊಲೀಸರು ಕಳ್ಳನನ್ನು ದೇವಸ್ಥಾನದಿಂದ ಕದ್ದ ವಸ್ತುಗಳ ಜೊತೆಗೆ ವಶಕ್ಕೆ ಪಡೆದಿದ್ದಾರೆ. ದೇವಸ್ಥಾನದಲ್ಲಿ ಕದ್ದ ವಸ್ತುಗಳನ್ನು ಹಿಡಿದುಕೊಂಡು ಮಲಗಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಕೊಲ್ಹಾಪುರಿ ಚಪ್ಪಲಿ ವಿವಾದ; ಪ್ರಾಡಾ ವಿರುದ್ಧದ ‘ಪಿಐಎಲ್’ ವಜಾಗೊಳಿಸಿದ ಬಾಂಬೆ ಹೈಕೋರ್ಟ್| kolhapuri chappal
ಸೋಮವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಹೆಚ್ಚು ಮದ್ಯ ಸೇವಿಸಿದ್ದಾಗಿ ಆರೋಪಿ ವೀರ್ ನಾಯಕ್ ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಕಾಳಿ ದೇವಸ್ಥಾನದ ಮುಂಭಾಗದ ಗೋಡೆಯನ್ನು ಹತ್ತಿ ಬಾಗಿಲಿನ ಬೀಗ ಮುರಿದು ದೇವಸ್ಥಾನದೊಳಗೆ ಪ್ರವೇಶಿಸಿದ್ದಾನೆ.
ಅಲಂಕಾರ ಸಾಮಗ್ರಿಗಳು, ಗಂಟೆ, ಪೂಜಾ ಥಾಲಿ ಮತ್ತು ಆಭರಣಗಳನ್ನು ದೋಚಲು ಮುಂದಾಗಿದ್ದಾನೆ. ತನ್ನ ಎಲ್ಲಾ ಚೀಲಗಳಲ್ಲಿ ಕದ್ದ ವಸ್ತುಗಳನ್ನು ತುಂಬಿಕೊಂಡು ದೇವಾಲಯದಿಂದ ಓಡಿಹೋಗಲು ಅವನು ತಯಾರಿ ನಡೆಸುತ್ತಿದ್ದಾಗ, ಕುಡಿದ ಮತ್ತಿನಲ್ಲಿ ಆತ ಅಲ್ಲೇ ನಿದ್ರೆಗೆ ಜಾರಿದ್ದಾನೆ.
ನಾಯಕ್ ಗರ್ಭಗುಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)